For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಪ್ರೇಯಸಿಯರ ಕಿತ್ತಾಟ: ಅಂಕಿತಾ ಲೋಖಂಡೆಯನ್ನು ತರಾಟೆಗೆ ತೆಗೆದುಕೊಂಡ ರಿಯಾ

  |

  ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಪ್ರೇಯಸಿ ರಿಯಾ ಚಕ್ರವರ್ತಿ ಮೊದಲ ಬಾರಿಗೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮತ್ತು ತನ್ನ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ರಿಯಾ ಮೊದಲ ಬಾರಿ ಮೌನ ಮುರಿದಿದ್ದಾರೆ. ಇತ್ತೀಚೆಗೆ ಖಾಸಗಿ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ರಿಯಾ, ಸುಶಾಂತ್ ಸಿಂಗ್ ಮಾಜಿ ಪ್ರೇಯಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  ಸುಶಾಂತ್ ಖರೀದಿ ಮಾಡಿದ್ದ ಫ್ಲಾಟ್ ನಲ್ಲಿ ಅಂಕಿತಾ ಲೋಖಂಡೆ ಇನ್ನೂ ಹೇಗೆ ವಾಸಿಸುತ್ತಿದ್ದಾರೆ ಎಂದು ರಿಯಾ ಪ್ರಶ್ನೆ ಮಾಡಿದ್ದಾರೆ. ಅಷ್ಟೆ ಅಲ್ಲದೆ ಅಂಕಿತಾ, ವಿಕ್ಕಿ ಜೈನ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದರೂ ಸುಶಾಂತ್ ಗೆ ತುಂಬಾ ಆಪ್ತರಾಗಿದ್ದಾರೆ. ಈಗ ಅದ್ಭುತ ವ್ಯಕ್ತಿಯಂತೆ ನಟಿಸುತ್ತಾ ಹೊರ ಬಂದಿದ್ದಾರೆ. ಆಕೆ ಸವತಿ ಹಾಗೂ ವಿಧವೆ ಹಾಗೆ ನಟಿಸುತ್ತಿದ್ದಾರೆ ಎಂದು ರಿಯಾ ಕಿಡಿಕಾರಿದ್ದಾರೆ.

  ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿ, ಪಾದ ಮುಟ್ಟಿ ನಮಸ್ಕರಿಸಿದ್ದೆ: ರಿಯಾ ಚಕ್ರವರ್ತಿ

  ಸುಶಾಂತ್ ಸಿಂಗ್ ಒಂದು ವರ್ಷದ ಹಿಂದೆಯೇ ಅಂಕಿತಾರನ್ನು ಕರೆದು, ರಿಯಾ ಚಕ್ರವರ್ತಿ ಕಿರುಕುಳ ನೀಡುತ್ತಿದ್ದಾಳೆ ಎಂದು ಹೇಳಿರುವುದಾಗಿ ಅಂಕಿತಾ ತಿಳಿಸಿದ್ದರು. ಈ ಮಾತಿಗೆ ರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಶಾಂತ್ ಸಿಂಗ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ಅಂಕಿತಾ ಸುಶಾಂತ್ ಫ್ಲಾಟ್ ನ ಗೋಡೆ ಒಡೆದು ಜಾಗ ಮಾಡಿಕೊಂಡು ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

  ಸುಶಾಂತ್ ಸಾವಿನ ಬಳಿಕ ಏನೆಲ್ಲ ಆಯಿತು ಎಂದು ರಿಯಾ ಮೊದಲ ಬಾರಿಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೆ ರಿಯಾ ಮಾತನ್ನು ಸುಶಾಂತ್ ಕುಟುಂಬದವರು ತಳ್ಳಿ ಹಾಕಿದ್ದಾರೆ. ಸ್ಕ್ರಿಪ್ಟ್ ಬರೆದು ಕೊಟ್ಟಿದ್ದು ಯಾರು? ಎಂದು ರಿಯಾಗೆ ಪ್ರಶ್ನಿಸುತ್ತಿದ್ದಾರೆ.

  ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಸುಶಾಂತ್ ಪ್ರಕರಣ ಸಿಬಿಐ ಅಂಗಳದಲ್ಲಿದೆ. ರಿಯಾ ಚಕ್ರವರ್ತಿ ಇಂದು ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ. ಈಗಾಗಲೆ ಸಿಬಿಐ ಅಧಿಕಾರಿಗಳು ಸುಶಾಂತ್ ಸಿಂಗ್ ಸ್ನೇಹಿತರು ಮತ್ತು ಮನೆಯ ಸಿಬ್ಬಂದಿಯನ್ನು ವಿಚಾರಣೆ ಮಾಡಿದ್ದಾರೆ.

  English summary
  Rhea Chakraborty hits back to Ankita Lokhande, She Takes Avatar of Sushant's Vidhwa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X