For Quick Alerts
  ALLOW NOTIFICATIONS  
  For Daily Alerts

  ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ರಣಬೀರ್ ಕಪೂರ್

  By Rajendra
  |
  ಚಾಕೋಲೇಟ್ ಬಾಯ್ ಎಂದೇ ಖ್ಯಾತನಾಗಿರುವ ಬಾಲಿವುಡ್ ನಟ ರಣಬೀರ್ ಕಪೂರ್ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಶನಿವಾರ (ಮೇ 4) ಮಧ್ಯಾಹ್ನ ಸಿಕ್ಕಿಬಿದ್ದಿದ್ದಾರೆ. ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಪರೀಕ್ಷಿಸಿದಾಗ ತೆರಿಗೆ ಕಟ್ಟದ ವಿದೇಶಿ ವಸ್ತುಗಳು ಸಿಕ್ಕಿವೆ. ಕಸ್ಟಮ್ಸ್ ಅಧಿಕಾರಿಗಳು ಅವರಿಗೆ ರು. 60 ಸಾವಿರ ದಂಡ ವಿಧಿಸಿದ್ದಾರೆ.

  ಲಂಡನ್ ನಿಂದ ಬ್ರಿಟೀಷ್ ಏರ್ ವೇಸ್ ವಿಮಾನದಲ್ಲಿ ರಣಬೀರ್ ಕಪೂರ್ ಅವರು ಛತ್ರಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರ ಲಗೇಜ್ ಪರೀಕ್ಷಿಸಿದಾಗ ತೆರಿಗೆ ಪಾವತಿಸದ ವಿದೇಶಿ ವಸ್ತುಗಳು ಲಭ್ಯವಾಗಿವೆ.

  ವಿದೇಶಿ ಬ್ರ್ಯಾಂಡ್ ನ ಸುಗಂಧದ್ರವ್ಯಗಳು, ಬಟ್ಟೆಗಳು, ಪಾದರಕ್ಷೆಗಳು ಸೇರಿದಂತೆ ಸುಮಾರು ರು.1 ಲಕ್ಷ ಬೆಲೆಬಾಳುವ ವಸ್ತುಗಳು ಲಭಿಸಿವೆ. ಕಸ್ಟಮ್ಸ್ ನೀತಿ ನಿಯಮಗಳನ್ನು ಉಲ್ಲಂಘಿಸಿ ಅವರು ಹೆಚ್ಚಿನ ವಸ್ತುಗಳನ್ನು ಕೊಂಡೊಯ್ಯುತ್ತಿದ್ದರು. ಇದಕ್ಕೆ ತೆರಿಗೆ ಕಟ್ಟಿದ್ದರೆ ಅವರಿಗೆ ಈ ಇಕ್ಕಟ್ಟಿನ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

  ಆದರೆ ರಣಬೀರ್ ಕಪೂರ್ ತೆರಿಗೆ ಪಾವತಿಸದೆ ಹಾಗೆಯೇ ಹೊರ ಹೋಗುತ್ತಿದ್ದರು. ಸರಿಸುಮಾರು 40 ನಿಮಿಷಗಳ ಕಾಲ ವಿಚಾರಣೆ ನಡೆಸಿ ಬಳಿಕ ದಂಡ ಕಟ್ಟಿಸಿಕೊಂಡು ಬಿಡುಗಡೆ ಮಾಡಿದ್ದಾರೆ. ಚಿತ್ರೀಕರಣಕ್ಕಾಗಿ ಲಂಡನ್ ಗೆ ಹೋಗಿ ಹಿಂತಿರುಗುತ್ತಿರುವುದಾಗಿ ರಣಬೀರ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)

  English summary
  Bollywood actor Ranbir Kapoor was today detained and fined about Rs 60,000 on undeclared branded personal goods he was carrying at the Mumbai International airport, a customs official said. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X