For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ರಾಮ್ ಚರಣ್: ಈ ಬಾರಿ ಸ್ಟಾರ್ ನಟನ ಜೊತೆ

  |

  ನಟ ರಾಮ್‌ ಚರಣ್ ತೇಜ ತೆಲುಗಿನ ಸ್ಟಾರ್ ನಟರಲ್ಲೊಬ್ಬರು. ರಾಜಮೌಳಿ ನಿರ್ದೇಶಿತ 'RRR' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ತಮ್ಮ ಮೌಲ್ಯ ಹೆಚ್ಚಿಸಿಕೊಂಡಿದ್ದಾರೆ ಇವರು.

  ರಾಮ್ ಚರಣ್ ತೇಜಗೆ ತೆಲುಗಿನಲ್ಲಿ ಬಹುದೊಡ್ಡ ಅಭಿಮಾನಿ ವರ್ಗ ಇದ್ದರೂ ಸಹ ಅವರು ಈ ಹಿಂದೆ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು ಆದರೆ ಅದು ಯಶಸ್ವಿಯಾಗಿರಲಿಲ್ಲ. ಹಾಗಾಗಿ ಈಗ ಮತ್ತೆ ಬಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ.

  ಈ ಹಿಂದೆ 'ಜಂಜೀರ್' ಹೆಸರಿನ ಹಿಂದಿ ಸಿನಿಮಾದಲ್ಲಿ ನಟ ರಾಮ್ ಚರಣ್ ತೇಜ ನಟಿಸಿದ್ದರು. ಆ ಸಿನಿಮಾದಲ್ಲಿ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿದ್ದರು. ದಶಕಗಳ ಹಿಂದೆ ಬಂದಿದ್ದ ಅಮಿತಾಬ್ ಬಚ್ಚನ್‌ರ 'ಜಂಜೀರ್' ಸಿನಿಮಾದ ರೀಮೇಕ್ ಆಗಿತ್ತು ಆ ಸಿನಿಮಾ. ಆದರೆ ರಾಮ್ ಚರಣ್-ಪ್ರಿಯಾಂಕಾರ 'ಜಂಜೀರ್' ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಫ್ಲಾಪ್ ಆಗಿತ್ತು.

  'ಜಂಜೀರ್' ಸಿನಿಮಾದಲ್ಲಿ ನಟಿಸಿದ್ದ ರಾಮ್ ಚರಣ್

  'ಜಂಜೀರ್' ಸಿನಿಮಾದಲ್ಲಿ ನಟಿಸಿದ್ದ ರಾಮ್ ಚರಣ್

  'ಜಂಜೀರ್' ನಂತರ ಬಾಲಿವುಡ್‌ನಿಂದ ದೂರ ಉಳಿದಿದ್ದ ರಾಮ್ ಚರಣ್ ಈಗ ಮತ್ತೆ ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಆದರೆ ಅದು ನಟನಾಗಿ ಅಲ್ಲ ಬದಲಿಗೆ ಅತಿಥಿ ನಟನಾಗಿ ಅಷ್ಟೆ. ಅದೂ ಸ್ಟಾರ್ ನಟ ಸಲ್ಮಾನ್ ಖಾನ್‌ರ ಹೊಸ ಸಿನಿಮಾದಲ್ಲಿ ರಾಮ್ ಚರಣ್ ತೇಜ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. 'RRR' ಸಿನಿಮಾದಿಂದ ರಾಮ್ ಚರಣ್‌ಗೆ ಸಿಕ್ಕಿರುವ ಖ್ಯಾತಿಯನ್ನು ಬಳಸಿಕೊಳ್ಳಲು ಸಲ್ಮಾನ್ ಖಾನ್ ಮುಂದಾಗಿದ್ದಾರೆ.

  'ಆಚಾರ್ಯ' ಸೆಟ್‌ನಲ್ಲಿ ಸಲ್ಮಾನ್ ಖಾನ್ ಶೂಟಿಂಗ್

  'ಆಚಾರ್ಯ' ಸೆಟ್‌ನಲ್ಲಿ ಸಲ್ಮಾನ್ ಖಾನ್ ಶೂಟಿಂಗ್

  ಸಲ್ಮಾನ್ ಖಾನ್ ಇದೀಗ ತಮ್ಮ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಚಿತ್ರೀಕರಣವನ್ನು ಹೈದರಾಬಾದ್ ಹೊರವಲಯದ ಬೃಹತ್ ಸೆಟ್‌ನಲ್ಲಿ ನಡೆಸಲಾಗುತ್ತಿದೆ. ಅಸಲಿಗೆ ಈ ಸೆಟ್ ರಾಮ್ ಚರಣ್ ನಿರ್ಮಿಸಿ, ನಟಿಸಿದ್ದ 'ಆಚಾರ್ಯ' ಸಿನಿಮಾಕ್ಕಾಗಿ ಹಾಕಲಾಗಿತ್ತು. ಅದೇ ಸೆಟ್‌ನಲ್ಲಿ ಸಲ್ಮಾನ್ ಖಾನ್ ಇದೀಗ ಶೂಟಿಂಗ್ ಮಾಡುತ್ತಿದ್ದಾರೆ. ಈಗ ಅದೇ ಸಿನಿಮಾದಲ್ಲಿ ರಾಮ್ ಚರಣ್ ತೇಜ ನಟಿಸಲಿದ್ದಾರೆ.

  ಅತಿಥಿ ಪಾತ್ರಕ್ಕೆ ಒಪ್ಪಿದ್ದಾರೆ ರಾಮ್ ಚರಣ್ ತೇಜ

  ಅತಿಥಿ ಪಾತ್ರಕ್ಕೆ ಒಪ್ಪಿದ್ದಾರೆ ರಾಮ್ ಚರಣ್ ತೇಜ

  'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ರಾಮ್ ಚರಣ್ ತೇಜ ನಟಿಸುವುದು ಪೂರ್ವನಿಯೋಜಿತವಾಗಿರಲಿಲ್ಲ. ಆದರೆ ಸಲ್ಮಾನ್ ಖಾನ್ ತಮ್ಮ ಸೆಟ್‌ನಲ್ಲಿ ಚಿತ್ರೀಕರಣ ಮಾಡುತ್ತಿರುವದನ್ನು ನೋಡಲೆಂದು, ಸಲ್ಮಾನ್ ಖಾನ್ ಅವರನ್ನು ಅಭಿನಂದಿಸಲಷ್ಟೆ ರಾಮ್ ಚರಣ್ ತೆರಳಿದ್ದರಂತೆ. ಆಗ ಸಲ್ಮಾನ್ ಖಾನ್‌ ಪ್ರೀತಿಯಿಂದ ಆಗ್ರಹಿಸಿದ ಕಾರಣ ರಾಮ್ ಚರಣ್ ಅತಿಥಿ ಪಾತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಸಲ್ಮಾನ್ ಸಹ ಚಿರಂಜೀವಿ ಅವರ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗಾಗಿ ರಾಮ್ ಚರಣ್ ಋಣ ತೀರಿಸಿದ್ದಾರೆ ಅಷ್ಟೆ!

  ಚಿರಂಜೀವಿ ಸಿನಿಮಾದಲ್ಲಿ ಸಲ್ಮಾನ್ ಖಾನ್

  ಚಿರಂಜೀವಿ ಸಿನಿಮಾದಲ್ಲಿ ಸಲ್ಮಾನ್ ಖಾನ್

  ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಪರಸ್ಪರ ಗಳಸ್ಯ-ಕಂಠಸ್ಯ ಸ್ನೇಹಿತರು. ಚಿರಂಜೀವಿ ನಟಿಸುತ್ತಿರುವ 'ಗಾಡ್ ಫಾದರ್' ಸಿನಿಮಾದಲ್ಲಿ ಸಲ್ಮಾನ್ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಕ್ಕಾಗಿ ಚಿರಂಜೀವಿ ಜೊತೆ ಹಾಡೊಂದಕ್ಕೆ ಸ್ಟೆಪ್ ಸಹ ಹಾಕಿದ್ದಾರೆ ಸಲ್ಮಾನ್ ಖಾನ್ ಹಾಗೂ ಅದ್ಧೂರಿ ಫೈಟ್ ದೃಶ್ಯದಲ್ಲಿ ಸಹ ಭಾಗಿಯಾಗಿದ್ದಾರೆ. ಈ ಸಿನಿಮಾ ಮಲಯಾಳಂನ ಲುಸೀಫರ್ ಸಿನಿಮಾದ ರೀಮೇಕ್ ಆಗಿದೆ. ಇನ್ನು 'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆಗೆ ಪೂಜಾ ಹೆಗ್ಡೆ ನಟಿಸುತ್ತಿದ್ದು, ಸಲ್ಮಾನ್ ರ ಆತ್ಮೀಯ ಗೆಳೆಯ ಸಾಜಿದ್ ನಾಡಿಯಾವಾಲಾ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.

  English summary
  Telugu actor Ram Charan Teja acting in Salman Khan's new movie. Ram Charan acted in Zanjeer Hindi movie few years back.
  IIFA Banner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X