Don't Miss!
- News
ಬೆಂಗಳೂರಿಗೆ ಮೋದಿ: 3 ದಿನ ಈ ರಸ್ತೆಗಳಲ್ಲಿ ಸಂಚಾರಕ್ಕೆ ನಿಷೇಧ, ಯಾವುದೆಲ್ಲಾ ತಿಳಿಯಿರಿ
- Sports
Ranji Trophy: ಪಂಜಾಬ್ ವಿರುದ್ಧ ಗೆದ್ದ ಸೌರಾಷ್ಟ್ರ: ಸೆಮಿಫೈನಲ್ನಲ್ಲಿ ಕರ್ನಾಟಕ-ಸೌರಾಷ್ಟ್ರ ಮುಖಾಮುಖಿ
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Lifestyle
ನವಣೆ ಬಳಿಸಿದರೆ ಕ್ಯಾನ್ಸರ್ನಿಂದ ಫೈಲ್ಸ್ವರೆಗೆ ಕಾಯಿಲೆ ತಡೆಗಟ್ಟಬಹುದು,ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅದ್ಭುತವಾದ ಸ್ಥಳದಲ್ಲಿ ಆಲಿಯಾಗೆ ಪ್ರಪೋಸ್ ಮಾಡಿದ್ದ ರಣ್‌ಬೀರ್: ಆ ಕ್ಷಣ ಅತ್ತು ಬಿಟ್ಟಿದ್ದ ಚೆಲುವೆ
ಬಾಲಿವುಡ್ ಕ್ಯೂಟ್ ಕಪಲ್ ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ದಂಪತಿ ಇತ್ತೀಚೆಗೆ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದರು. ಪರಸ್ಪರ ಮದುವೆಯಾಗಿ ಇದೇ ವರ್ಷ ಏಪ್ರಿಲ್ ಜೋಡಿ ಹಸೆಮಣೆ ಏರಿತ್ತು. ನವೆಂಬರ್‌ನಲ್ಲಿ ಮಗಳು ರಾಹಾ ಹುಟ್ಟಿದ್ದಳು.
ಸದ್ಯ ಮಗಳ ಲಾಲನೆ ಪಾಲನೆಯಲ್ಲಿ ಆಲಿಯಾ ಬ್ಯುಸಿಯಾಗಿದ್ದು, ರಣ್‌ಬೀರ್ ಅನಿಮಲ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದಾರೆ. ಜೋಡಿ ಪ್ರೀತಿ ಮಾಡಿದ್ದು, ಮದುವೆ ಆಗಿದ್ದು ಗೊತ್ತೇಯಿದೆ. ಆದರೆ ಯಾರು ಮೊದಲು ಪ್ರಪೋಸ್ ಮಾಡಿದ್ದರು? ಆಲಿಯಾನಾ? ರಣ್‌ಬೀರಾ? ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಇತ್ತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಆಲಿಯಾ ಹೇಳಿಕೊಂಡಿದ್ದರು. ಅಂದು ಆಲಿಯಾಗೆ ರಣ್‌ಬೀರ್ ಪ್ರಪೋಸ್ ಮಾಡಿದ್ದ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
'ಕಾಫಿ ವಿತ್ ಕರಣ್' ಶೋನಲ್ಲಿ ಆಲಿಯಾ ತಮ್ಮ ಪ್ರಪೋಸ್ ವಿಚಾರವನ್ನು ಬಿಚ್ಚಿಟ್ಟಿದ್ದರು. ಕೀನ್ಯಾದಲ್ಲಿ ರಣ್‌ಬೀರ್ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಆ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದಿದ್ದರು. ಫೋಟನಲ್ಲಿ ರಣ್‌ಬೀರ್ ಕೆಳಗೆ ಕೂತು ಆಲಿಯಾಗೆ ಸರ್‌ಪ್ರೈಸ್ ಶಾಕ್ ಕೊಟ್ಟಿದ್ದಾರೆ. ಆಲಿಯಾ ಆ ಕ್ಷಣ ಭಾವೋದ್ವೇಗದಿಂದ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿರುವುದನ್ನು ನೋಡಬಹುದು. 'ಬ್ರಹ್ಮಾಸ್ತ್ರ' ಶೂಟಿಂಗ್ ಸಮಯದಲ್ಲಿ ಇಬ್ಬರು ಡೇಟಿಂಗ್ ಮಾಡಲು ಆರಂಭಿಸಿದ್ದರು.

ಇನ್ನು ಸಂದರ್ಶನದಲ್ಲಿ ರಣ್‌ಬೀರ್ ತನಗೆ ಹೇಗೆ ಪ್ರಪೋಸ್ ಮಾಡಿದ್ದು ಎನ್ನುವುದನ್ನು ಆಲಿಯಾ ವಿವರಿಸಿದ್ದರು. "ಬಹಳ ಅದ್ಭುತವಾಗ ಪ್ರದೇಶನದಲ್ಲಿ ರಣ್‌ಬೀರ್ ನನಗೆ ಪ್ರಪೋಸ್ ಮಾಡಿದ್ದ. ಅದು ಕೀನ್ಯಾದ ಸುಂದರ ಅರಣ್ಯ ಪ್ರದೇಶ. ನನಗೆ ಅದು ಬಹಳ ಅದ್ಭುತ ಅನ್ನಿಸಿತ್ತು. ಅಲ್ಲಿ ನಮ್ಮ ಜೊತೆ ಬಂದಿದ್ದ ಗೈಡ್ ಫೋಟೊಗಳನ್ನು ಕ್ಲಿಕ್ಕಿಸುವಂತೆ ರಣ್‌ಬೀರ್ ಪ್ಲಾನ್ ಮಾಡಿದ್ದ. ಆ ನಂತರ ನಾನು ಇನ್ನು ಶಾಕ್‌ನಲ್ಲೇ ಇದ್ದೆ. ಬಹಳ ಭಾವೋದ್ವೇಗಕ್ಕೆ ಗುರಿಯಾಗಿದ್ದೆ. ಆ ಫೋಟೊ ನನ್ನ ಜೀವನದಲ್ಲಿ ಬಹಳ ವಿಶೇಷವಾದದ್ದು" ಎಂದು ಹೇಳಿದ್ದರು. ಇದೇ ವರ್ಷ ಈ ಜೋಡಿ ನಟಿಸಿದ 'ಬ್ರಹ್ಮಾಸ್ತ್ರ' ಸಿನಿಮಾ ಸೂಪರ್ ಹಿಟ್ ಆಗಿದೆ.