»   » ಐಶ್ವರ್ಯ ಬಚ್ಚನ್ ಕುಟುಂಬದ ಅಪರೂಪದ ಚಿತ್ರಗಳು

ಐಶ್ವರ್ಯ ಬಚ್ಚನ್ ಕುಟುಂಬದ ಅಪರೂಪದ ಚಿತ್ರಗಳು

Posted By:
Subscribe to Filmibeat Kannada

ಐಶ್ವರ್ಯ ರೈ ಬಚ್ಚನ್ ಮಮ್ಮಿ ಆಗಲಿ, ಮಗುವನ್ನು ಹೆತ್ತು ಡುಮ್ಮಿ ಆಗಲಿ, ಹೆತ್ತ ಮಗುವನ್ನು ಮಾದ್ಯಮದವರಿಂದ ಮುಚ್ಚಿಡಲಿ, ಕದ್ದು ತೆಗೆದ ಫೋಟೋದಲ್ಲಿ ಸೆರೆಸಿಗಲಿ, ಯಾವುದೋ ಹಾಲಿವುಡ್ ಚಿತ್ರಕ್ಕೆ ಸಹಿ ಹಾಕಲಿ, ಏನನ್ನೂ ಮಾಡದೆ ಮನೆಯಲ್ಲಿ ಸುಮ್ಮನೆ ಕೂಡಲಿ, ನಗಲಿ ಅಥವಾ ಮುಖ ಗಂಟುಹಾಕಿಕೊಂಡಿರಲಿ ಸುದ್ದಿಯಾಗುತ್ತಲೇ ಇರುತ್ತಾಳೆ, ಆಕೆಗೆ ಅದು ಇಷ್ಟವಿರಲಿ ಇಲ್ಲದಿರಲಿ!

ಆಕೆ ಕಟ್ಟಿಕೊಂಡಿರುವ ಅಭಿಮಾನಿಗಳಿಗೆ ಕೂಡ ಅದೇ ಬೇಕು. ಆಕೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ. ಕಚಗುಳಿಯಿಡುವಂತಹ ಆಕೆಯ ನಗುವಿಗೆ, ಬೇಸ್ತುಬೀಳಿಸುವಂತಹ ಆಕೆಯ ಮೈಮಾಟಕ್ಕೆ ಮನಸೋಲದವರು ಯಾರಿದ್ದಾರೆ ಹೇಳಿ. ಐಶು ಬಗ್ಗೆ ನೋಡಿ ನೋಡಿ ಸಾಕಾಗಿದೆ, ಇನ್ನು ಆಕೆಯ ಮುಖವನ್ನೇ ನೋಡುವುದಿಲ್ಲ ಎಂದು ಹೇಳಿದವರು ಕೂಡ ಐಶು ಬಗ್ಗೆ ಸುದ್ದಿ ಬರುತ್ತಿದ್ದಂತೆ ಮೈಯೆಲ್ಲ ಕಿವಿಯಾಗುತ್ತಾರೆ, ಕಣ್ಣುಗಳು ಅತ್ತವೇ ಹೊರಳುತ್ತವೆ.

'ಹಾಯ್, ಐ ಆಮ್ ಸಂಜು, ಸಂಜನಾ' ಎಂದು ಪೆಪ್ಸಿ ಸಾಫ್ಟ್ ಡ್ರಿಂಕ್ಸ್ ಜಾಹೀರಾತಿನಲ್ಲಿ ಅಮೀರ್ ಖಾನ್ ಜೊತೆ ಕಾಣಿಸಿಕೊಂಡಂದಿನಿಂದ ಇಲ್ಲಿಯವರೆಗೆ ಮಾಧ್ಯಮದವರಷ್ಟೇ ಅಲ್ಲ ಅವಳು ಎಲ್ಲರ ಡಾರ್ಲಿಂಗ್ ಆಗಿದ್ದಾಳೆ. ಇನ್ನು ಬಚ್ಚನ್ ಕುಡಿ ಅಭಿಷೇಕನನ್ನು ಮದುವೆಯಾಗಿ, ಮುದ್ದಾದ ಒಂದು ಮಗು ಆರಾಧ್ಯಾಳನ್ನು ಹೆತ್ತಮೇಲೂ ಆಕೆಯ ಮೇಲಿನ ಫೋಕಸ್ ಇನ್ನೂ ಆಚೆಗೀಚೆಗಾಗಿಲ್ಲ. ಆ ಬಗೆಯ ಆಕರ್ಷಣೆ ಐಶ್ವರ್ಯಾ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು.

ಐಶ್ವರ್ಯ ವಿಶ್ವ ಸುಂದರಿಯಾದಂದಿನಿಂದ ಇಲ್ಲಿಯವರೆಗೆ ಎಲ್ಲ ಬಗೆಯ ಚಿತ್ರಗಳಲ್ಲಿ ಆಕೆ ಕಂಗೊಳಿಸಿದ್ದಾಳೆ. ಆದರೆ, ಇಲ್ಲಿ ಹೆಚ್ಚು ಸುದ್ದಿ ಮಾಡದ, ಹೆಚ್ಚು ಕಣ್ಣಿಗೆ ಬೀಳದ ಅಪರೂಪದ ಚಿತ್ರಗಳನ್ನು ಅಭಿಮಾನಿಗಳಿಗಾಗಿ ಸಾದರಪಡಿಸಲಾಗುತ್ತಿದೆ. ಹಳೆಯ ಆಲ್ಬಂ ನೋಡುತ್ತ ಕೂಡುವುದೇ ಒಂದು ರೀತಿಯ ಮಜಾ. ನೋಡನೋಡುತ್ತಿದ್ದಂತೆ ನಮ್ಮ ಸ್ಮೃತಿಪಟಲದಲ್ಲಿ ಕೂಡ ನಮ್ಮ ಹಳೆಯ ಚಿತ್ರಗಳು ಹಾಯ್ದುಹೋಗಲು ಪ್ರಾರಂಭಿಸುತ್ತವೆ.

ತನ್ನ ಇಡೀ ಕುಟುಂಬದೊಡನೆ ಐಶ್ವರ್ಯ ರೈ

ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಕುಟುಂಬ ಮಾತ್ರವಲ್ಲ ಐಶ್ವರ್ಯ ಅವರ ತಂದೆ ರೈ ಅವರ ಕುಟುಂಬ ಕೂಡ ಮಿಳಿತವಾಗಿದೆ. ಐಶ್ವರ್ಯಾ ತನ್ನ ವೈನಿಯ (ಅತ್ತಿಗೆಯ) ಸೀಮಂತ ಮಾಡಿದ ಸಂದರ್ಭದಲ್ಲಿ ಈ ಚಿತ್ರವನ್ನು ತೆಗೆಯಲಾಗಿದೆ.

ಐಶೂ ಮಿಸ್ ವರ್ಲ್ಡ್ ಆದ ಸಂದರ್ಭ

ಮಂಗಳೂರಿನಲ್ಲಿ ಹುಟ್ಟಿದ ಐಶ್ವರ್ಯ ರೈ ಮಿಸ್ ವರ್ಲ್ಡ್ ಆದ ಸಂದರ್ಭದಲ್ಲಿ ಅಪ್ಪ ಕೃಷ್ಣರಾಜ್ ರೈ, ಅಮ್ಮ ವೃಂದಾ ರೈ ಮತ್ತು ಸಹೋದರ ಆದಿತ್ಯ ರೈ ಜೊತೆ ತೆಗೆಸಿಕೊಂಡಂಥ ಬ್ಲಾಕ್ ಅಂಡ್ ವೈಟ್ ಚಿತ್ರವಿದು. ಅಂದ ಹಾಗೆ, ಐಶ್ವರ್ಯ ರೈ ಮಿಸ್ ವರ್ಲ್ಡ ಟೈಟಲ್ ಗೆದ್ದಿದ್ದು 1994ರಲ್ಲಿ, ದಕ್ಷಿಣ ಆಫ್ರಿಕಾಯ ಸನ್ ಸಿಟಿಯಲ್ಲಿ.

ಅಮಿತಾಬ್ ಬಚ್ಚನ್ ಕುಟುಂಬದೊಡನೆ

ಅಭಿಷೇಕ್ ಮತ್ತು ತುಳುನಾಡ ಚೆಲುವೆ ಐಶ್ವರ್ಯಾ ರೈ ಅವರ ಕುಂಡಲಿಗಳನ್ನು ಕೂಡಿಸಿ 2007ರಲ್ಲಿ ಇಬ್ಬರಿಗೂ ಗಂಟು ಹಾಕಿಸಿದಾಗ ಇಡೀ ಜಗತ್ತು ನಿಬ್ಬೆರಗಾಗಿತ್ತು. ಬಚ್ಚನ್ ಫ್ಯಾಮಿಲಿ ಜೊತೆ ತೆಗೆಸಿಕೊಂಡ ಈ ಫೋಟೋನೇ ಎಲ್ಲವನ್ನೂ ಹೇಳುತ್ತಿದೆ.

ಆರಾಧ್ಯಾಳ ಮೊದಲ ಹುಟ್ಟುಹಬ್ಬದ ಸಂದರ್ಭ

ಐಶು ಅಮ್ಮನಾದ ಮೇಲೆ ಎಲ್ಲ ಕಣ್ಣು ಹೆಚ್ಚು ಕುಕ್ಕಿದ್ದು ಆಕೆಯ ಮುದ್ದಾದ ಮಗಳು ಆರಾಧ್ಯ. ಆರಾಧ್ಯ ಮೊದಲ ಹುಟ್ಟುಹಬ್ಬದಂದು ತೆಗೆದು ಈ ಚಿತ್ರವನ್ನು ನೋಡಲು ಏನೋ ಆನಂದ. ಮುಂದೆ ಆರಾಧ್ಯ ಕೂಡ ಸಿನೆಮಾರಂಗಕ್ಕೆ ಬರುತ್ತಾಳಾ? ಗೊತ್ತಿಲ್ಲ.

ಮದುವೆಯ ಹೊಸದರಲ್ಲಿ ದೇಗುಲಕ್ಕೆ ಭೇಟಿ ನೀಡಿದಾಗ

2007ರಲ್ಲಿ ಅಭಿ ಜೊತೆ ಮದುವೆಯಾದ ಕೂಡಲೆ ಬಚ್ಚನ್ ಕುಟುಂಬ ತಮ್ಮ ಆಪ್ತಮಿತ್ರ ಅಮರ್ ಸಿಂಗ್ ಅವರೊಡನೆ ಮೊದಲ ಬಾರಿಗೆ ದೇವಾಲಯಕ್ಕೆ ಭೇಟಿ ನೀಡಿದಾಗ ತೆಗೆದ ಚಿತ್ರವಿದು. ಮುದ್ದುಮೊಗದ ಚೆಲುವೆಯ ಹಣೆಯಲ್ಲಿನ ಸಿಂಧೂರ ಆಕೆಯ ಅಂದವನ್ನು ಇನ್ನೂ ಹೆಚ್ಚಿಸಿದೆ.

ರೈ ಕುಟುಂಬದೊಡನೆ ಮತ್ತೊಂದು ಚಿತ್ರದಲ್ಲಿ

ಐಶ್ವರ್ಯ ರೈ ಬಚ್ಚನ್ ಅವರು ತಮ್ಮ ತಂದೆ ಕೃಷ್ಣರಾಜ್ ರೈ, ಅಮ್ಮ ವೃಂದಾ ರೈ, ಅಣ್ಣ ಆದಿತ್ಯ ರೈ ಮತ್ತು ಅತ್ತಿಗೆ ಶ್ರೀಮಾ ರೈ ಜೊತೆ ತೆಗೆಸಿಕೊಂಡ ಫೋಟೋ ಆಲ್ಬಂನಿಂದ.

ತನ್ನ ನಾದಿನಿ ಶ್ವೇತಾ ನಂದಾ ಜೊತೆ ಐಶು

ಅಮಿತಾಬ್ ಬಚ್ಚನ್ ಅವರ ತಾಯಿ ಮತ್ತು ತನ್ನ ಅತ್ತೆ ತೇಜಿ ಬಚ್ಚನ್ ಅವರು ದೈವಾಧೀನರಾದಾಗ ತನ್ನ ನಾದಿನಿ (ಅಭಿಷೇಕ್ ಬಚ್ಚನ್ ಅಕ್ಕ) ಶ್ವೇತಾ ನಂದಾ ಜೊತೆ ಇದ್ದಾಗ ತೆಗೆದ ಚಿತ್ರ.

English summary
Aishwarya Rai Bachchan, one of the most admired and revered actresses and bahu of Bollywood's first family (Bachchans) remain in news always - whether or not she desires! Here we have some exclusive rare and unseen pictures of Aishwarya with her family - Both Rai and Bachchan.
Please Wait while comments are loading...