For Quick Alerts
  ALLOW NOTIFICATIONS  
  For Daily Alerts

  ಮಾಜಿ ಸಂಸದೆ, ಹಿರಿಯ ನಟಿ ಜಯಪ್ರದ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

  |

  ಉತ್ತರ ಪ್ರದೇಶದ ರಾಂಪೂರ್ ಕೋರ್ಟ್ ಖ್ಯಾತ ನಟಿ ಜಯಪ್ರದ ಅವರಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಚುನಾವಣೆ ಸಮಯದಲ್ಲಿ ಎಲೆಕ್ಷನ್ ಕೋಡ್ ಉಲ್ಲಂಘಿಸಿದ ಕೇಸ್ ಸಂಬಂಧ ವಾರೆಂಟ್ ಜಾರಿ ಮಾಡಿ ಕೋರ್ಟ್ ನಟಿಗೆ ಶಾಕ್ ನೀಡಿದೆ. 2019ರ ಲೋಕಸಭೆ ಚುನಾವಣೆ ವೇಳೆ ಚುನಾವಣೆ ನಿಯಮಾವಳಿ ಉಲ್ಲಂಘಿಸಿದ ಕಾರಣಕ್ಕೆ ಆಕೆಯ ವಿರುದ್ಧ 2 ಕೇಸ್ ದಾಖಲಾಗಿತ್ತು.

  3 ವರ್ಷಗಳ ಹಿಂದಿನ ಕೇಸ್‌ಗಳ ವಿಚಾರಣೆಗೆ ಜಯಪ್ರದ ಸತತವಾಗಿ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಇದೇ ಕಾರಣಕ್ಕೆ ರಾಂಪೂರ್ ಕೋರ್ಟ್ ನಟಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ಮಂಗಳವಾರ ವಿಚಾರಣೆ ವೇಳೆ ಜಯಪ್ರದ ಅವರನ್ನು ಕೋರ್ಟ್‌ಗೆ ಹಾಜರಿಪಡಿಸುವಂತೆ ರಾಂಪೂರ್ ಸೂಪರಿಡೆಂಟೆಡ್ ಆಫ್ ಪೊಲೀಸರಿಗೆ ಕೋರ್ಟ್ ಆದೇಶಿಸಿದೆ ಎಂದು ವಕೀಲರಾದ ಅಮರ್‌ನಾಥ್ ತಿಳಿಸಿದ್ದಾರೆ. ಈ ಕೇಸ್‌ನ ಮುಂದಿನ ವಿಚಾರಣೆ ಜನವರಿ 9ಕ್ಕೆ ನಡೆಯಲಿದೆ.

  ಶಾರುಖ್ ಖಾನ್‌ಗೆ ಬೆಂಕಿ ಇಟ್ಟು ಕೊಲ್ಲುವೆ: ಪರಮಹಂಸ ಆಚಾರ್ಯ ಸ್ವಾಮೀಜಿಶಾರುಖ್ ಖಾನ್‌ಗೆ ಬೆಂಕಿ ಇಟ್ಟು ಕೊಲ್ಲುವೆ: ಪರಮಹಂಸ ಆಚಾರ್ಯ ಸ್ವಾಮೀಜಿ

  ಏಪ್ರಿಲ್ 18, 2019 ರಂದು, ರಾಂಪುರದ ಕಾಮ್ರೀ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಪಿಪಾರಿಯಾ ಮಿಶ್ರಾ ಗ್ರಾಮದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ವಿಡಿಯೋ ನಿಗಾ ತಂಡ ಇನ್‌ಚಾರ್ಜ್ ಕುಲ್ದೀಪ್ ಭಟ್ನಾಗರ್ ದೂರು ದಾಖಲಿಸಿದ್ದರು. ಸ್ವರ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನೂರ್‌ಪುರ ಗ್ರಾಮದಲ್ಲಿ ರಸ್ತೆ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದರಿಂದ ಸ್ಕ್ವಾಡ್ ಮೆಜಿಸ್ಟ್ರೇಟ್ ನೀರಜ್ ಕುಮಾರ್ 2019 ಏಪ್ರಿಲ್ 19 ರಂದು ಎರಡನೇ ಪ್ರಕರಣ ದಾಖಲಾಗಿತ್ತು.

  Rampur court issued A non bailable warrant to Senior Actress and BJP leader Jaya Prada

  ಈ ಹಿಂದೆ ಇದೇ ರೀತಿ ನಡವಳಿಕೆಯ ನಿಯಮಾವಳಿ ಉಲ್ಲಂಘನೆ ಪ್ರಕರಣದಲ್ಲಿ ಬಹುಜನ್ ಸಮಾಜ ಪಕ್ಷದ ಮಾಜಿ ಶಾಸಕ ಅಲಿ ಯೂಸುಫ್ ಹಾಗೂ ಕಾಂಗ್ರೆಸ್ ಮಾಜಿ ಶಾಸಕ ಸಂಜಯ್ ಕಪೂರ್‌ಗೆ ಸಹ ಇದೇ ನ್ಯಾಯಾಲಯದ ಶಿಕ್ಷೆ ವಿಧಿಸಿದ್ದು ಗಮನಾರ್ಹ. ಇನ್ನು ಆ ಚುನಾವಣೆಯಲ್ಲಿ ರಾಂಪೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಟಿ ಜಯಪ್ರದ, ಸಮಾಜವಾದಿ ಪಕ್ಷದ ಅಭ್ಯರ್ಥಿ ಅಜಂ ಖಾನ್ ಎದುರು ಸೋಲುಂಡಿದ್ದರು.

  English summary
  Rampur court issued A non bailable warrant to Senior Actress and BJP leader Jaya Prada. Jaya Prada is accused of violating the model code of conduct during the General Elections in 2019. know more.
  Thursday, December 22, 2022, 15:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X