For Quick Alerts
  ALLOW NOTIFICATIONS  
  For Daily Alerts

  ಬಚ್ಚನ್ ಸೊಸೆ ಐಶ್ವರ್ಯಾ ರೈ ಕಾಲೆಳದ ರಾಣಿ ಮುಖರ್ಜಿ

  By ಜೀವನ್ ಸೂರ್ಯ
  |

  ಬಾಲಿವುಡ್ ನಟಿ ರಾಣಿ ಮುಖರ್ಜಿಗೆ ಸುಮ್ಮನೆ ಇರಲು ಸಾಧ್ಯವಾಗದೇ ಏನೋ ಹೇಳಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿಗೆ ಟಿಟಿ ಶೋ ಒಂದರಲ್ಲಿ ಮಾತನಾಡುತ್ತಿದ್ದ ರಾಣಿ ಮುಖರ್ಜಿ, ಬಚ್ಚನ್ ಪರಿವಾರದ ಸೊಸೆ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ವಿರುದ್ಧ ಮಾತನಾಡಿ ತಮ್ಮ ಬಾಯಿಚಪಲ ತೀರಿಸಿಕೊಂಡಿದ್ದಾರೆ. ಹೀಗಂತ ಬಾಲಿವುಡ್ ಅಂಗಳ 'ಅಯ್ಯ' ಚಿತ್ರದ ನಾಯಕಿ ರಾಣಿ ಮುಖರ್ಜಿಗೆ 'ಅಯ್ಯೋ!' ಪಾಪ, ಸುಮ್ಮನಿರಲು ಏನು ಕೊಡಬೇಕು" ಎನ್ನುತ್ತಿದ್ದಾರೆ ಎಂಬ ಸುದ್ದಿ ಬಂದಿದೆ.

  ಟಿವಿ ಶೋ ಒಂದರಲ್ಲಿ ಐಶ್ವರ್ಯಾ ರೈ ಬಗ್ಗೆ ಮಾತನಾಡುತ್ತಾ ರಾಣಿ ಮುಖರ್ಜಿ "ನಾವು, ಭಾರತೀಯ ಹೆಂಗಸರು ನಮ್ಮ ಮಕ್ಕಳ ಬಗ್ಗೆ ಅನಾವಶ್ಯಕ ಕಾಳಜಿ ವಹಿಸುತ್ತೇವೆ. ನಮ್ಮ ಮಕ್ಕಳ ಬಗ್ಗೆ ಅತಿಯಾದ ಪ್ರೀತಿ ತೋರಿಸಿ, ನಾವೊಬ್ಬರೇ ಈ ಗ್ರಹದಲ್ಲಿ (ಪ್ಲಾನೆಟ್) ಏಕೈಕ ತಾಯಿ ಎಂದುಕೊಳ್ಳುತ್ತೇವೆ" ಎಂದಿದ್ದಾರೆ. ಮಕ್ಕಳ ಬಗ್ಗೆ ಅಷ್ಟೊಂದು ಕಾಳಜಿ ವಹಿಸುವ ಅಗತ್ಯವಿಲ್ಲ ಎಂದು ಸುತ್ತುಬಳಸಿ ಟೀಕಿಸಿದ್ದಾರೆ. ಅದು ಐಶ್ವರ್ಯಾ ಬಗ್ಗೆ ಹೇಳಿದ್ದು ಎಂಬುದೂ ಪಕ್ಕಾ ಎನ್ನಲಾಗಿದೆ.

  ಮುಂದುವರಿದ ರಾಣಿ "ನಾವು, ಭಾರತದ ಹೆಂಗಸರು ನಮ್ಮ ಮಕ್ಕಳ ಬಗ್ಗೆ ಸರ್ವಸ್ವವನ್ನೂ ತ್ಯಾಗ ಮಾಡಿ ಬದಕಬೇಕೆಂದು ಬಯಸುತ್ತೇವೆ. ಆದರೆ ಅಷ್ಟೊಂದು ಕಾಳಜಿಯ ಅಗತ್ಯವಿಲ್ಲ. ನಾವು ನಮ್ಮ ಬಗ್ಗೆ ಯೋಚಿಸಿ ನಮ್ಮ ಕೆಲಸಕ್ಕೂ ಆದ್ಯತೆ ನೀಡಬೇಕು. ನಮ್ಮ ವಯಸ್ಸಿಗಿಂತ ಹೆಚ್ಚು ಹಿರಿಯರಂತೆ ಕಾಣದಿರಲು ಪ್ರಯತ್ನಿಸಬೇಕು" ಎಂದು ಐಶೂ ಕಾಲೆಳೆದಿದ್ದಾರೆ. ಈ ಬಗ್ಗೆ ಬಚ್ಚನ್ ಸೊಸೆ ಐಶ್ವರ್ಯಾ ರೈ ಪ್ರತಿಕ್ರಿಯೆ ಏನಿರಬಹುದು ಎಂಬುದು ಸದ್ಯಕ್ಕೆ ಬಾಲಿವುಡ್ ಕುತೂಹಲದಿಂದ ಕಾಯುತ್ತಿರುವ ಸಮಾಚಾರ.

  ರಾಣಿ ಮುಖರ್ಜಿ ಹಾಗೂ ಅಭಿಷೇಕ್ ಬಚ್ಚನ್ ಸ್ನೇಹ ಹಾಗೂ ಬಚ್ಚನ್ ಕುಟುಂಬಕ್ಕೆ ಸೊಸೆಯಾಗಿ ಹೋಗಬೇಕೆಂದು ರಾಣಿ ಮನದಲ್ಲಿದ್ದ ಅಭಿಲಾಷೆ, ಎಲ್ಲಾ ಇತಿಹಾಸವನ್ನು ಬಲ್ಲ ಬಾಲಿವುಡ್, ರಾಣಿಯನ್ನು ನೋಡಿ ನಗುತ್ತಿದೆ. ಕಾರಣ, 'ಐಶೂ ಮಡಿಲಲ್ಲಿ ಆಡುತ್ತಿರುವ ಮುದ್ದಾದ ಮಗು ನೋಡಿ ಸಹಿಸಲಾಗದ ರಾಣಿ, ಈ ರೀತಿಯಲ್ಲಿ ಐಶ್ವರ್ಯಾ ರೈ ಕಾಲೆಳೆಯುತ್ತಿದ್ದಾರೆ. ಇದಕ್ಕೆಲ್ಲಾ ತಲೆಕೆಡಿಸಿಕೊಂಡು ಕೆರಳಿ ಮಾತನಾಡುವ ಜಾಯಮಾನ ಐಶೂಗಿಲ್ಲ' ಎನ್ನಲಾಗುತ್ತಿದೆ. ಯಾವುದಕ್ಕೂ ಕಾಲ ಉತ್ತರಿಸಲಿದೆ ಬಿಡಿ! (ಏಜೆನ್ಸೀಸ್)

  English summary
  Rani Mukherjee recently took a dig at Aishwarya Rai Bachchan weight and her motherhood on TV show Front Row.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X