For Quick Alerts
  ALLOW NOTIFICATIONS  
  For Daily Alerts

  'ತಲೈವಿ' ಕಾಲೆಳೆದವರಿಗೆ ಚಾಟಿ ಏಟು ಬೀಸಿದ ಕಂಗನಾ ಸಹೋದರಿ

  |

  ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಯೋಪಿಕ್ ಸಿನಿಮಾ 'ತಲೈವಿ' ಫಸ್ಟ್ ಲುಕ್ ಟೀಸರ್ ಶನಿವಾರ ಬಿಡುಗಡೆಯಾಗಿತ್ತು. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಈ ಟೀಸರ್ ಉತ್ತರ ನೀಡಿತ್ತು.

  ಈ ಟೀಸರ್ ಬಂದ್ಮೇಲೆ ಕಂಗನಾ ರಣಾವತ್ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಕಂಗನಾ ಅವರ ಮೇಕಪ್, ಅವರ ಕಾಸ್ಟ್ಯೂಮ್, ಜಯಲಲಿತಾ ಪಾತ್ರಕ್ಕೆ ಅವರು ಸೂಕ್ತವಾಗಿಲ್ಲ ಎಂದು ಟ್ರೋಲ್, ಮೇಮ್ಸ್ ಹರಿದಾಡಿದವು.

  ಮೊದಲ ನೋಟದಲ್ಲೇ ಸೋತ 'ತಲೈವಿ': ಕಂಗನಾ ಕಾಲೆಳೆದ ನೆಟ್ಟಿಗರುಮೊದಲ ನೋಟದಲ್ಲೇ ಸೋತ 'ತಲೈವಿ': ಕಂಗನಾ ಕಾಲೆಳೆದ ನೆಟ್ಟಿಗರು

  ಇದೀಗ, ಕಂಗನಾ ಅವರ ಬಗ್ಗೆ ಕಾಲೆಳೆದವರಿಗೆ ಕಂಗನಾ ಸಹೋದರಿ ರಂಗೋಲಿ ಚಾಟಿ ಏಟು ಬೀಸಿದ್ದಾರೆ. ಕಂಗನಾ ಅವರ ಡ್ಯಾನ್ಸ್ ವಿಡಿಯೋವೊಂದನ್ನ ಶೇರ್ ಮಾಡಿ, ಟ್ರೋಲಿಗರಿಗೆ ಟಾಂಗ್ ಕೊಟ್ಟಿದ್ದಾರೆ.

  'ತಲೈವಿ' ಜಯಲಲಿತಾ ಆಗಲು ಕಂಗನಾ ಮಾಡಿರೋದು ಇದೊಂದೇ ಸಾಧನೆ.!'ತಲೈವಿ' ಜಯಲಲಿತಾ ಆಗಲು ಕಂಗನಾ ಮಾಡಿರೋದು ಇದೊಂದೇ ಸಾಧನೆ.!

  ಕಂಗನಾ ಅವರು ರೆಟ್ರೋ ಸ್ಟೈಲ್ ನೃತ್ಯ ಅಭ್ಯಾಸ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ರಂಗೋಲಿ ''ಕಲಾವಿದರು ಅಂದ್ರೆ ಫೇಕ್ ಗ್ಲಾಮರ್ ಅಂದುಕೊಳ್ಳಬೇಡಿ. ಅದನ್ನ ಮೀರಿ ಅವರ ಶ್ರಮ ಹೇಗಿರುತ್ತೆ ಗೊತ್ತಾ? ಆ ಪಾತ್ರಕ್ಕಾಗಿ ಅವರ ಮಾಡಿಕೊಳ್ಳುವ ತಯಾರಿ, ಅದಕ್ಕಾಗಿ ಅವರು ಪಡುವ ಕಷ್ಟ, ಒಂದೇ ಒಂದು ಸ್ಟೆಪ್ ಗಾಗಿ ಅವರು ಗಂಟೆಗಟ್ಟಲೆ ಅಭ್ಯಾಸ ಮಾಡುವುದು. ಇದೆಲ್ಲವೂ ಅವರ ಕಲೆಗೆ ಹಿಡಿದ ಕನ್ನಡಿ'' ಎಂದಿದ್ದಾರೆ.

  ಈ ಮೂಲಕ ಜಯಲಲಿತಾ ಪಾತ್ರದಲ್ಲಿ ನಟಿಸಿರುವ ಕಂಗನಾ ಅವರ ಮೇಕಪ್ ಬಗ್ಗೆ ಕಾಲೆಳೆದವರಿಗೆ ಉತ್ತರಿಸಿದ್ದಾರೆ. ಇನ್ನು ತಲೈವಿ ಚಿತ್ರಕ್ಕಾಗಿ ಡ್ಯಾನ್ಸ್ ಅಭ್ಯಾಸ ಮಾಡುತ್ತಿರುವ ವಿಡಿಯೋದಲ್ಲಿ ಆಡಿಯೋ ಮ್ಯೂಟ್ ಮಾಡಲಾಗಿದೆ. ಈ ಬಗ್ಗೆಯೂ ಸ್ಪಷ್ಟನೆ ನೀಡಿದ್ದು, ಉದ್ದೇಶಪೂರ್ವಕವಾಗಿ ಆಡಿಯೋ ಕಟ್ ಮಾಡಿದ್ದೇನೆ ಎಂದಿದ್ದಾರೆ.

  English summary
  Kangana Ranaut's sister Rangoli Chandel has support kangana's first look of thalaivi movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X