For Quick Alerts
  ALLOW NOTIFICATIONS  
  For Daily Alerts

  'ರಾಮಾಯಣ' ಸಿನಿಮಾಗೆ ಹೃತಿಕ್ ಮತ್ತು ರಣ್ಬೀರ್ ಪಡೆಯುತ್ತಿರುವ ಸಂಭಾವನೆ ಕೇಳಿದರೆ ಅಚ್ಚರಿ ಪಡುತ್ತೀರಿ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್‌ನಲ್ಲಿ ಈಗಾಗಲೇ ರಾಮಾಯಣ ಆಧರಿಸಿ ಆದಿಪುರುಷ್ ಎನ್ನುವ ಸಿನಿಮಾ ಸೆಟ್ಟೇರಿದ್ದು, ಚಿತ್ರೀಕರಣ ಸಹ ಪ್ರಾರಂಭವಾಗಿದೆ. ಆದ್ರೆ ಈ ಸಿನಿಮಾ ಪ್ರಾರಂಭವಾಗುವ ಮೊದಲೇ ಬಾಲಿವುಡ್‌ನಲ್ಲಿ ರಾಮಾಯಣದ ಬಗ್ಗೆ ಬಿಗ್ ಬಜೆಟ್‌ನ 3ಡಿ ಸಿನಿಮಾ ಮಾಡುವುದಾಗಿ ದೊಡ್ಡ ಮಟ್ಟದ ಯೋಜನೆ ಹಾಕಿದ್ರು ನಿರ್ಮಾಪಕ ಮಧು ಮಂಟೇನಾ. ಈ ಚಿತ್ರದಲ್ಲಿ ಹೃತಿಕ್ ರೋಷನ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ವರ್ಷದಿಂದ ಸುದ್ದಿಯಾಗುತ್ತಲೇ ಇದೆ. ಹೃತಿಕ್ ರೋಷನ್ ಜೊತೆ ಪ್ರಮುಖ ಪಾತ್ರದಲ್ಲಿ ಸೌತ್ ಸ್ಟಾರ್ ಮಹೇಶ್ ಬಾಬು ನಟಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು, ಆದರೆ ಮಹೇಶ್ ಬಾಬು ಸಿನಿಮಾದಿಂದ ಔಟ್ ಆಗಿದ್ದಾರೆ ಎನ್ನುವ ಸುದ್ದಿ ಇತ್ತೀಚಿಗಷ್ಟೆ ವೈರಲ್ ಆಗಿತ್ತು.

  ಮಹೇಶ್ ಬಾಬು ಜಾಗಕ್ಕೆ ಮತ್ತೋರ್ವ ಖ್ಯಾತ ನಟ ಎಂಟ್ರಿ ಕೊಟ್ಟಿದ್ದಾರೆ. ಮತ್ಯಾರು ಅಲ್ಲ ಬಾಲಿವುಡ್ ಖ್ಯಾತ ನಟ ರಣ್ಬೀರ್ ಕಪೂರ್. ಹೃತಿಕ್ ರೋಷನ್ ಮತ್ತು ರಣ್ಬೀರ್ ಕಪೂರ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಹೃತಿಕ್ ರೋಷನ್ ರಾವಣನಾಗಿ ಕಾಣಿಸಿಕೊಂಡರೆ ರಾಮನಾಗಿ ರಣ್ಬೀರ್ ಕಪೂರ್ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಇದೀಗ 3ಡಿ ರಾಮಾಯಣದ ಬಗ್ಗೆ ಮತ್ತೊಂದು ಭರ್ಜರಿ ಸುದ್ದಿ ಹೊರಬಿದ್ದಿದೆ.

  ಚಿತ್ರದಲ್ಲಿ ಹೃತಿಕ್ ಮತ್ತು ರಣ್ಬೀರ್ ಕಪೂರ್ ಪಡೆಯುತ್ತಿರುವ ಸಂಭಾವನೆ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. 750 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಇಬ್ಬರು ಸ್ಟಾರ್ ಕಲಾವಿದರು ಭರ್ಜರಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ರಾಮನ ಪಾತ್ರ ಮಾಡುತ್ತಿರುವ ರಣ್ಬೀರ್ ಮತ್ತು ರಾವಣ ಪಾತ್ರ ಮಾಡುತ್ತಿರುವ ಹೃತಿಕ್ ರೋಷನ್ ಬರೋಬ್ಬರಿ 75 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  ಇತ್ತೀಚಿಗಷ್ಟೆ ಹೃತಿಕ್ ಮತ್ತು ರಣ್ಬೀರ್ ಇಬ್ಬರು ನಿರ್ಮಾಪಕರ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ಮಧು ಮಾಂಟೇನಾ ಜೊತೆ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಆಗಲೇ ಇಬ್ಬರೂ ಒಟ್ಟಿಗೆ ರಾಮಾಯಣ ಸಿನಿಮಾದಲ್ಲಿ ನಟಿಸುವುದು ಬಹುತೇಕ ಖಚಿತವಾಗಿದೆ.

  ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ಬ್ಯುಸಿಯಾಗಿದೆ. ಮುಂದಿನ ವರ್ಷ ಈ ಬಿಗ್ ಬಜೆಟ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಅಂದಹಾಗೆ ರಾಮಾಯಣ ಸಿನಿಮಾ ಅಂದ್ಮೇಲೆ ಸೀತೆ ಪಾತ್ರ ಮತ್ತೊಂದು ಪ್ರಮುಖ ಪಾತ್ರದಲ್ಲಿ ಒಂದು. ಈಗಾಗಲೇ ಸುದ್ದಿಯಾಗಿರುವ ಪ್ರಕಾರ ದೀಪಿಕಾ ಪಡುಕೋಣೆ ಚಿತ್ರದಲ್ಲಿ ಸೀತೆ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ದೀಪಿಕಾ ನಟಿಸುತ್ತಿಲ್ಲ ಎನ್ನಲಾಗುತ್ತಿದೆ. ಸೀತೆ ಪಾತ್ರಕ್ಕೆ ಹೊಸ ನಟಿಯ ಹುಡುಕಾಟದಲ್ಲಿದ್ದಾರೆ ಎನ್ನುವ ಮಾಹಿತಿ ಕೇಳಿಬುತ್ತಿದೆ.

  ರಾಮಾಯಣ ಸಿನಿಮಾ ಅಂದ್ಮೇಲೆ ಸಾಕಷ್ಟು ಪಾತ್ರಗಳು ಇರುತ್ತದೆ. ಹಾಗಾಗಿ ಈ ಸಿನಿಮಾದಲ್ಲಿ ಇನ್ನು ಅನೇಕ ಕಲಾವಿದರು ಬಣ್ಣಹಚ್ಚಲಿದ್ದಾರೆ. ಹೃತಿಕ್ ಮತ್ತು ರಣ್ಬೀರ್ ಜೊತೆ ಇನ್ನು ಯಾರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ದಕ್ಷಿಣ ಭಾರತದ ಕಲಾವಿದರು ಸಹ ನಟಿಸಲಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಹಾಗಾಗಿ ಯಾರೆಲ್ಲ ನಟಿಸಲಿದ್ದಾರೆ ಎಂದು ಕಾದು ನೋಡಬೇಕು.

  English summary
  Bollywood Actors Ranbir and Hrithik Be Paid 75 Cr Each For Ramayana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X