For Quick Alerts
  ALLOW NOTIFICATIONS  
  For Daily Alerts

  ಕೊಲೆಯಾಗಿಲ್ಲ ಸುಶಾಂತ್ ಸಿಂಗ್, ರಿಯಾ ಮೇಲೂ ಅನುಮಾನವಿಲ್ಲ: ತನಿಖಾ ಕೋನ ಬದಲು

  |

  ನಟ ಸುಶಾಂತ್ ಸಿಂಗ್ ಸಾವು ಪ್ರಕರಣದ ತನಿಖೆಯನ್ನು ಸಿಬಿಐ ಮಾಡುತ್ತಿದ್ದು, ಎಲ್ಲೆಲ್ಲೋ ಹರಿದಾಡಿದ್ದ ತನಿಖೆ ಇದೀಗ ಸರಳ ಹಾದಿಗೆ ಬರುತ್ತಿರುವಂತೆ ತೋರುತ್ತಿದೆ.

  ಸುಶಾಂತ್ ಅನ್ನು ಕೊಲೆ ಮಾಡಲಾಗಿದೆ ಎಂಬ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದರು. ಸುಶಾಂತ್ ಖಾತೆಯಿಂದ ಕೋಟ್ಯಂತರ ಹಣವನ್ನು ರಿಯಾ ಕೊಂಡೊಯ್ದಿದ್ದಾರೆ ಎಂದೂ ಹೇಳಲಾಗಿತ್ತು. ಇದೆಲ್ಲವೂ ರಿಯಾ ಮೇಲೆ ಅನುಮಾನ ಹೆಚ್ಚಾಗಲು ಕಾರಣವಾಗಿತ್ತು.

  'ಸುಶಾಂತ್ ಸಾವು ಕೊಲೆಯಲ್ಲ, ಆತ್ಮಹತ್ಯೆ': ಏಮ್ಸ್ ವಿಧಿವಿಜ್ಞಾನ ತಂಡದ ವರದಿ'ಸುಶಾಂತ್ ಸಾವು ಕೊಲೆಯಲ್ಲ, ಆತ್ಮಹತ್ಯೆ': ಏಮ್ಸ್ ವಿಧಿವಿಜ್ಞಾನ ತಂಡದ ವರದಿ

  ಸಿಬಿಐ ಸಹ ಆರಂಭದಲ್ಲಿ ಕೊಲೆಯ ಕೋನದಿಂದಲೇ ಪ್ರಕರಣದ ತನಿಖೆ ಶುರುವಿಟ್ಟುಕೊಂಡಿತ್ತು, ರಿಯಾ ಚಕ್ರವರ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಸುಶಾಂತ್ ತಂದೆ ಸಹ ರಿಯಾ ಮೇಲೆ ನೇರ ಆರೋಪ ಮಾಡಿ, ದೂರು ಸಹ ದಾಖಲಿಸಿದ್ದರು. ಆದರೆ ತನಿಖೆ ಮುಂದುವರೆದಂತೆ, ಕೊಲೆಯ ಕೋನವನ್ನು ಸಿಬಿಐ ಕೈಬಿಟ್ಟಿದೆ ಎನ್ನಲಾಗುತ್ತಿದೆ.

  ಏಮ್ಸ್ ವೈದ್ಯರ ತಜ್ಞ ಅಭಿಪ್ರಾಯ ಪಡೆದ ಸಿಬಿಐ

  ಏಮ್ಸ್ ವೈದ್ಯರ ತಜ್ಞ ಅಭಿಪ್ರಾಯ ಪಡೆದ ಸಿಬಿಐ

  ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಸುಶಾಂತ್‌ರ ಮರಣೋತ್ತರ ಪರೀಕ್ಷೆ, ಒಳಾಂಗಗಳ ಪರೀಕ್ಷೆ, ಸುಶಾಂತ್ ಗೆ ಸಂಬಂಧಿಸಿದವರ ವಿಚಾರಣೆ ಎಲ್ಲದರ ಬಳಿಕ ಹಾಗೂ ಏಮ್ಸ್ ಆಸ್ಪತ್ರೆಯ ವೈದ್ಯರ ತಜ್ಞ ಅಭಿಪ್ರಾಯ ಪಡೆದ ಬಳಿಕ, ಸುಶಾಂತ್ ರದ್ದು ಕೊಲೆಯಲ್ಲ ಎಂಬ ನಿರ್ಣಯಕ್ಕೆ ಬಂದಿದೆ.

  ಸುಶಾಂತ್ ಹಣವನ್ನು ರಿಯಾ ಕೊಂಡೊಯ್ದಿಲ್ಲ

  ಸುಶಾಂತ್ ಹಣವನ್ನು ರಿಯಾ ಕೊಂಡೊಯ್ದಿಲ್ಲ

  ಸುಶಾಂತ್ ಖಾತೆಯಲ್ಲಿದ್ದ ಕೋಟ್ಯಂತರ ಹಣವನ್ನು ರಿಯಾ ಖಾತೆಗೆ ವರ್ಗಾಯಿಸಲಾಗಿದೆ. ಸುಶಾಂತ್ ಗೆ ಸೇರಿದ ಕೋಟ್ಯಂತರ ಹಣವನ್ನು ರಿಯಾ ಕದ್ದೊಯ್ದಿದ್ದಾರೆ ಎಂದು ಸಹ ದೂರು ನೀಡಿದ್ದರು. ಸುಶಾಂತ್ ತಂದೆ. ಇದರ ತನಿಖೆ ನಡೆಸಿರುವ ಸಿಬಿಐ, ರಿಯಾ, ಸುಶಾಂತ್ ಗೆ ಸೇರಿದ ಹಣ ಒಯ್ದಿಲ್ಲ ಎಂಬ ನಿರ್ಣಯಕ್ಕೆ ಬಂದಿದೆ.

  ಸುಶಾಂತ್ ಪ್ರಕರಣ: ಕೊಲೆ ಅನುಮಾನ ಇನ್ನೂ ಪರಿಹಾರವಾಗಿಲ್ಲ ಎಂದ ಸಿಬಿಐಸುಶಾಂತ್ ಪ್ರಕರಣ: ಕೊಲೆ ಅನುಮಾನ ಇನ್ನೂ ಪರಿಹಾರವಾಗಿಲ್ಲ ಎಂದ ಸಿಬಿಐ

  ಆತ್ಮಹತ್ಯೆಗೆ ಕಾರಣ ಹುಡುಕುತ್ತಿರುವ ಸಿಬಿಐ

  ಆತ್ಮಹತ್ಯೆಗೆ ಕಾರಣ ಹುಡುಕುತ್ತಿರುವ ಸಿಬಿಐ

  ಕೆಲವು ದಿನಗಳ ಹಿಂದಷ್ಟೆ ಮಾಧ್ಯಮದೊಟ್ಟಿಗೆ ಮಾತನಾಡಿದ್ದ ಸಿಬಿಐ ಅಧಿಕಾರಿ, ಕೊಲೆ ಕೋನವನ್ನು ತನಿಖೆಯಿಂದ ಕೈಬಿಟ್ಟಿಲ್ಲ ಎಂದಿದ್ದರು. ಆದರೆ ಏಮ್ಸ್ ವೈದ್ಯರ ತಜ್ಞ ಅಭಿಪ್ರಾಯ ಬಂದ ಬಳಿಕ, ಕೊಲೆ ಅನುಮಾನ ಕೈಬಿಟ್ಟು, ಆತ್ಮಹತ್ಯೆಗೆ ಕಾರಣ ಹುಡುಕುವ ಕಾರ್ಯ ಆರಂಭಿಸಿದ್ದಾರೆ ಎನ್ನಲಾಗಿದೆ.

  ಅತ್ತಿಗೆಯನ್ನು ಧ್ರುವ ಎಷ್ಟು ಪ್ರೀತಿಸುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ | Filmibeat Kannada
  ರಿಯಾ ಚಕ್ರವರ್ತಿಗೆ ಜಾಮೀನು

  ರಿಯಾ ಚಕ್ರವರ್ತಿಗೆ ಜಾಮೀನು

  ಸುಶಾಂತ್ ಪ್ರಕರಣದ ತನಿಖೆಯಿಂದಲೇ ಹೊರಬಿದ್ದಿರುವ ಬಾಲಿವುಡ್ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೊವಿಕ್ ಚಕ್ರವರ್ತಿ, ಸುಶಾಂತ್ ಮಾಜಿ ಮ್ಯಾನೇಜರ್ ಹಾಗೂ ಇನ್ನೂ ಹಲವು ಮಂದಿಯನ್ನು ಎನ್‌ಸಿಬಿ ಬಂಧಿಸಿದೆ. ಇಂದು ರಿಯಾ ಚಕ್ರವರ್ತಿಗೆ ಜಾಮೀನು ದೊರೆತಿದೆ. ಇನ್ನುಳಿದ ಯಾರಿಗೂ ಜಾಮೀನು ದೊರೆತಿಲ್ಲ.

  'ಸುಶಾಂತ್ ಸಿಂಗ್ ಪ್ರೀತಿಯಲ್ಲಿ ನಿಯತ್ತಾಗಿ ಇರಲಿಲ್ಲ' ಎಂದ ಸಾರಾ ಅಲಿ ಖಾನ್.!'ಸುಶಾಂತ್ ಸಿಂಗ್ ಪ್ರೀತಿಯಲ್ಲಿ ನಿಯತ್ತಾಗಿ ಇರಲಿಲ್ಲ' ಎಂದ ಸಾರಾ ಅಲಿ ಖಾನ್.!

  English summary
  CBI almost dropped murder angle in Sushant Singh case. It also finds that Rhea did not took Sushant Singh's money.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X