For Quick Alerts
  ALLOW NOTIFICATIONS  
  For Daily Alerts

  ED ವಿಚಾರಣೆ ವೇಳೆ ಇನ್ನೊಂದು ಫೋನ್ ಬಳಸುತ್ತಿದ್ದ ವಿಚಾರವನ್ನು ಮುಚ್ಚಿಟ್ಟಿದ್ದೇಕೆ ರಿಯಾ ಚಕ್ರವರ್ತಿ?

  |

  ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಎರಡು ತಿಂಗಳಾಗುತ್ತಾ ಬಂತು. ಇನ್ನೂ ವಿಚಾರಣೆ ಪೂರ್ಣಗೊಂಡಿಲ್ಲ. ಇದೀಗ ಸುಶಾಂತ್ ಸಿಂಗ್ ಕೇಸ್ ಸಿಬಿಐ ಅಂಗಳದಲ್ಲಿದೆ.

  Unseen “Nightout” Behind the scene video | Filmibeat Kannada

  ಸುಶಾಂತ್ ಸಿಂಗ್ ಮತ್ತು ಪ್ರೇಯಸಿ ರಿಯಾ ಚಕ್ರವರ್ತಿ ನಡುವೆ ಹಣಕಾಸಿನ ವ್ಯವಹಾರಗಳ ವಿಚಾರಣೆ ನಡೆಯುತ್ತಿದ್ದು, ರಿಯಾ ಚಕ್ರವರ್ತಿ ಮತ್ತು ಸಹೋದರ ಶೋಯಿಕ್ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ. ಶುಕ್ರವಾರ ರಿಯಾ ಮತ್ತು ಸಹೋದರನನ್ನು ಸುಮಾರು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.

  ವಿಚಾರಣೆಯಲ್ಲಿ ರಿಯಾ ಬಳಸುತ್ತಿದ್ದ ಎಲೆಕ್ಟ್ರಾನಿಕ್ ಸಾಧನಗಳನ್ನು ಸಲ್ಲಿಸುವಂತೆ ಹೇಳಲಾಗಿತ್ತು. ಆದರೆ ರಿಯಾ ಬಳಲುತ್ತಿದ್ದ ಎರಡು ಫೋನ್ ನಲ್ಲಿ ಒಂದು ಫೋನ್ ಅನ್ನು ಮಾತ್ರ ನೀಡಿದ್ದರು. ಆದರೆ ಇಡಿ ವಿಚಾರಣೆ ವೇಳೆ ರಿಯಾ ರಹಸ್ಯವಾಗಿಟ್ಟಿದ್ದ ಫೋನ್ ವಿಚಾರ ಬಹಿರಂಗವಾಗಿದೆ.

  ಇಡಿ ವಿಚಾರಣೆ ವೇಳೆ ರಿಯಾ ಎರಡು ಫೋನ್ ಬಳಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೆ ರಿಯಾ ಬಳಸುತ್ತಿದ್ದ ಒಂದು ಫೋನ್ ಕಾಲ್ ರೆಕಾರ್ಡ್ ಕಲೆಹಾಕಲಾಗಿದೆ. ಇದೀಗ ರಿಯಾ ಬಳಲುತ್ತಿದ್ದ ಇನ್ನೊಂದು ಫೋನ್ ಅನ್ನು ಅಧಿಕಾರಿಗಳು ವಶಪಡಿಸಿಕೊಳ್ಳಲಾಗಿದ್ದು ಕಾಲ್ ಡೀಟೈಲ್ಸ್ ಅನ್ನು ಕಲೆ ಹಾಕಲಾಗುತ್ತಿದೆ. ಹಾಗಾಗಿ ಮತ್ತಷ್ಟು ವಿಚಾರ ಬಹಿರಂಗವಾಗುವ ಸಾಧ್ಯತೆ ಇದೆ.

  ರಿಯಾ ಬಳಸುತ್ತಿದ್ದ ಫೋನ್ ಮಾತ್ರವಲ್ಲದೆ ಕುಟುಂಬದವರು ಬಳಸುತ್ತಿದ್ದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಮರೆಮಾಚದಂತೆ ಎಚ್ಚರಿಕೆ ನೀಡಿದ್ದಾರೆ. ಇಡಿ ವಿಚಾರಣೆ ಸೋಮವಾರವೂ (ಆಗಸ್ಟ್ 10) ಮುಂದುವರೆದಿದ್ದು, ರಿಯಾ ಮತ್ತು ತಂದೆ ಇಂದ್ರಜಿತ್ ಚಕ್ರವರ್ತಿ ಅವರನ್ನು ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್, ರಿಯಾ ವಿರುದ್ಧ ಹಣಕಾಸಿನ ಅಕ್ರಮ ಮತ್ತು ವಂಚನೆ ದೂರು ನೀಡಿದ್ದರು. ಸುಶಾಂತ್ ಮತ್ತು ರಿಯಾ ಕುಟುಂಬದ ನಡುವಿನ ಹಣಕಾಸಿನ ವ್ಯವಹಾರಗಳ ಬಗ್ಗೆ ಸಂಪೂರ್ಣ ವಿಚಾರಣೆ ನಡೆಯುತ್ತಿದೆ.

  English summary
  Rhea Chakraborty to hide the second phone during ED interrogation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X