For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿ, ಪಾದ ಮುಟ್ಟಿ ನಮಸ್ಕರಿಸಿದ್ದೆ: ರಿಯಾ ಚಕ್ರವರ್ತಿ

  |

  ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದ್ದು, ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ. ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಾಟ್ಸಪ್ ಚಾಟ್ ಲೀಕ್ ಆಗಿದ್ದು ಸಾಕಷ್ಟು ಮಾಹಿತಿಗಳು ಬಹಿರಂಗವಾಗಿದೆ. ರಿಯಾ ಡ್ರಗ್ಸ್ ಜಾಲದಲ್ಲಿ ತೊಡಗಿಕೊಂಡಿದ್ದರು ಎಂಬ ಆರೋಪವೂ ಇದೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಡ್ರಗ್ಸ್ ಡೀಲರ್ ಜೊತೆ ರಿಯಾ ಚಕ್ರವರ್ತಿ ಸಂಪರ್ಕದಲ್ಲಿದ್ದರು, ಸುಶಾಂತ್ ಸಿಂಗ್ ಗೆ ಡ್ರಗ್ ನೀಡುತ್ತಿದ್ದರು ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ನಡುವೆ ರಿಯಾ ಮಾಧ್ಯಮದ ಮುಂದೆ ಹಾಜರಾಗಿದ್ದಾರೆ. ಸುಶಾಂತ್ ನಿಧನದ ಬಳಿಕ ರಿಯಾ ಮೊದಲ ಬಾರಿಗೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಸುಶಾಂತ್ ಮನೆಯಿಂದ ಹೊರನಡೆದ ಬಳಿಕ ಏನಾಯಿತು, ಸುಶಾಂತ್ ನಿಧನದ ದಿನ ಎಲ್ಲಿದ್ದರು? ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

   ಜೂನ್ 8 ರಿಂದ 14ರ ನಡುವೆ ಯಾವುದೇ ಮಾತುಕತೆ ಇರಲಿಲ್ಲ

  ಜೂನ್ 8 ರಿಂದ 14ರ ನಡುವೆ ಯಾವುದೇ ಮಾತುಕತೆ ಇರಲಿಲ್ಲ

  ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ರಿಯಾ, ಜೂನ್ 8 ರಿಂದ 14ರ ನಡುವೆ ಸುಶಾಂತ್ ಮತ್ತು ನನ್ನ ನಡುವೆ ಯಾವುದೇ ಮಾತುಕತೆ ಇರಲಿಲ್ಲ. ಅವರ ಸಹೋದರಿ ಮೀತುಜೀ ಅಲ್ಲಿದ್ದರು. ಅದಕ್ಕಾಗಿ ನಾನು ಸಿಬಿಐ ವಿಚಾರಣೆಗೆ ವಿನಂತಿಸಿದೆ" ಎಂದಿದ್ದಾರೆ.

   ಸುಶಾಂತ್ ನಂಬರ್ ಬ್ಲಾಕ್ ಮಾಡಿದ್ದೆ

  ಸುಶಾಂತ್ ನಂಬರ್ ಬ್ಲಾಕ್ ಮಾಡಿದ್ದೆ

  ಜೂನ್ 9ರಂದು ಸುಶಾಂತ್ ಕಡೆಯಿಂದ ಕೊನೆಯ ಸಂದೇಶ ಬಂದಿತ್ತು. "ಹೇಗಿದ್ದೆಯಾ ನನ್ನ ಬೆಬು?" ಎಂದು ಸಂದೇಶ ಕಳುಹಿಸಿದ್ದರು. ಆದರೆ ಸುಶಾಂತ್ ಗೆ ಇನ್ಮುಂದೆ ನಾನು ಬೇಡವೇನೋ ಎಂದು ಜೂನ್ 9ರಂದು ನಂಬರ್ ಬ್ಲಾಕ್ ಮಾಡಿದೆ. ನನ್ನ ಪೋಷಕರಿಗೆ ಇದು ಗೊತ್ತಿರಲಿಲ್ಲ. ಸುಶಾಂತ್ ನಂಬರ್ ಬ್ಲಾಕ್ ಮಾಡಿದ ಬಳಿಕ ನನ್ನ ಸಹೋದರನ ಜೊತೆ ಸಂಪರ್ಕದಲ್ಲಿದ್ದರು. ರಿಯಾ ಹೇಗಿದ್ದಾಳೆ ಎಂದು ನನ್ನ ಸಹೋದರನಿಗೆ ಸಂದೇಶ ಕಳುಹಿಸಿದ್ದಾರೆ. ಆದರೆ ಜೂನ್ 8ರಂದು ಏನಾಯಿತು ಎಂದು ಹೇಳಲಿಲ್ಲ. ಅಲ್ಲದೆ ಮತ್ತೆ ಬಾ ಎಂದು ಸಹ ಕರೆಯಲಿಲ್ಲ. ಇದು ನನಗೆ ಆಘಾತವಾಯಿತು, ಇನ್ಮುಂದೆ ನಾನು ಸುಶಾಂತ್ ಗೆ ಬೇಡವೇನೋ ಎಂದು ಕೊಂಡೆ" ಎಂದಿದ್ದಾರೆ.

   ಸುಶಾಂತ್ ಸಹೋದರಿ ಯಾಕೆ ಏನು ಹೇಳುತ್ತಿಲ್ಲ?

  ಸುಶಾಂತ್ ಸಹೋದರಿ ಯಾಕೆ ಏನು ಹೇಳುತ್ತಿಲ್ಲ?

  "ಸುಶಾಂತ್ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದೆ. ಇವತ್ತೂ ನಾನು ಸುಶಾಂತ್ ಸಾವನ್ನು ಸ್ವೀಕರಿಸಿಲ್ಲ. ದುಃಖ ಪಡುವುದು ಮಾನವನ ಹಕ್ಕು, ಆದರೆ ಅದು ನನಗೆ ಶ್ರೀಮಂತವಾಗಿದೆ. ಸುಶಾಂತ್ ಸಹೋದರಿ ಮೀತು ಅವರು ಅಲ್ಲೆ ಇದ್ದರು. ಅವರು ಯಾಕೆ ಮುಂದೆ ಬಂದು ಏನಾಯಿತು ಎಂದು ಎಲ್ಲರಿಗೂ ಹೇಳುತ್ತಿಲ್ಲ?" ಎಂದು ಪ್ರಶ್ನೆ ಮಾಡಿದ್ದಾರೆ.

   ಸುಶಾಂತ್ ಯಾವತ್ತು ಆತ್ಮಹತ್ಯೆ ಬಗ್ಗೆ ಮಾತನಾಡಲಿಲ್ಲ

  ಸುಶಾಂತ್ ಯಾವತ್ತು ಆತ್ಮಹತ್ಯೆ ಬಗ್ಗೆ ಮಾತನಾಡಲಿಲ್ಲ

  ಸುಶಾಂತ್ ಸಿಂಗ್ ಜೊತೆ ಯಾವತ್ತಾದರೂ ಆತ್ಮಹತ್ಯೆ ಬಗ್ಗೆ ಮಾತನಾಡಿದ್ದೀರಾ? ಎಂದು ಕೇಳಿದ ಪ್ರಶ್ನೆಗೆ ರಿಯಾ, "ಖಿನ್ನತೆಯಿಂದ ಬಳಲುತ್ತಿದ್ದರಿಂದ ನಾನು ಅವರನ್ನು, ನೀವು ಯಾವಾಗಲು ಹೀಗೆ ಮಾಡುವುದಿಲ್ಲ ಅಲ್ವಾ? ಎಂದು ಕೇಳಿದ್ದೆ. ಅದಕ್ಕೆ ಸುಶಾಂತ್ ಖಂಡಿತ ಇಲ್ಲ ಎಂದು ಹೇಳಿದ್ದರು." ಎಂದಿದ್ದಾರೆ.

   ಸುಶಾಂತ್ ಸಾವಿನ ಸುದ್ದಿ ಕೇಳಿ ವದಂತಿ ಎಂದುಕೊಂಡಿದ್ದೆ

  ಸುಶಾಂತ್ ಸಾವಿನ ಸುದ್ದಿ ಕೇಳಿ ವದಂತಿ ಎಂದುಕೊಂಡಿದ್ದೆ

  ಜೂನ್ 14 ಸುಶಾಂತ್ ಸಿಂಗ್ ನಿಧನದ ಸುದ್ದಿಯನ್ನು ಸ್ನೇಹಿತರೊಬ್ಬರು ಫೋನ್ ಮಾಡಿ ಹೇಳಿದರು. ನಾನು ಆಗ ಈ ರೀತಿಯ ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ ಎಂದು ಹೇಳಿದೆ. 10-15 ನಿಮಿಷಗಳ ಬಳಿಕ ಸುಶಾಂತ್ ಸಾವಿನ ಸುದ್ದಿ ಅಧಿಕೃತ ಎಂದು ಗೊತ್ತಾಯಿತು. ನಾನು ಆಗ ನನ್ನ ಸಹೋದರನ ಜೊತೆ ಇದ್ದೆ" ಎಂದಿದ್ದಾರೆ.

   ಸುಶಾಂತ್ ಅಂತ್ಯಕ್ರಿಯಲ್ಲಿ ರಿಯಾ ಯಾಕೆ ಭಾಗಿಯಾಗಿಲ್ಲ?

  ಸುಶಾಂತ್ ಅಂತ್ಯಕ್ರಿಯಲ್ಲಿ ರಿಯಾ ಯಾಕೆ ಭಾಗಿಯಾಗಿಲ್ಲ?

  ಸುಶಾಂತ್ ಅಂತ್ಯಕ್ರಿಯೆಯಲ್ಲಿ ರಿಯಾ ಭಾಗಿಯಾಗಿರಲಿಲ್ಲ. ಈ ಬಗ್ಗೆ ಮಾತನಾಡಿದ ರಿಯಾ "ನಾನು ಸಂಪೂರ್ಣವಾಗಿ ಶಾಕ್ ಆಗಿದ್ದೆ. ಸುಶಾಂತ್ ಅಂತ್ಯಕ್ರಿಯೆಯಲ್ಲಿ ಯಾರೆಲ್ಲ ಭಾಗಿಯಾಗಬೇಕು ಎನ್ನುವ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ಚಿತ್ರರಂಗದ ಅನೇಕರ ಹೆಸರು ಇತ್ತು. ಅವರ ಕುಟುಂಬದವರಿಗೆ ನಾನು ಅಲ್ಲಿಗೆ ಹೋಗುವುದು ಇಷ್ಟವಿರಲಿಲ್ಲ" ಎಂದಿದ್ದಾರೆ.

   ಸಾವನ್ನು ತಮಾಷೆ ಮಾಡುತ್ತಿದ್ದಾರೆ

  ಸಾವನ್ನು ತಮಾಷೆ ಮಾಡುತ್ತಿದ್ದಾರೆ

  "ಸುಶಾಂತ್ ದೇಹವನ್ನು 3 ಸೆಕೆಂಡ್ ನೋಡಿದೆ. ಕ್ಷಮಿಸಿ ಎಂದು ಹೇಳಿ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದೆ" ಎಂದು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ 'ಕ್ಷಮಿಸಿ ಬಾಬು' ಎಂದು ಹೇಳಿ ಕಣ್ಣೀರು ಹಾಕಿರುವ ಬಗ್ಗೆ ವರದಿಗಳು ಬಿತ್ತರವಾದವು. ಇದನ್ನು ಅನೇಕರು ತಮಾಷೆ ಮಾಡಿದರು. ಇಂದು ನೀವು ಇಲ್ಲ. ನಿಮ್ಮ ಸಾವನ್ನು ತಮಾಷೆಯಾಗಿ ಪರಿವರ್ತಿಸಲಾಗಿದೆ. ಎಂದು ರಿಯಾ ಚಕ್ರವರ್ತಿ ಸುಶಾಂತ್ ಸಾವಿನ ಸಮಯದ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

  English summary
  Rhea Chakraborty reaction on Sushant Singh death. She says that I am sorry and I touched his feet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X