Don't Miss!
- Sports
ಐಪಿಎಲ್ 2021: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್
- News
ಕೊರೊನಾ ಏರಿಕೆ; ಭಾರತವನ್ನು ಕೆಂಪು ಪಟ್ಟಿಗೆ ಸೇರಿಸಲು ಬ್ರಿಟನ್ ನಿರ್ಧಾರ
- Finance
ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್ನ ಏಪ್ರಿಲ್ 19ರ ಮಾರುಕಟ್ಟೆ ದರ ಇಲ್ಲಿದೆ
- Education
GIC Of India Officer Scale I Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ಪವರ್ಫುಲ್ ಎಂಜಿನ್ ಹೊಂದಿರುವ ಟೊಯೊಟಾ ಫಾರ್ಚೂನರ್ ಲೆಜೆಂಡರ್ ಎಸ್ಯುವಿ ಕಾರಿನ ವಿಡಿಯೋ
- Lifestyle
ಪ್ರತಿದಿನ ಒಂದು ಕಪ್ ಅನಾನಸ್ ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಣ್ಬೀರ್ ಕಪೂರ್‌ಗೆ ಕೊರೊನಾ ಪಾಸಿಟಿವ್: ಖಚಿತಪಡಿಸಿದ ನೀತು ಕಪೂರ್
ಬಾಲಿವುಡ್ ನಟ ರಣ್ಬೀರ್ ಕಪೂರ್‌ಗೆ ಕೊರೊನಾ ವೈರಸ್ ತಗುಲಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಸುದ್ದಿಯನ್ನು ರಣ್ಬೀರ್ ತಾಯಿ, ಹಿರಿಯ ನಟಿ ನೀತು ಕಪೂರ್ ಖಚಿತಪಡಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿರುವ ನೀತು ಕಪೂರ್, ''ರಣ್ಬೀರ್‌ಗೆ ಕೊರೊನಾ ಪಾಸಿಟಿವ್ ಬಂದಿದೆ. ಆತ ಹೋಮ್ ಕ್ವಾರಂಟೈನ್ ಆಗಿದ್ದಾನೆ. ಅದರಿಂದ ಚೇತರಿಸಿಕೊಳ್ಳುತ್ತಿದ್ದಾನೆ. ನಿಮ್ಮೆಲ್ಲರ ಕಾಳಜಿ ಹಾಗೂ ಶುಭ ಹಾರೈಕೆಗೆ ಧನ್ಯವಾದಗಳು'' ಎಂದು ಪೋಸ್ಟ್ ಹಾಕಿದ್ದಾರೆ.
ಬ್ರಹ್ಮಾಸ್ತ್ರ ಚಿತ್ರೀಕರಣ ಮುಗಿಸಿದ ತೆಲುಗು ನಟ ನಾಗಾರ್ಜುನ
ಅದಕ್ಕು ಮುಂಚೆ ರಣ್ಬೀರ್ ಅವರ ಅಂಕಲ್ ರಣದೀರ್ ಕಪೂರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ ''ಹೌದು ರಣ್ಬೀರ್ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಆದರೆ, ಏನಾಗಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಬೇರೆ ಸ್ಥಳದಲ್ಲಿದ್ದೇನೆ'' ಎಂದಿದ್ದರು.
ರಣ್ಬೀರ್ ಕಪೂರ್ ಅವರು ಬ್ರಹ್ಮಾಸ್ತ್ರ ಮತ್ತು ಶಂಶೇರಾ ಚಿತ್ರಗಳ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಶಂಶೇರಾ ಸಿನಿಮಾ ಜೂನ್ 25ಕ್ಕೆ ತೆರೆಗೆ ಬರಲಿದೆ. ಆದರೆ, ಬ್ರಹ್ಮಾಸ್ತ್ರ ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಇಲ್ಲ.
ಅಯನ್ ಮುಖರ್ಜಿ ನಿರ್ದೇಶನದಲ್ಲಿ ತಯಾರಾಗಿರುವ ಶಂಶೇರಾ ಚಿತ್ರದಲ್ಲಿ ಸಂಜಯ್ ದತ್, ವಾಣಿ ಕಪೂರ್ ಹಾಗೂ ರಣ್ವೀರ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಬ್ರಹ್ಮಾಸ್ತ್ರ ಚಿತ್ರದಲ್ಲಿ ಮೊಟ್ಟ ಮೊದಲ ಸಲ ಆಲಿಯಾ ಭಟ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
ವರ್ಷದ ಮೊದಲ ಪ್ರಾಜೆಕ್ಟ್ ಘೋಷಣೆ: ರಣ್ಬೀರ್ ಕಪೂರ್ ಈಗ 'ಅನಿಮಲ್'
ಇದರ ಜೊತೆಗೆ 'ಅರ್ಜುನ್ ರೆಡ್ಡಿ' ಖ್ಯಾತಿ ಸಂದೀಪ್ ವಂಗಾ ರೆಡ್ಡಿ ನಿರ್ದೇಶನದ 'ಅನಿಮಲ್' ಚಿತ್ರ ಹಾಗೂ ಲವ್ ರಂಜನ್ ಅವರ ಇನ್ನು ಹೆಸರಿಡದ ಹೊಸ ಪ್ರಾಜೆಕ್ಟ್‌ನಲ್ಲಿ ರಣ್ಬೀರ್ ಕಪೂರ್ ನಟಿಸುತ್ತಿದ್ದಾರೆ.