For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಕಲೆಕ್ಷನ್ ಹಿಂದಿಕ್ಕಲು 'ರಾಮ್ ಸೇತು', 'ಥ್ಯಾಂಕ್ ಗಾಡ್' ಪರದಾಟ: ಯಾವ್ಯಾವ ಸಿನಿಮಾ ಗಳಿಕೆ ಹೇಗಿದೆ?

  |

  ಬಾಲಿವುಡ್‌ ಮಂದಿಗೆ ಮತ್ತೆ ಕನ್ಫ್ಯೂಸ್ ಆಗ್ಬಿಟ್ಟಿದ್ದಾರೆ. ಒಂದ್ಕಡೆ ಸ್ಯಾಂಡಲ್‌ವುಡ್‌ನ 'ಕಾಂತಾರ' ಸಿನಿಮಾ ಹಿಂದಿ ಬೆಲ್ಟ್‌ಗಳಲ್ಲಿ ಸದ್ದು ಮಾಡುತ್ತಿದೆ. ಮತ್ತೊಂದು ಕಡೆ ಅಕ್ಷಯ್ ಕುಮಾರ್ ಅಭಿನಯದ ರಾಮ್‌ ಸೇತು. ಅಜಯ್ ದೇವಗನ್ ಸಿನಿಮಾ 'ಥ್ಯಾಂಕ್ ಗಾಡ್' ರಿಲೀಸ್‌ ಆಗಿದೆ.

  ಈ ಮೂರು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿವೆ. ದೀಪಾವಳಿ ಹಬ್ಬಕ್ಕೆ ರಿಷಬ್ ಶೆಟ್ಟಿಯ 'ಕಾಂತಾರ' ಭರ್ಜರಿ ಕಲೆಕ್ಷನ್ ಮಾಡಿದೆ. ಬೆಳಕಿನ ಹಬ್ಬಕ್ಕೆ ರಿಲೀಸ್ ಆಗಿದ್ದ ಬಾಲಿವುಡ್‌ನ ಎರಡೂ ಸಿನಿಮಾಗಳೂ ಡಬಲ್ ಡಿಜಿಟ್ ಕಲೆಕ್ಷನ್ ಮಾಡಿವೆ.

  ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಗೆಲ್ಲಲು 'ಪುಷ್ಪ' ತಂತ್ರ ಬಳಸಿದ 'ಕೆಜಿಎಫ್ 2' ವಿತರಕ!ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ಕಾಂತಾರ' ಗೆಲ್ಲಲು 'ಪುಷ್ಪ' ತಂತ್ರ ಬಳಸಿದ 'ಕೆಜಿಎಫ್ 2' ವಿತರಕ!

  ಆದರೂ, ಬಾಕ್ಸಾಫೀಸ್‌ನಲ್ಲಿ ಈ ಎರಡೂ ಸಿನಿಮಾಗಳೂ 'ಕಾಂತಾರ'ವನ್ನು ಹಿಂದಕ್ಕೆ ಹಾಕಲು ಸಾಧ್ಯವಾಗಿಲ್ಲ. ಹಾಗಿದ್ರೆ, ಅಕ್ಷಯ್ ಕುಮಾರ್ ಸಿನಿಮಾ 'ರಾಮ್ ಸೇತು', ಅಜಯ್ ದೇವಗನ್ ಸಿನಿಮಾ 'ಥ್ಯಾಂಕ್ ಗಾಡ್' ಕಲೆಕ್ಷನ್ ಎಷ್ಟು? 'ಕಾಂತಾರ' ಇಲ್ಲಿವರೆಗೂ ಗಳಿಸಿದ್ದೆಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ರಾಮ್‌ ಸೇತು' ಸಿನಿಮಾ ಕಲೆಕ್ಷನ್ ಎಷ್ಟು?

  'ರಾಮ್‌ ಸೇತು' ಸಿನಿಮಾ ಕಲೆಕ್ಷನ್ ಎಷ್ಟು?

  ಬಾಲಿವುಡ್‌ ಮಂದಿಗೆ ದೀಪಾವಳಿ ಹಬ್ಬ ವಿಶೇಷ. ಬೆಳಕಿನ ಹಬ್ಬದಂದು ರಿಲೀಸ್ ಮಾಡಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಈ ಕಾರಣಕ್ಕೆ 'ರಾಮ್ ಸೇತು' ಸಿನಿಮಾ ಅಕ್ಟೋಬರ್ 25ಕ್ಕೆ ರಿಲೀಸ್ ಆಗಿತ್ತು. ಕಳೆದ ಎರಡು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ ಅದ್ಭುತವಾಗಿದ್ದು, 'ರಾಮ್‌ ಸೇತು' ಸುಮಾರು 26.65 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಮೊದಲ ದಿನ ಸುಮಾರು 15.25 ಕೋಟಿ ರೂಪಾಯಿ ಹಾಗೂ ಎರಡನೇ ದಿನ 11.40 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ.

  ಅಲ್ಲು ಅರ್ಜುನ್ ಹೆಸರಲ್ಲಿ 'ಕಾಂತಾರ' ಬಗ್ಗೆ ನಕಲಿ ಟ್ವೀಟ್: ಇನ್ನೂ ಸಿನಿಮಾ ನೋಡಿಲ್ವಾ 'ಪುಷ್ಪ'?ಅಲ್ಲು ಅರ್ಜುನ್ ಹೆಸರಲ್ಲಿ 'ಕಾಂತಾರ' ಬಗ್ಗೆ ನಕಲಿ ಟ್ವೀಟ್: ಇನ್ನೂ ಸಿನಿಮಾ ನೋಡಿಲ್ವಾ 'ಪುಷ್ಪ'?

  ಬಾಕ್ಸಾಫೀಸ್‌ನಲ್ಲಿ 'ಥ್ಯಾಂಕ್‌ ಗಾಡ್' ಸದ್ದು!

  ಬಾಕ್ಸಾಫೀಸ್‌ನಲ್ಲಿ 'ಥ್ಯಾಂಕ್‌ ಗಾಡ್' ಸದ್ದು!

  ಬೆಳಕಿನ ಹಬ್ಬಕ್ಕೇ 'ಥ್ಯಾಂಕ್ ಗಾಡ್' ಸಿನಿಮಾ ರಿಲೀಸ್ ಆಗಿತ್ತು. 'ರಾಮ್ ಸೇತು'ವಿನಂತೆ ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಡಿಸೆಂಟ್‌ ಕಲೆಕ್ಷನ್ ಮಾಡಿದೆ. ಮೊದಲ ದಿನ ಸುಮಾರು 8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ರೆ, ಎರಡನೇ ದಿನ 6 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದ ಎರಡು ದಿನಗಳ ಬಾಕ್ಸಾಫೀಸ್‌ ಕಲೆಕ್ಷನ್ ಒಟ್ಟು 14.10 ಕೋಟಿ ರೂಪಾಯಿ ಎನ್ನಲಾಗಿದೆ. ಇನ್ನು ವೀಕೆಂಡ್‌ನಲ್ಲಿ ಮತ್ತಷ್ಟು ಸದ್ದು ಮಾಡುವ ಸಾಧ್ಯತೆಯಿದೆ.

  'ಕಾಂತಾರ' ಕಲೆಕ್ಷನ್ ಮಾಡಿದ್ದೆಷ್ಟು?

  'ಕಾಂತಾರ' ಕಲೆಕ್ಷನ್ ಮಾಡಿದ್ದೆಷ್ಟು?

  ರಿಷಬ್ ಶೆಟ್ಟಿಯ 'ಕಾಂತಾರ' ಹಿಂದಿ ವರ್ಷನ್ ಕಳೆದ ಎರಡು ದಿನಗಳಲ್ಲಿ ಗಳಿಕೆಯಲ್ಲಿ ಏರಿಕೆಯಾಗಿದೆ. ಅಕ್ಟೋಬರ್ 25ರಂದು 2.35 ಕೋಟಿ ರೂ. ಗಳಿಸಿದ್ರೆ, ಅಕ್ಟೋಬರ್ 26ರಂದು 2.60 ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕ ಸಿನಿಮಾ ಬಾಕ್ಸಾಫೀಸ್‌ ಕಲೆಕ್ಷನ್ ಸುಮಾರು 29.10 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇಂದು (ಅಕ್ಟೋಬರ್ 27) ಕಾಂತಾರ 30 ಕೋಟಿ ರೂ. ಗಡಿ ದಾಟಿದ್ದು, ನಿಖರವಾದ ಕಲೆಕ್ಷನ್ ರಿಪೋರ್ಟ್ ಸಿಕ್ಕಿದ ಬಳಿಕ ಭವಿಷ್ಯದ ಲೆಕ್ಕಾಚಾರ ಸಿಗಬಹುದು.

  'ಕಾಂತಾರ' ಇದೂವರೆಗೂ ಗಳಿಸಿದ್ದೆಷ್ಟು?

  'ಕಾಂತಾರ' ಇದೂವರೆಗೂ ಗಳಿಸಿದ್ದೆಷ್ಟು?

  ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಾಡ್ತಿರೋ ಸದ್ದಿಗೆ ಎಲ್ಲಾ ಚಿತ್ರರಂಗವೂ ಕಂಗಾಲಾಗಿದೆ. ಅತೀ ಹೆಚ್ಚು ಗಳಿಕೆ ಕಂಡ ಕನ್ನಡ ಎರಡನೇ ಸಿನಿಮಾ ಅನ್ನೋ ಪಟ್ಟಿಗೆ ಸದ್ಯಕ್ಕೆ ಲಗ್ಗೆ ಇಡಲಿದೆ ಎನ್ನಲಾಗಿದೆ. ಈಗಾಗಲೇ ಈ ಸಿನಿಮಾ ಭಾರತದಲ್ಲಿ 170 ಕೋಟಿ ರೂ. ಗಳಿಸಿದ್ದು, ಓವರ್‌ ಸೀಸ್‌ನಿಂದ 18 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಓಟ್ಟು ಕಲೆಕ್ಷನ್ ಸುಮಾರು 188 ಕೋಟಿ ರೂ. ಎಂದು ಅಂದಾಜಿಲಾಗಿದೆ.

  English summary
  Ram Setu And Thank God Is Behind Box Office Collection Of Kantara, Know More,
  Thursday, October 27, 2022, 19:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X