For Quick Alerts
  ALLOW NOTIFICATIONS  
  For Daily Alerts

  ಆಲಿಯಾ ಗಾಗಿ ಫೋಟೋಗ್ರಾಫರ್ ಆದ ರಣಬೀರ್ ಕಪೂರ್

  By Pavithra
  |

  ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ವಿಚಾರ ಸಾಕಷ್ಟು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ಗುಸು ಗುಸು ಪಿಸು ಪಿಸು , ಮಾತು ಕೇಳಿ ಬರುತ್ತಿದೆ. ಅದಕ್ಕೆ ಪೂರಕವಾಗಿ ಇಬ್ಬರು ಒಂದೇ ಸಿನಿಮಾದಲ್ಲಿ ಅಭಿನಯವನ್ನೂ ಮಾಡುತ್ತಿದ್ದಾರೆ. ಒಟ್ಟೊಟ್ಟಿಗೆ ಓಡಾಟ, ಹೋಟೆಲ್ ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ಇತ್ತೀಚಿಗೆ ಹೆಚ್ಚಾಗಿದೆ.

  ಈಗ ಹೊಸ ವಿಚಾರ ಎಂದರೆ ರಣಬೀರ್ ಕಪೂರ್, ಆಲಿಯಾ ಭಟ್ ಗಾಗಿ ಫೋಟೋಗ್ರಾಫರ್ ಆಗಿದ್ದಾರೆ. ಆಲಿಯಾ ಮತ್ತು ರಣಬೀರ್ 'ಬ್ರಹ್ಮಸ್ತ್ರ' ಸಿನಿಮಾ ಚಿತ್ರೀಕರಣಕ್ಕಾಗಿ ನ್ಯೂಯಾರ್ಕ್ ನಲ್ಲಿ ಬೀಡು ಬಿಟ್ಟಿದ್ದಾರೆ. ಶೂಟಿಂಗ್ ಸೆಟ್ ಗೆ ಆಲಿಯಾ ಸ್ನೇಹಿತೆ ಆಕಾಂಕ್ಷ ರಂಜನ್ ಕಪೂರ್ ಭೇಟಿ ಕೊಟ್ಟಿದ್ದಾರೆ. ಇದೇ ಸಮಯದಲ್ಲಿ ಅವರಿಬ್ಬರ ಫೋಟೋಗಳನ್ನು ರಣಬೀರ್ ಕಪೂರ್ ಕ್ಲಿಕ್ಕಿಸಿದ್ದಾರೆ.

  the view and her too.. 📸photo credit - RK

  A post shared by Alia ✨⭐ (@aliaabhatt) on

  ಫೋಟೋಗಳನ್ನು ಇನ್‌ಸ್ಟಾಗ್ರಾಂ ನಲ್ಲಿ ಹಾಕಿರುವ ಆಲಿಯಾ ಭಟ್ ಫೋಟೋ ಕ್ರೆಡಿಟ್ ಅಂತ ಹಾಕಿ ಆರ್ ಕೆ ಎಂದು ಬರೆದಿದ್ದಾರೆ. ಇಬ್ಬರು ಪ್ರೀತಿಯಲ್ಲಿದ್ದಾರೆ ಎಂದು ಹರಿದಾಡುತ್ತಿರುವ ವಿಚಾರಕ್ಕೆ ಇದು ಮತ್ತಷ್ಟು ಪುಷ್ಟಿ ಕೊಟ್ಟಂತಾಗಿದೆ.

  ಇನ್ನು ಇತ್ತೀಚಿಗಷ್ಟೆ ರಣಬೀರ್ ಕಪೂರ್ ಮದುವೆ ಬಗ್ಗೆ ಮಾತನಾಡಿದ ರಿಷಿ ಕಪೂರ್ ರಣಬೀರ್ ಮದುವೆ ಆಗಲು ಇದು ಸರಿಯಾದ ಸಮಯ ಅವನು ಯಾರನ್ನೇ ಆಯ್ಕೆ ಮಾಡಿಕೊಂಡರು ನಮಗೆ ಯಾವುದೇ ರೀತಿಯ ಅಭ್ಯಂತರವಿಲ್ಲ ಎಂದು ರಣಬೀರ್ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

  ರಣಬೀರ್ ಮತ್ತು ಆಲಿಯಾ ಪ್ರೀತಿ ಒಂದು ಸಿನಿಮಾಗೆ ನಿಂತು ಹೋಗುತ್ತಾ ಅಥವಾ ಜೀವನ ಮೂರ್ತಿ ಮುಂದುವರೆಯುತ್ತಾ ಕಾದು ನೋಡಬೇಕಾಗಿದೆ. ಆದರೆ ಅಭಿಮಾನಿಗಳು ಮಾತ್ರ ನಿಮ್ಮ ಜೋಡಿ ಸೂಪರ್ ಅಂತ ಕಮೆಂಟ್ ಹಾಕುತ್ತಿದ್ದಾರೆ.

  English summary
  Bollywood actor Ranbir Kapoor has taken photos of Alia Bhat. Those photos were uploaded by Alia Bhatt in his Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X