»   » ತಮ್ಮ ವಿವಾದಾತ್ಮಕ ಹೇಳಿಕೆ ಬಗ್ಗೆ ಸಲ್ಮಾನ್ ಖಾನ್ ಏನಂತಾರೆ?

ತಮ್ಮ ವಿವಾದಾತ್ಮಕ ಹೇಳಿಕೆ ಬಗ್ಗೆ ಸಲ್ಮಾನ್ ಖಾನ್ ಏನಂತಾರೆ?

By: Sonu Gowda
Subscribe to Filmibeat Kannada

ಬಿಟೌನ್ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ಇತ್ತೀಚೆಗೆ 'ಸುಲ್ತಾನ್' ಚಿತ್ರದ ಕುಸ್ತಿ ಪಟು ದೃಶ್ಯದ ಚಿತ್ರೀಕರಣದ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯ ಬಗ್ಗೆ ಮೌನ ಮುರಿದಿದ್ದಾರೆ.

'ಸಮಸ್ಯೆ ಹಾಗೂ ವಿವಾದಗಳಿಂದ ದೂರವಿರಲು ಕಡಿಮೆ ಮಾತನಾಡುವುದು ಉತ್ತಮ ಎಂದು ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.['ರೇಪ್ ಆದ ಮಹಿಳೆ ಪರಿಸ್ಥಿತಿ ನನ್ನದಾಗಿತ್ತು': ಸಲ್ಲು ವಿವಾದಾತ್ಮಕ ಹೇಳಿಕೆ]

Rape Remark Controversy: 'I Should Speak Less Now' says Salman Khan

ಸ್ಪೇನ್ ರಾಜಧಾನಿ ಮ್ಯಾಡ್ರಿಡ್ ನಲ್ಲಿ ನಡೆದ 'ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಆವಾರ್ಡ್ಸ್ (IIFA) ಸಮಾರಂಭದಲ್ಲಿ ಮಾತನಾಡಿದ ನಟ ಸಲ್ಲು ಅವರು ಬಹಳ ಚಿಕ್ಕದಾಗಿ ಭಾಷಣ ಮಾಡಿ ಮುಗಿಸಿದ್ರು.

'ನಾನು ಏನು ಮಾತನಾಡಿದ್ರೂ ವಿವಾದ ಆಗುತ್ತದೆ. ಆದ್ದರಿಂದ ನಾನೀಗ ಬಹಳ ಕಡಿಮೆ ಮಾತನಾಡಿದರೆ ಉತ್ತಮ ಅಂತ ನನಗನ್ನಿಸುತ್ತಿದೆ' ಎಂದು ಚಿಕ್ಕದಾಗಿ ಹೇಳಿ ತಮ್ಮ ಮಾತುಗಳಿಗೆ ಸಲ್ಲು ಪೂರ್ಣ ವಿರಾಮ ಹಾಕಿದ್ದಾರೆ.

ಆದರೆ ಅಭಿಮಾನಿಗಳು ಇನ್ನೂ ಸ್ಪಲ್ಪ ಹೊತ್ತು ಮಾತನಾಡಿ ಅಂತ ಕೇಳಿಕೊಂಡರು ಕೂಡ ಸಲ್ಮಾನ್ ಖಾನ್ ಅವರು ಮಾತನಾಡಲು ಒಪ್ಪಲಿಲ್ಲ. ಅದರಲ್ಲೂ ಜಾಸ್ತಿ ಮಾತಾಡಿ ಅಂತ ಸಲ್ಮಾನ್ ಖಾನ್ ಅವರ ಹತ್ತಿರ ಮಹಿಳಾ ಮಣಿಗಳು ಕೇಳಿಕೊಂಡಿದ್ದು ವಿಶೇಷವಾಗಿತ್ತು.[ಸಲ್ಮಾನ್ ಪರ ವಕಾಲತ್ತು ವಹಿಸಿದ ಸಹೋದರ ಅರ್ಬಾಜ್ ಖಾನ್]

Rape Remark Controversy: 'I Should Speak Less Now' says Salman Khan

ತಮ್ಮ 'ಸುಲ್ತಾನ್' ಚಿತ್ರದ ಶೂಟಿಂಗ್ ಆದ ನಂತರದ ಸಮಯವನ್ನು ರೇಪ್ ಆದ ಮಹಿಳೆಗೆ ಹೋಲಿಸಿಕೊಂಡಿದ್ದ ಸಲ್ಮಾನ್ ಖಾನ್ ಅವರು ಎಲ್ಲರಿಂದ ವ್ಯಾಪಕ ಟೀಕೆಗೆ ಒಳಗಾಗಿದ್ದರು. ಸಲ್ಮಾನ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಎಲ್ಲರೂ ಎರ್ರಾ-ಬಿರ್ರಿ ಛೀಮಾರಿ ಹಾಕಿದ್ದರು.

ಒಟ್ನಲ್ಲಿ ಈ ವಿವಾದದ ನಂತರ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಎಲ್ಲಾ ಕಡೆ, ಎಲ್ಲಾ ಸಮಾರಂಭಗಳಲ್ಲಿ ಸ್ವಲ್ಪವೇ ಮಾತನಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.

English summary
Bollywood Actor Salman Khan is in news for all the negative reasons. He is being highly criticised for his rape remark during an interview. While addressing the inauguration of the International Indian Film Academy (IIFA) awards, Salman said that he should speak less now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada