Don't Miss!
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- News
ದುರಂತದ ಬಳಿಕ ಹೆಬ್ಬಾಳ-ಕೆಆರ್ ಪುರಂ ಮೆಟ್ರೋ ಕಾಮಗಾರಿ ಸ್ಥಗಿತ: ಬರುತ್ತಿಲ್ಲ ಕಾರ್ಮಿಕರು, ಪಿಲ್ಲರ್ಗಳ ಮೇಲೆ ಕಂಡುಬಂದ ಹಸು ಚಿತ್ರ
- Technology
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಗಳ ಮರೆತು 23 ವರ್ಷದ ಬಳಿಕ ಮತ್ತೆ ಮಾತನಾಡಿದರು ರೇಖಾ-ಶತ್ರುಘ್ನ ಸಿನ್ಹಾ
ಬಾಲಿವುಡ್‌ನಲ್ಲಿ ಪ್ರೀತಿ ಪ್ರೇಮದ ಪ್ರಸಂಗಗಳು ಹೇಗೆ ಬಂದು ಹೋಗುತ್ತವೆಯೋ, ಹಾಗೆಯೇ ಮನಸ್ತಾಪ, ಜಗಳಗಳೂ ಸಹಜ. ಸಿನಿಮಾ ವೇಳೆ ನಡೆಯುವ ಕಿರಿಕ್‌ಗಳು ಎಷ್ಟೋ ಬಾರಿ ಅವರ ವೈಯಕ್ತಿಕ ಜೀವನದಲ್ಲಿಯೂ ಮುಂದುವರಿಯುತ್ತವೆ. ಕೊನೆಗೆ ಹೇಗೋ ಬಗೆಹರಿಯುತ್ತವೆ. ಹೀಗೆ ನಡೆದ ಜಗಳಗಳು ಎಷ್ಟೋ ವರ್ಷಗಳ ಬಳಿಕ ಸುಖಾಂತ್ಯ ಕಂಡ ಉದಾಹರಣೆಗಳಿವೆ.
Recommended Video
ಇನ್ನೂ ಕೆಲವು ಜಗಳದ ಘಟನೆಗಳಿವೆ. ಅವು ಬಗೆಹರಿದಿದ್ದೇ ಇಲ್ಲ. ಈಗಲೂ ಒಬ್ಬರ ಮುಖ ಇನ್ನೊಬ್ಬರು ನೋಡುವುದಿಲ್ಲ ಎಂಬಂತೆ ಜಗಳ ಕಾಯುವ ನಟ ನಟಿಯರಿದ್ದಾರೆ. ಕೆಲವು ಪಾರ್ಟಿಗಳಲ್ಲಿ, ಕಾರ್ಯಕ್ರಮಗಳಲ್ಲಿ ಅನಿವಾರ್ಯ ಭೇಟಿಯಾದಾಗ ತೋರಿಕೆಗಷ್ಟೇ ನಗುವ, ಮಾತನಾಡುವವರೂ ಇದ್ದಾರೆ. ಹೊರ ಜಗತ್ತಿನಲ್ಲಿ ತಮ್ಮದು ಅಪೂರ್ವ ಗೆಳೆತನ ಎಂದು ತೋರಿಸುವವರಿದ್ದಾರೆ. ಕೊನೆಗೆ ಅವರ ನಡುವಿನ ಮ್ಯೂಚುವಲ್ ಫ್ರೆಂಡ್ಸ್ ನಿಂತು ಈ ಕಿತ್ತಾಟಗಳನ್ನು ಬಗೆಹರಿಸಿದ್ದಿದೆ. ಅಂತಹದೇ ಜಗಳ ಹಿರಿಯ ಕಲಾವಿದರಾದ ಶತ್ರುಘ್ನ ಸಿನ್ಹಾ ಮತ್ತು ರೇಖಾ ಅವರದು. ಮುಂದೆ ಓದಿ...

ಕೊನೆಗೂ ಅಂತ್ಯವಾದ ಜಗಳ
ಇದು ಅಂತಿಂಥ ಜಗಳವಲ್ಲ. ಎರಡು ದಶಕಕ್ಕೂ ಹೆಚ್ಚು ಸಮಯ ಉಳಿದುಕೊಂಡಿದ್ದ ಮನಸ್ತಾಪ. ಕೊನೆಗೂ ಅಂತ್ಯಗೊಂಡಿತ್ತು. ಹಾಗೆಯೇ ಇದನ್ನು ಅವರೇ ಬಗೆಹರಿಸಿಕೊಂಡಿದ್ದಲ್ಲ. ಶತ್ರುಘ್ನ ಸಿನ್ಹ ಅವರ ಪತ್ನಿಯ ಮೂಲಕ 23 ವರ್ಷದ ಮುನಿಸು ಬಗೆಹರಿದಿತ್ತು.

ಚಿತ್ರೀಕರಣದ ವೇಳೆ ಕಿತ್ತಾಟ
ರಾಕೇಶ್ ರೋಷನ್ ನಿರ್ದೇಶನದ ಖೂನ್ ಭರಿ ಮಾಂಗ್ ಚಿತ್ರೀಕರಣದ ವೇಳೆ ರೇಖಾ ಹಾಗೂ ಶತ್ರುಘ್ನ ಸಿನ್ಹಾ ಕಿತ್ತಾಡಿಕೊಂಡಿದ್ದರಂತೆ. ಅಲ್ಲಿಂದ ಒಬ್ಬರ ಮುಖವನ್ನೊಬ್ಬರು ನೋಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಿದ್ದರಂತೆ. ಸಿನಿಮಾ ಚಿತ್ರೀಕರಣ ಇನ್ನೂ ಮುಗಿದಿರಲಿಲ್ಲ. ಹೀಗಾಗಿ ರಾಕೇಶ್ ರೋಷನ್ ಹೇಗೋ ಇಬ್ಬರ ಮನವೊಲಿಸಿ ಚಿತ್ರೀಕರಣ ಮುಗಿಯುವವರೆಗೂ ಜತೆ ಇರುವಂತೆ ಮಾಡಿದ್ದರಂತೆ.
ಅಮೀರ್
ಖಾನ್
ಜತೆ
ಸೀಕ್ರೇಟ್
ಮದುವೆಯಾಗಿದ್ದರೇ
ಗುಳಿಕೆನ್ನೆ
ಹುಡುಗಿ?:
ಪ್ರೀತಿ
ಜಿಂಟಾ
ಹೇಳಿದ
ಸತ್ಯ

23 ವರ್ಷ ಹಠ ಸಾಧಿಸಿದರು
ಹಾಗೆ ಸಿನಿಮಾ ಮುಗಿದ ಬಳಿಕ ಇಬ್ಬರೂ ಪರಸ್ಪರ ಷರತ್ತು ಹಾಕಿಕೊಂಡರು. ಇನ್ನು ಎಂದಿಗೂ ಪರಸ್ಪರ ಮಾತನಾಡುವುದಿಲ್ಲ ಎಂದು. ಆ ಹಠವನ್ನು ಸಾಧಿಸಿದರು ಕೂಡ. ಒಂದೆರಡಲ್ಲ, 23 ವರ್ಷ. ಸಾಮಾಜಿಕ ಬಾಂಧವ್ಯದ ಬಗ್ಗೆ ಬಹಿರಂಗವಾಗಿ ಮಾತನಾಡುವ ಇಬ್ಬರೂ, ವೈಯಕ್ತಿಕ ಬದುಕಿನಲ್ಲಿ ಮಾತ್ರ ರಾಜಿಯಾಗಿರಲಿಲ್ಲ.
ಕತ್ರೀನಾ
ಕೈಫ್
ಮೇಲೆ
ಕಳ್ಳತನದ
ಆರೋಪ
ಹೊರಿಸಿದ
ದೀಪಿಕಾ
ಪಡುಕೋಣೆ!

ಸಂಧಾನ ಮಾಡಿಸಿದ ಪೂನಂ ಸಿನ್ಹಾ
ಒಂದೊಳ್ಳೆಯ ದಿನ ಈ ಇಬ್ಬರು ಹಿರಿಯರ ಸಿಟ್ಟಿಗೆ ತಣ್ಣೀರು ಸಿಂಪಡಿಸಿ ಕಾವು ತಗ್ಗಿಸಿದ್ದು ಶತ್ರುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ. ಅಂದಹಾಗೆ ಪೂನಂ ಮತ್ತು ರೇಖಾ ಒಳ್ಳೆಯ ಸ್ನೇಹಿತೆಯರು. ಹಾಗೂ ಹೀಗೂ ಹರಸಾಹಸ ಪಟ್ಟ ಪೂನಂ, ಇಬ್ಬರ ಮನವೊಲಿಸಿ ಪಾರ್ಟಿಯೊಂದರಲ್ಲಿ ಅವರು ಷರತ್ತು ಮುರಿದು ಮಾತುಕತೆ ನಡೆಸುವ ಮೂಲಕ ಜಗಳವನ್ನು ಮುಕ್ತಾಯಗೊಳಿಸಿದರಂತೆ.