For Quick Alerts
  ALLOW NOTIFICATIONS  
  For Daily Alerts

  ರಿಯಾ ಚಕ್ರವರ್ತಿಯ ನ್ಯಾಯಾಂಗ ಬಂಧನ ಮತ್ತೆ ವಿಸ್ತರಿಸಿದ ಕೋರ್ಟ್

  |

  ಸುಶಾಂತ್ ಸಿಂಗ್ ಸಾವಿನ ಸಂಬಂಧ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಿಯಾ ಚಕ್ರವರ್ತಿ ಹಾಗೂ ಇನ್ನಿತರ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ.

  ಅಕ್ಟೋಬರ್ 20ರವರೆಗೂ ರಿಯಾ ಚಕ್ರವರ್ತಿ, ಶೌವಿಕ್ ಚಕ್ರವರ್ತಿ ಸೇರಿದಂತೆ ಎಲ್ಲರಿಗೂ ನ್ಯಾಯಾಂಗ ಬಂಧನ ಮುಂದುವರಿಸಲು ಕೋರ್ಟ್ ಆದೇಶಿಸಿದೆ.

  ಅಕ್ಟೋಬರ್ 6ರವರೆಗೂ ರಿಯಾ ಚಕ್ರವರ್ತಿಗೆ ಜೈಲು, ಕೋರ್ಟ್ ಆದೇಶಅಕ್ಟೋಬರ್ 6ರವರೆಗೂ ರಿಯಾ ಚಕ್ರವರ್ತಿಗೆ ಜೈಲು, ಕೋರ್ಟ್ ಆದೇಶ

  ಮಂಗಳವಾರ ರಿಯಾ, ಶೌವಿಕ್, ಸುಶಾಂತ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ಸೇರಿದಂತೆ 17 ಜನರ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆ ಕೋರ್ಟ್ ಮುಂದೆ ಹಾಜರು ಪಡಿಸಲಾಗಿತ್ತು.

  ಮತ್ತೊಂದೆಡೆ ಬಾಂಬೆ ಹೈ ಕೋರ್ಟ್ ರಿಯಾ ಹಾಗೂ ಸಹೋದರ ಶೌವಿಕ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಆದೇಶ ಕಾಯ್ದಿರಿಸಿದೆ.

  ವರದಿಗಳ ಪ್ರಕಾರ, ಎನ್‌ಸಿಬಿ ತನ್ನ ಸೂಚನೆಯಂತೆ ರಿಯಾ ಚಕ್ರವರ್ತಿ ಮತ್ತು ಸಹೋದರ ಶೌವಿಕ್, ಸುಶಾಂತ್ ಸಿಂಗ್‌ಗೆ ಡ್ರಗ್ಸ್ ಸಪ್ಲೈ ಮಾಡಿದ್ದರು ಎಂದು ಆರೋಪಿಸಿದೆ. ಆದ್ರೆ, ಈ ಆರೋಪವನ್ನು ರಿಯಾ ತಳ್ಳಿ ಹಾಕಿದ್ದು, ತಾನು ತಪ್ಪು ಮಾಡಿಲ್ಲ ಎಂದು ಸಾಬೀತು ಪಡಿಸುವ ಹಾದಿಯಲ್ಲಿದ್ದಾರೆ.

  English summary
  Special NDPS Court extends judicial custody of Rhea Chakraborty, Showik Chakraborty and others till 20th October.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X