Don't Miss!
- News
ಇಂದಿರಾ, ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕ: ಉತ್ತರಖಂಡ ಸಚಿವ ವಿವಾದ
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Sports
ಕೌಂಟಿ ಚಾಂಪಿಯನ್ಶಿಪ್: ಲೂಸಿಸ್ಟರ್ಶೈರ್ ಪರ ಆಡಲಿದ್ದಾರೆ ಅಜಿಂಕ್ಯಾ ರಹಾನೆ
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೈಲಿನ ದಿನಗಳನ್ನು ಹೇಗೆ ಕಳೆದರು ರಿಯಾ ಚಕ್ರವರ್ತಿ?
ಮಾದಕ ವಸ್ತು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಸುಶಾಂತ್ ಪ್ರೇಯಸಿ ನಟಿ ರಿಯಾ ಚಕ್ರವರ್ತಿ ಗೆ ನಿನ್ನೆಯಷ್ಟೆ ಜಾಮೀನು ದೊರೆತಿದ್ದು, ಜೈಲಿನಿಂದ ಬಿಡುಗಡೆಯಾಗ ಮನೆಗೆ ಮರಳಿದ್ದಾರೆ.
ಸೆಪ್ಟೆಂಬರ್ 8 ರಂದು ರಿಯಾ ಚಕ್ರವರ್ತಿ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಸುಮಾರು ಒಂದು ತಿಂಗಳು ಅವರು ಮುಂಬೈನ ಬೈಕುಲ್ಲಾ ಜೈಲಿನಲ್ಲಿದ್ದರು.
ರಿಯಾ
ಚಕ್ರವರ್ತಿಯ
ನ್ಯಾಯಾಂಗ
ಬಂಧನ
ಮತ್ತೆ
ವಿಸ್ತರಿಸಿದ
ಕೋರ್ಟ್
ನಟಿಯಾಗಿ ಐಶಾರಾಮಿ ಜೀವನ ಸಾಗಿಸುತ್ತಿದ್ದ ರಿಯಾ ಚಕ್ರವರ್ತಿಗೆ ಜೈಲು ಜೀವನ ಬಹಳ ಕಠಿಣವಾಗಿತ್ತೆಂಬುದೇ ಎಲ್ಲರ ಊಹೆ. ಹಾಗಿದ್ದರೆ ಈ ಒಂದು ತಿಂಗಳ ಅವಧಿಯನ್ನು ರಿಯಾ ಹೇಗೆ ಕಳೆದರು. ಜೈಲಿನಿಲ್ಲಿ ಹೇಗಿದ್ದರು. ಜೈಲಿನಲ್ಲಿ ಅವರು ಏನು ಮಾಡುತ್ತಿದ್ದರು? ಎಲ್ಲವನ್ನು ರಿಯಾ ಅವರ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಯೋಗ ಧ್ಯಾನದ ಮೊರೆ ಹೋಗಿದ್ದ ರಿಯಾ
ಉತ್ತಮ ಯೋಗಾ ಪಟು ಆಗಿರುವ ರಿಯಾ ಚಕ್ರವರ್ತಿ ಜೈಲಿನಲ್ಲಿ ಪ್ರತಿದಿನ ಯೋಗ ಮಾಡುತ್ತಿದ್ದರಂತೆ. ಒತ್ತಡ ಕಳೆದುಕೊಳ್ಳಲು ಧ್ಯಾನ ಮಾಡುತ್ತಿದ್ದರಂತೆ. ಯೋಗ ಮತ್ತು ಧ್ಯಾನಗಳಲ್ಲಿ ಬಹುತೇಕ ಸಮಯವನ್ನು ಅವರು ಕಳೆಯುತ್ತಿದ್ದರಂತೆ.

ಇತರೆ ಬಂಧಿತರಿಗೂ ಯೋಗ ತರಬೇತಿ
ರಿಯಾ ಮಾತ್ರವೇ ಯೋಗ ಮಾಡುತ್ತಿರಲಿಲ್ಲವಂತೆ, ಬದಲಿಗೆ ಅಲ್ಲಿದ್ದ ಇತರೆ ಬಂಧಿತರಿಗೂ ಯೋಗ ಹೇಳಿಕೊಟ್ಟರಂತೆ. ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಇತರರಿಗೂ ರಿಯಾ ಚಕ್ರವರ್ತಿ ಪ್ರತಿದಿನ ಯೋಗ ಹೇಳಿಕೊಡುತ್ತಿದ್ದರಂತೆ. ಹೀಗೆ ದಿನ ಕಳೆಯುತ್ತಿದ್ದರಂತೆ ರಿಯಾ.
ಬೈಕುಲ್ಲಾ
ಜೈಲಿನಿಂದ
ಹೊರಬಂದ
ಸುಶಾಂತ್
ಪ್ರೇಯಸಿ
ರಿಯಾ
ಚಕ್ರವರ್ತಿ

ಷರತ್ತುಬದ್ಧ ಜಾಮೀನು ಮಂಜೂರು
ರಿಯಾ ಗೆ ಬಾಂಬೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ವಿಧಿಸಿದ್ದು, ಒಂದು ಲಕ್ಷ ರೂಪಾಯಿ ಬಾಂಡ್ ಅನ್ನು ಪಡೆದುಕೊಂಡಿದೆ. ಒಂದು ವಾರಗಳ ಕಾಲ ಠಾಣೆಗೆ ಹೋಗಿ ಸಹಿ ಹಾಕಲು ಸೂಚಿಸಿದೆ. ಜೊತೆಗೆ ಪಾಸ್ ಪೋರ್ಟ್ ಅನ್ನು ಪೊಲೀಸರಿಗೆ ಒಪ್ಪಿಸುವಂತೆ ಸಹ ಹೇಳಲಾಗಿದೆ.

ರಿಯಾ ಸಹೋದರನಿಗೆ ಇಲ್ಲ ಜಾಮೀನು
ಮಾದಕ ವಸ್ತು ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ, ಸುಶಾಂತ್ ನ ಮಾಜಿ ಮ್ಯಾನೇಜರ್ ಸೇರಿ ಒಟ್ಟು 16 ಮಂದಿಗೆ ಜಾಮೀನು ನಿರಾಕರಿಸಲಾಗಿದ್ದು, ಅವರ ನ್ಯಾಯಾಂಗ ಬಂಧನ ವಿಸ್ತರಣೆಗೊಂಡಿದೆ.