For Quick Alerts
  ALLOW NOTIFICATIONS  
  For Daily Alerts

  ಮೊದಲ ಸಲ ತಾನು ಬಳಸಿದ್ದೇ ಡ್ಯೂರೆಕ್ಸ್ ಕಾಂಡೋಮ್

  By ಉದಯರವಿ
  |

  ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಡ್ಯೂರೆಕ್ಸ್ ಕಾಂಡೋಮ್ ಬ್ರ್ಯಾಂಡ್ ನ ಅಂಬಾಸಿಡರ್ ಎಂಬ ಸಂಗತಿ ಬಹುಶಃ ಗೊತ್ತೇ ಇರುತ್ತದೆ. ಫಿಲ್ಮಿಬೀಟ್ ಗೆ ಕೊಟ್ಟಂತಹ ವಿಶೇಷ ಸಂದರ್ಶನದಲ್ಲಿ ರಣವೀರ್ ಕೆಲವು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

  ತನ್ನ ಹನ್ನೆರಡನೇ ವಯಸ್ಸಿನಲ್ಲೇ ಕಾಮದ ರುಚಿ ಕಂಡಿದ್ದೇನೆ ಎಂದು ರಣವೀರ್ ಹೇಳಿದ್ದು, ಡ್ಯೂರೆಕ್ಸ್ ಬ್ರ್ಯಾಂಡ್ ಗೆ ಯಾಕೆ ಪ್ರಚಾರ ಮಾಡುತ್ತಿದ್ದೇನೆ ಎಂಬ ಬಗ್ಗೆಯೂ ಸ್ಪಷ್ಟತೆ ನೀಡಿದ್ದಾರೆ. ತನ್ನ ಮೊದಲ ಸೆಕ್ಸ್ ನಲ್ಲಿ ತಾನು ಬಳಕೆ ಮಾಡಿದ್ದು ಡ್ಯೂರೆಕ್ಸ್ ಕಾಂಡೋಮ್ ಎಂದಿದ್ದಾರೆ.

  "ನಾನು ಯಾವಾಗಲೂ ಆನ್ ಲೈನ್ ಶಾಪಿಂಗ್ ಮಾಡುತ್ತಿರುತ್ತೇನೆ. ಬಹಳಷ್ಟು ಜಾಲತಾಣಗಳಿಗೆ ಭೇಟಿ ಕೊಡುತ್ತಿರುತ್ತೇನೆ. ಅಲ್ಲೆಲ್ಲಾ ವಿವಿಧ ನಮೂನೆಯ ಸರಕುಗಳು ಮಾರಟ ಮಾಡಲಾಗುತ್ತಿತ್ತದೆ ಆದರೆ ಕಾಂಡೋಮ್ ಗಳನ್ನು ಮಾತ್ರ ಯಾರೂ ಮಾರಾಟ ಮಾಡಲ್ಲ. ನನಗೆ ಆಶ್ಚರ್ಯವಾಗಿದ್ದು ಆಗಲೇ."

  ಜಾಹೀರಾತು ಎಲ್ಲರೂ ನೋಡುವಂತಿರಬೇಕು

  ಜಾಹೀರಾತು ಎಲ್ಲರೂ ನೋಡುವಂತಿರಬೇಕು

  "ಕೂಡಲೆ ನನ್ನ ಮ್ಯಾನೇಜರ್ ಕರೆದು ಡ್ಯೂರೆಕ್ಸ್ ಬ್ರ್ಯಾಂಡ್ ಕಂಪನಿಯನ್ನು ಸಂಪರ್ಕಿಸಲು ಮೀಟಿಂಗ್ ಏರ್ಪಾಡು ಮಾಡಲು ಹೇಳಿದೆ ಎಂದು ರಣವೀರ್ ಸಿಂಗ್ ವಿವರ ನೀಡಿದರು. ಬಹಳಷ್ಟು ಕಾಂಡೋಮ್ ಜಾಹೀರಾತುಗಳು ಸಂಚಲನಾತ್ಮಕವಾಗಿ, ಕಾಮೋದ್ರೇಕದಿಂದ ಕೂಡಿರುತ್ತವೆ. ಆದರೆ ನನ್ನ ಪ್ರಕಾರ ಆ ರೀತಿಯ ಜಾಹೀರಾತುಗಳನ್ನು ಎಲ್ಲರೂ ನೋಡುವಂತಿರಬೇಕು ಎಂದಿದ್ದಾರೆ.

  ರಣವೀರ್ ಡ್ಯಾಶ್ ಅಂಡ್ ಡೇರಿಂಗ್ ನಿರ್ಣಯ

  ರಣವೀರ್ ಡ್ಯಾಶ್ ಅಂಡ್ ಡೇರಿಂಗ್ ನಿರ್ಣಯ

  ಆ ಬಳಿಕ ಡ್ಯೂರೆಕ್ಸ್ ಕಾಂಡೋಮ್ ಕಂಪನಿಯನ್ನು ಸಂಪರ್ಕಿಸಿ ವಿವಿಧ ನಮೂನೆಯ ಜಾಹೀರಾತುಗಳನ್ನು ಚಿತ್ರೀಕರಿಸಿಕೊಂಡೆವು. ಮೆಯಿನ್ ಸ್ಟ್ರೀಮ್ ಸಿನಿಮಾಗಳಲ್ಲಿರುವ ಸ್ಟಾರ್ಸ್ ಕಾಂಡೋಮ್ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಭಯಪಡುತ್ತಾರೆ. ಆದರೆ ಬಾಲಿವುಡ್ ಯಂಗ್ ಹೀರೋ ರಣವೀರ್ ಸಿಂಗ್ ಮಾತ್ರ ಡ್ಯಾಶ್ ಅಂಡ್ ಡೇರಿಂಗ್ ನಿರ್ಣಯ ತೆಗೆದುಕೊಂಡು, ಡ್ಯೂರೆಕ್ಸ್ ಕಾಂಡೋಮ್ ಪ್ರಚಾರಕ್ಕಾಗಿ ಧೈರ್ಯದಿಂದ ಮುನ್ನುಗ್ಗಿದ್ದಾರೆ.

  ಇದು ಸೇಫ್ ಸೆಕ್ಸ್ ಬಗ್ಗೆ ಪ್ರಚಾರ

  ಇದು ಸೇಫ್ ಸೆಕ್ಸ್ ಬಗ್ಗೆ ಪ್ರಚಾರ

  ಮೆಯಿನ್ ಸ್ಟ್ರೀಮ್ ಸ್ಟಾರ್ಸ್ ಪ್ರಚಾರ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎಂದು ಡ್ಯೂರೆಕ್ಸ್ ಕಂಪನಿ ಭಾವಿಸಿ ರಣವೀರ್ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡಿದೆ. ಈ ಬಗ್ಗೆ ಮಾತನಾಡಿರುವ ರಣವೀರ್, "ಕಾಂಡೋಮ್ ಜಾಹೀರಾತಿನಲ್ಲಿ ನಟಿಸುವುದು ಎಂದರೆ ಸೇಫ್ ಸೆಕ್ಸ್ ಬಗ್ಗೆ ಪ್ರಚಾರ ಮಾಡುವುದು ಎಂದರ್ಥ, ಇದನ್ನು ಒಂದು ಸಾಮಾಜಿಕ ಜವಾಬ್ದಾರಿಯಾಗಿ ಭಾವಿಸಿದ್ದೇನೆ" ಎಂದಿದ್ದಾರೆ.

  ಅವರ ಇಮೇಜ್ ಗೆ ಏನೂ ಧಕ್ಕೆ ಆಗುವುದಿಲ್ಲ

  ಅವರ ಇಮೇಜ್ ಗೆ ಏನೂ ಧಕ್ಕೆ ಆಗುವುದಿಲ್ಲ

  ರಣವೀರ್ ಸಿಂಗ್ ಮೊದಲಿನಿಂದಲೂ ವಿಭಿನ್ನವಾಗಿ ಆಲೋಚಿಸುವ ವ್ಯಕ್ತಿ, ವಿಭಿನ್ನವಾಗಿ ಮುಂದಡಿಯಿಡುತ್ತಿದ್ದಾರೆ. ಈ ರೀತಿಯ ಅವರ ಸ್ವಭಾವವೇ ಅವರು ಕಾಂಡೋಮ್ ಜಾಹೀರಾತಿನಲ್ಲಿ ಅಭಿನಯಿಸಲು ಸಾಧ್ಯವಾಗಿದೆ ಎಂದು ಅವರ ಆತ್ಮೀಯರು ಹೇಳುತ್ತಾರೆ. ಇದರಿಂದ ಅವರ ಇಮೇಜ್ ಇನ್ನಷ್ಟು ಎತ್ತರಕ್ಕೆ ಏರಲಿದೆ ಎಂದು ಭಾವಿಸಲಾಗಿದೆ.

  ಎಲ್ಲರೂ ಡ್ಯೂರೆಕ್ಸ್ ಕಾಂಡೋಮ್ ಬಳಸಿ

  ಎಲ್ಲರೂ ಡ್ಯೂರೆಕ್ಸ್ ಕಾಂಡೋಮ್ ಬಳಸಿ

  ರಣವೀರ್ ಸಿಂಗ್ ಜೊತೆಗಿನ ಡ್ಯೂರೆಕ್ಸ್ ಕಂಪನಿ ರೂಪಿಸಿರುವ ಜಾಹೀರಾತು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರಪಂಚದಲ್ಲಿರುವ ಪ್ರೇಮಿಗಳೆಲ್ಲಾ ಡ್ಯೂರೆಕ್ಸ್ ಕಾಂಡೋಮ್ ಬಳಸಿ ಎಂದು ರಣವೀರ್ ಜಾಹೀರಾತಿನಲ್ಲಿ ಕರೆನೀಡಿದ್ದಾರೆ.

  English summary
  Ranveer Singh recently revealed how he lost his virginity when he was just 12 years old, he started divulging these details when our reporter had an exclusive conversation with the actor. During the same chat, when the actor was asked why he chose Durex condom brand to endorse, "For my first time I used Durex only", he quips.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X