For Quick Alerts
  ALLOW NOTIFICATIONS  
  For Daily Alerts

  ಪ್ರೈವೇಟ್ ಜೆಟ್‌ನಲ್ಲಿ ನನ್ನನ್ನು ಹೊರಗೆ ಕರೆದೊಯ್ಯಿರಿ: ಮೋದಿಗೆ ರಾಖಿ ಬೇಡಿಕೆ

  |

  ದೇಶದಲ್ಲಿ ಕೊರೊನಾ ವೈರಸ್ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಂತೂ ಕೊರೊನಾ ತಾಂಡವ ಮಾಡುತ್ತಿದೆ. ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿರುವುದೇ ಅಲ್ಲಿ.

  ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ 3600 ದಾಟಿದೆ (ಏಪ್ರಿಲ್ 18ರ ಮಾಹಿತಿ). ಮುಂಬೈ ಒಂದರಲ್ಲೇ 2268 ಪ್ರಕರಣಗಳು ದಾಖಲಾಗಿವೆ. ಇದು ಮುಂಬೈ ವಾಸಿಗಳ ಆತಂಕಕ್ಕೆ ಕಾರಣವಾಗಿದೆ.

  ಮುಂಬೈನಲ್ಲಿ ನೆಲೆಸಿರುವ ನಟಿ ರಾಖಿ ಸಾವಂತ್ ಅಂತೂ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅದೇ ಆತಂಕದಲ್ಲಿ ಮೋದಿ ಅವರನ್ನುದ್ದೇಶಿಸಿ ವಿಡಿಯೋ ಮಾಡಿರುವ ಅವರು, ಮೋದಿ ಅವರಿಗೆ ಬೆದರಿಕೆ ರೂಪದ ಮನವಿಯನ್ನು ಮಾಡಿದ್ದಾರೆ. ರಾಖಿ ಏನು ಮನವಿ ಮಾಡಿದ್ದಾರೆ, ಮುಂದೆ ಓದಿ...

  ಮೋದೀಜಿ ನನ್ನನ್ನು ಕರೆದೊಯ್ಯಿರಿ ಪ್ಲೀಜ್

  ಮೋದೀಜಿ ನನ್ನನ್ನು ಕರೆದೊಯ್ಯಿರಿ ಪ್ಲೀಜ್

  'ನಿಮ್ಮ ಪ್ರೈವೇಟ್ ಜೆಟ್‌ನಲ್ಲೋ ಅಥವಾ ಹೆಲಿಕಾಪ್ಟರ್‌ನಲ್ಲೋ ನನ್ನನ್ನು ಮುಂಬೈ ಯಿಂದ ಹೊರಗೆ ಕರೆದುಕೊಂಡು ಹೋಗಿಬಿಡಿ ಮೋದೀಜಿ ಪ್ಲೀಜ್'' ಎಂದು ವಿಡಿಯೋನಲ್ಲಿ ಮನವಿ ಮಾಡಿದ್ದಾರೆ. ಮುಂಬೈನಲ್ಲಿ ಗ್ಯಾರೆಂಟಿ ಇನ್ನೂ ಆರು ತಿಂಗಳು ಕೊರೊನಾ ಕಡಿಮೆ ಆಗುವುದಿಲ್ಲ, ನನ್ನನ್ನು ನನ್ನ ಗಂಡ ಇರುವಲ್ಲಿಗೆ ಕರೆದುಕೊಂಡು ಹೋಗಿ ಬಿಡಿ ಪ್ಲೀಜ್ ಎಂದು ಅಂಗಲಾಚಿದ್ದಾಳೆ ರಾಖಿ.

  ''ಗುಡಿಸಿಲಿನಲ್ಲಿ ವಾಸಿಸುವವರಿಗೆ ಬುದ್ಧಿ ಇಲ್ಲ''

  ಅಪಾರ್ಟ್‌ಮೆಂಟ್‌ನಲ್ಲಿ ಇರುವವರು ಮನೆಯಲ್ಲಿಯೇ ಇದ್ದಾರೆ ಆದರೆ ಈ ಗುಡಿಸಿಲಿನಲ್ಲಿ ವಾಸಿಸುವವರಿಗೆ ಬುದ್ಧಿ ಇಲ್ಲ, ಧಾರಾವಿ ಸೇರಿದಂತೆ ಗುಡಿಸಿಲುಗಳು ಎಲ್ಲಿಲ್ಲಿವೆಯೋ ಅಲ್ಲೆಲ್ಲಾ ಜನರು ಹೊರಗೆ ಅಡ್ಡಾಡುತ್ತಿದ್ದಾರೆ. ಅವರಿಗೆ ಬುದ್ಧಿ ಬರುವುದಿಲ್ಲ, ಅವರಿಂದಾಗಿ ಕೊರೊನಾ ಹೆಚ್ಚಾಗುತ್ತಿದೆ ಎಂದು ರಾಖಿ ಬಡವರ ಮೇಲೆ ಆರೋಪ ಮಾಡಿದ್ದಾರೆ.

  ''ಈತ್ತೀಚೆಗಷ್ಟೆ ಮದುವೆಯಾಗಿದ್ದೇನೆ, ಇನ್ನೂ ಮಕ್ಕಳಿಲ್ಲ ಮೋದೀಜಿ''

  ''ಈತ್ತೀಚೆಗಷ್ಟೆ ಮದುವೆಯಾಗಿದ್ದೇನೆ, ಇನ್ನೂ ಮಕ್ಕಳಿಲ್ಲ ಮೋದೀಜಿ''

  ನಾನು ಕೆಲವು ತಿಂಗಳ ಹಿಂದಷ್ಟೆ ಮದುವೆಯಾಗಿದ್ದೀನಿ, ನನಗೆ ಇನ್ನೂ ಮಕ್ಕಳು ಸಹ ಆಗಿಲ್ಲ, ಮೋದೀಜಿ ನನ್ನನ್ನು ನನ್ನ ಗಂಡನ ಬಳಿಗೆ ಕರೆದುಕೊಂಡು ಹೋಗಿಬಿಡಿ, ನಾನು ನಿಮ್ಮನ್ನು ಬೆಂಬಲಿಸಿದ್ದೇನೆ, ನಾನು ನಿಮ್ಮ ಭಕ್ತೆ, ನನಗೆ ಸಹಾಯ ಮಾಡಿ'' ಎಂದು ಗೋಗರೆದಿದ್ದಾರೆ ರಾಖಿ.

  ಚಂದ್ರನ ಮೇಲೆ, ಮಂಗಳನ ಮೇಲೆ ಕಳಿಸಿಬಿಡಿ

  ಚಂದ್ರನ ಮೇಲೆ, ಮಂಗಳನ ಮೇಲೆ ಕಳಿಸಿಬಿಡಿ

  ನಮ್ಮ ಸಿಎಂ ಉದ್ಧವ್ ಠಾಕ್ರೆ ಬಹಳ ಸೌಮ್ಯ ಮನುಷ್ಯ, ಹೊರಗೆ ತಿರುಗುತ್ತಿರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ ರಾಖಿ, ಮೋದಿ ಅವರೆ ನೀವು ಮಂಗಳನ ಮೇಲೆ ಅಥವಾ ಚಂದ್ರನ ಮೇಲೆ ಮನೆ ಏನಾದರೂ ಕಟ್ಟಿದ್ದರೆ ನನ್ನನ್ನು ಅಲ್ಲಿಗಾದರೂ ಕಳುಹಿಸಿ ಎಂದು ದೈನ್ಯವಾಗಿ ಬೇಡಿಕೊಂಡಿದ್ದಾರೆ.

  English summary
  Actress Rakhi Sawanth request Modi to take her out of Mumbai with a private jet or Helicopter. She said people living in Dharavi don't have mind.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X