»   » 'ಸಂಜು' ಟ್ರೈಲರ್: ಸಂಜಯ್ ದತ್ ಪ್ರತಿಬಿಂಬ ರಣ್ಬೀರ್ ಕಪೂರ್

'ಸಂಜು' ಟ್ರೈಲರ್: ಸಂಜಯ್ ದತ್ ಪ್ರತಿಬಿಂಬ ರಣ್ಬೀರ್ ಕಪೂರ್

Posted By:
Subscribe to Filmibeat Kannada

ಸಂಜಯ್‌ ದತ್‌ ಜೀವನವನ್ನಾಧರಿಸಿದ ಸಂಜು ಸಿನಿಮಾದ ಟೀಸರ್ ಮಂಗಳವಾರ ಬಿಡುಗಡೆಯಾಗಿದೆ. ಬಾಲಿವುಡ್ ನಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿದ್ದ ಸಂಜು ಸಿನಿಮಾ ಕೊನೆಗೂ ನಿರೀಕ್ಷೆಯನ್ನ ತಲುಪಿದೆ.

ಸಂಜು ಒನ್ ಮ್ಯಾನ್‌...ಮೆನಿ ಲೈವ್ಸ್ ಅಡಿ ಬರಹ ಹೊಂದಿರುವ ಸಂಜು ಚಿತ್ರದಲ್ಲಿ ರಣಬೀರ್ ಕಪೂರ್ ಶೋ ಎನ್ನಬಹುದು. ಸಂಜಯ್ ದತ್ ದೇಹ, ಹೇರ್ ಸ್ಟೈಲ್, ಸ್ಟೈಲ್, ಮ್ಯಾನಸರಿಂ, ಹೀಗೆ ಎಲ್ಲದರಲ್ಲೂ ಫಿಟ್ ಅಂಡ್ ಫರ್ಫೆಕ್ಟ್ ಎನ್ನುವ ರೀತಿಯಲ್ಲಿ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ ಅಂದ್ರೆ ತಪ್ಪಾಗಲಾರದು.

ಸಂಜಯ್ ದತ್ ಬಯೋಗ್ರಫಿಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯಗಳು.!

ಸಂಜಯ ದತ್ ಜೀವನದ ವಿವಿಧ ಮುಖಗಳನ್ನ ಟೀಸರ್ ನಲ್ಲಿ ತೋರಿಸಲಾಗಿದೆ. 80, 90ರ ದಶಕದ ದತ್ ಆಗಿ ಕಾಣಿಸಿಕೊಳ್ಳುವಲ್ಲಿ ರಣ್ಬೀರ್ ನೂರರಷ್ಟು ಪ್ರಯತ್ನ ಪಟ್ಟಿದ್ದಾರೆ ಎಂಬುದಕ್ಕೆ ಈ ಟೀಸರ್ ಸಾಕ್ಷಿಯಾಗಿದೆ. ಈ ಟೀಸರ್ ನೋಡಿದಾಗ, ಕಾಡುವ ಒಂದು ಕೊರಗು ಏನಪ್ಪಾ ಅಂದ್ರೆ, ವಾಯ್ಸ್ ಮ್ಯಾಚ್ ಮಾಡುವಲ್ಲಿ ಕಷ್ಟವಾಗಿದೆ. ಅದನ್ನ ಹೊರತು ಪಡಿಸಿದ್ರೆ ಎಲ್ಲವೂ ಅದ್ಭುತ ಎನ್ನಬಹುದು.

Ranbir Kapoor plays Sanjay Dutt and almost nails it

ಅಂದ್ಹಾಗೆ, ಸಂಜಯ್‌ ದತ್‌ ಪಾತ್ರದಲ್ಲಿ ರಣ್ಬೀರ್ ಕಪೂರ್ ಕಾಣಿಸಿಕೊಂಡಿದ್ರೆ, ಸಂಜಯ್‌ ದತ್‌ ಅವರ ಪತ್ನಿ ಮಾನ್ಯತಾ ದತ್‌ ಪಾತ್ರದಲ್ಲಿ ದಿಯಾ ಮಿರ್ಜಾ ಕಾಣಿಸಿಕೊಂಡಿದ್ದಾರೆ. ರಾಜ್‌ಕುಮಾರ್‌ ಹಿರಾನಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸಂಜಯ್ ದತ್ ಜೀನದಲ್ಲಿ ಎದುರಿಸಿದ ಹಗರಣ, ನೋವು, ಜೈಲು, ಟೀಕೆ,...ಹೀಗೆ ಕಾಣದ ಮುಖಗಳನ್ನ ಇಲ್ಲಿ ಪರಿಚಯ ಮಾಡಲಿದ್ದಾರೆ. ಸದ್ಯ, ಟೀಸರ್ ನೋಡಿ ಖುಷಿ ಪಟ್ಟಿರುವ ಚಿತ್ರಪ್ರೇಮಿಗಳಿಗೆ ಏಪ್ರಿಲ್. 27ರಂದು ಟ್ರೈಲರ್ ನೋಡುವ ಅವಕಾಶ ಸಿಗಲಿದೆ.

ಇನ್ನುಳಿದಂತೆ ಅನುಷ್ಕಾ ಶರ್ಮಾ, ಸೋನಮ್ ಕಪೂರ್, ಪರೇಶ್ ರಾವಲ್, ಬೊಮನ್ ಇರಾನಿ, ಮನಿಷಾ ಕೊಯಿರಾಲಾ ಸೇರಿ ಹಲವು ಪ್ರಮುಖ ಕಲಾವಿದರ ತಾರಬಳದಲ್ಲಿದ್ದಾರೆ. ಈ ಮೊದಲೇ ನಿಗದಿಯಾಗಿರುವಂತೆ ಜೂನ್‌ 29ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

English summary
The teaser of Sanju, the biopic on actor Sanjay Dutt, arrived on the internet on Tuesday. Ranbir Kapoor plays Sanjay Dutt and almost nails it. Ranbir Kapoor looks freakishly like Sanjay Dutt but he's unable to pull off the Khalnayak actor's deep voice.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X