For Quick Alerts
  ALLOW NOTIFICATIONS  
  For Daily Alerts

  ರಣಬೀರ್-ಅಲಿಯಾ ಮದುವೆ ವಿದೇಶದಿಂದ ಭಾರತಕ್ಕೆ ಶಿಫ್ಟ್: ಈ ವರ್ಷ ಹಸೆಮಣೆ ಏರುವುದು ಪಕ್ಕಾ

  |

  ಬಾಲಿವುಡ್ ನ ಪ್ರೇಮ ಪಕ್ಷಿಗಳು ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ವಿಚಾರ ಆಗಾಗ ಸುದ್ದಿಯಾಗುತ್ತಿರುತ್ತೆ. ಸದ್ಯ ಕೊರೊನಾ ಲಕ್ ಡೌನ್ ನಡುವೆಯೂ ಇಬ್ಬರ ಮದುವೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಅಂದ್ಹಾಗೆ ಈ ಜೋಡಿ ಇದೇ ವರ್ಷ ವೈವಾಹಿಕ ಬದುಕಿಗೆ ಅಡಿಯಿಡಲು ನಿರ್ಧರಿಸಿದ್ದಾರೆ.

  ಈಗಾಗಲೆ ಮದುವೆ ದಿನಾಂಕ ಮತ್ತು ಸ್ಥಳ ಕೂಡ ನಿಗದಿಯಾಗಿದೆ ಎಂದು ಹೇಳಲಾಗಿತ್ತು. ಆದರೀಗ ರಣ್ಬೀರ್ ಮತ್ತು ಅಲಿಯಾ ಮದುವೆ ಸ್ಥಳವನ್ನು ಬದಲಾಯಿಸಿದ್ದಾರಂತೆ. ವಿದೇಶದಲ್ಲಿ ಮದುವೆ ಆಗುವ ಪ್ಲಾನ್ ಮಾಡಿದ್ದ ಅಲಿಯಾ-ರಣ್ಬೀರ್ ಈಗ ಮದುವೆಯನ್ನು ಭಾರತಕ್ಕೆ ಶಿಫ್ಟ್ ಮಾಡಿದ್ದಾರೆ. ಮುಂದೆ ಓದಿ..

  ಮುಂಬೈಗೆ ಶಿಫ್ಟ್ ಆದ ಅಲಿಯಾ-ರಣ್ಬೀರ್ ಮದುವೆ

  ಮುಂಬೈಗೆ ಶಿಫ್ಟ್ ಆದ ಅಲಿಯಾ-ರಣ್ಬೀರ್ ಮದುವೆ

  ಅಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಇಬ್ಬರು ಅದ್ದೂರಿಯಾಗಿ ಮದುವ ಆಗಲು ಪ್ಲಾನ್ ಮಾಡಿದ್ದಾರೆ. ಅವರ ಕನಸಿನ ಪ್ರಕಾರ ಇಬ್ಬರು ಡೆಸ್ಟಿನೇಶನ್ ವೆಡ್ಡಿಂಗ್ ಗೆ ತಯಾರಿ ನಡೆಸಿದ್ದರು. ಆದರೀಗ ಇಬ್ಬರು ಮದುವೆ ಪ್ಲಾನ್ ಬದಲಾಯಿಸಿದ್ದು, ವಿವಾಹವನ್ನು ವಿದೇಶದಿಂದ ಭಾರತಕ್ಕೆ ಶಿಫ್ಟ್ ಮಾಡಿದ್ದಾರೆ. ಇಬ್ಬರು ಮುಂಬೈನಲ್ಲಿ ಅದ್ದೂರಿಯಾಗಿ ಮದುವೆ ಆಗಲು ನಿರ್ಧರಿಸಿದ್ದಾರೆ ಎನ್ನುವ ಮಾತು ಹಾರಿದಾಡುತ್ತಿದೆ.

  ಇದೇ ವರ್ಷ ರಣ್ಬೀರ್ ಕಪೂರ್-ಆಲಿಯಾ ಮದುವೆ ಆಗೋದು ಪಕ್ಕಾ.!ಇದೇ ವರ್ಷ ರಣ್ಬೀರ್ ಕಪೂರ್-ಆಲಿಯಾ ಮದುವೆ ಆಗೋದು ಪಕ್ಕಾ.!

  ಡಿಸೆಂಬರ್ ನಲ್ಲಿ ಮದುವೆ

  ಡಿಸೆಂಬರ್ ನಲ್ಲಿ ಮದುವೆ

  ಬಾಲಿವುಡ್ ನ ಫೇಮಸ್ ಜೋಡಿ ಹಕ್ಕಿಗಳ ಮದುವೆ ಡಿಸೆಂಬರ್ ನಲ್ಲಿ ನಡೆಯಲಿದೆ. ಈಗಾಗಲೆ ಇಬ್ಬರು ಕುಟುಂಬದವರು ಅಲಿಯಾ ಮತ್ತು ರಣ್ಬೀರ್ ಮದುವೆ ಮಾತುಕತೆ ನಡೆಸಿದ್ದು. ಡಿಸೆಂಬರ್ 21ಕ್ಕೆ ಮುಂಬೈನಲ್ಲಿ ಮದುವೆ ಮಾಡಲು ನಿರ್ಧಿಸಿದ್ದಾರಂತೆ. ಇಬ್ಬರ ಮದುವೆ ನಾಲ್ಕು ದಿನಗಳ ಕಾಲ ನಡೆಯಲಿದ್ದು ಇಡೀ ಬಾಲಿವುಡ್ ಭಾಗಿಯಾಗಲಿದೆ.

  ರಿಷಿ ಕಪೂರ್ ಅನಾರೋಗ್ಯ

  ರಿಷಿ ಕಪೂರ್ ಅನಾರೋಗ್ಯ

  ರಣ್ಬೀರ್ ಕಪೂರ್ ತಂದೆ ರಿಷಿ ಕಪೂರ್ ಗೆ ಆರೋಗ್ಯ ಸರಿಯಿಲ್ಲ. ಮಗನ ಮದುವೆಯನ್ನು ಬೇಗ ಮಾಡಲು ರಿಷಿ ಕಪೂರ್ ಮುಂದಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಷಿ ಕಪೂರ್ ಯು.ಎಸ್ ನಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಸ್ ಆಗಿದ್ದಾರೆ. ಸದ್ಯ ರಿಷಿ ಕಪೂರ್ ಆರೋಗ್ಯ ಸುಧಾರಿಸಿದೆ. ಸದ್ಯ ಮಗನ ಮದುವೆಯ ಕ್ಷಣಗಳನ್ನು ನೋಡಲು ಕಾತರರಾಗಿದ್ದಾರೆ. ತಂದೆ ಗೋಸ್ಕರ ಮದುವೆಯನ್ನು ವಿದೇಶದಿಂದ ಭಾರತಕ್ಕೆ ಸ್ಛಳಾಂತರಿಸಲಾಗಿದೆ ಎಂದು ಹೇಳಲಾಗುತ್ತಿದೆ.

  ಬ್ರಹ್ಮಾಸ್ತ್ರ ರಿಲೀಸ್ ಬಳಿಕ ಇಬ್ಬರ ಮದುವೆ

  ಬ್ರಹ್ಮಾಸ್ತ್ರ ರಿಲೀಸ್ ಬಳಿಕ ಇಬ್ಬರ ಮದುವೆ

  2017 ರಿಂದ ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರೀತಿ ಮಾಡುತ್ತಿದ್ದಾರೆ. ಯಾವುದೇ ಪಾರ್ಟಿ, ಫಂಕ್ಷನ್ ಗಳಿಗೆ ಹೋದರೂ ಒಟ್ಟಿಗೆ ಹಾಜರ್ ಆಗುವ ಇವರಿಬ್ಬರು ಮನೆಯವರ ಒಪ್ಪಿಗೆ ಮೇರಿಗೆ ಇದೀಗ ಮದುವೆ ಆಗಲು ಮನಸ್ಸು ಮಾಡಿದ್ದಾರೆ. ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ' ಚಿತ್ರ ಡಿಸೆಂಬರ್ 4 ರಂದು ಬಿಡುಗಡೆ ಆಗಲಿದೆ. ಈ ಚಿತ್ರ ರಿಲೀಸ್ ಆದ ನಂತರ. ಇಬ್ಬರ ಮದುವೆ ನಡೆಯಲಿದೆ.

  English summary
  Bollywood Actor Ranbir Kapoor and Alia Bhatt Destination wedding cancel. they will getting traditional ceremony in Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X