For Quick Alerts
  ALLOW NOTIFICATIONS  
  For Daily Alerts

  4 ವರ್ಷ ಸಿನಿಮಾ ಮಾಡದಿದ್ರೂ ವಿಶ್ವದ 4ನೇ ಶ್ರೀಮಂತ ನಟ: ಶಾರುಖ್ ಆಸ್ತಿ ಎಷ್ಟು ಸಾವಿರ ಕೋಟಿ?

  By ಸೌಮ್ಯ ಭೈರಪ್ಪ
  |

  ಬಾಲಿವುಡ್ ಬಾದ್ ಶಾ ಶಾರುಖ್ ಖಾನ್​​ ಭಾರತ ಮಾತ್ರವಲ್ಲದೇ, ವಿಶ್ವದ ಮೂಲೆ ಮೂಲೆಯಲ್ಲಿ ಆಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಿಂಗ್ ಖಾನ್ ನಾಲ್ಕು ವರ್ಷ ನಟನೆಯಿಂದ ದೂರವಿದ್ದರೂ ಅಭಿಮಾನಿಗಳೇನೂ ಕಮ್ಮಿಯಾಗಿಲ್ಲ.

  ಇದೀಗ ಕಿಂಗ್ ಖಾನ್ 'ಪಠಾಣ್' ಚಿತ್ರದ ಮೂಲಕ ಬಾಲಿವುಡ್‌ಗೆ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಹಾಡುಗಳು ಹಾಗೂ ಟ್ರೈಲರ್ ಬೇಜಾನ್ ಸದ್ದು ಮಾಡುತ್ತಿದೆ. ಇದೇ ತಿಂಗಳ 26ಕ್ಕೆ 'ಪಠಾಣ್' ಸಿನಿಮಾ ರಿಲೀಸ್ ಆಗುತ್ತಿದೆ. ಈ ನಡುವೆ ಕಿಂಗ್ ಖಾನ್ ಫ್ಯಾನ್ಸ್ ಖುಷಿಪಡುವ ವಿಚಾರವೊಂದು ಹೊರಬಿದ್ದಿದೆ.

  ವಿಶ್ವದ ನಾಲ್ಕನೇ ಶ್ರೀಮಂತ ನಟ ಶಾರುಖ್

  ವಿಶ್ವದ ನಾಲ್ಕನೇ ಶ್ರೀಮಂತ ನಟ ಶಾರುಖ್

  ಕಿಂಗ್ ಖಾನ್ ವಿಶ್ವದ 4ನೇ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ 'ವಿಶ್ವದ ಶ್ರೀಮಂತ ನಟರ' ಪಟ್ಟಿಯನ್ನು ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದೆ. ಅದರ ಪ್ರಕಾರ, ವಿಶ್ವದ ಶ್ರೀಮಂತ ನಟರ ಸಾಲಿನಲ್ಲಿ ಹಾಲಿವುಡ್ ನ ಜೆರ್ರಿ ಸೈನ್‌ಫೆಲ್ಡ್ ಮೊದಲ ಸ್ಥಾನ, ಟೈಲರ್ ಫೆರ್ರಿ ಎರಡನೇ ಸ್ಥಾನ, ಡ್ವೇನ್ ಜಾನ್ಸನ್ ಮೂರನೇ ಸ್ಥಾನ ಹಾಗೂ ಶಾರುಖ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಶಾರುಖ್ ಅವರ ಒಟ್ಟಾರೆ ಆಸ್ತಿ 770 ಮಿಲಿಯನ್ ಡಾಲರ್. ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್ ಬಿಡುಗಡೆ ಮಾಡಿರುವ 10 ಮಂದಿ ನಟರ ಪೈಕಿ 9 ಜನ ಹಾಲಿವುಡ್‌ನವರು. ಶಾರುಖ್ ಶ್ರೀಮಂತ ನಂತರ ಪಟ್ಟಿಯಲ್ಲಿ ಏಕೈಕ ಭಾರತೀಯ ನಟ ಎನಿಸಿಕೊಂಡಿದ್ದಾರೆ.

  ವಿಶ್ವದ ಶ್ರೀಮಂತ ನಟರ ಪಟ್ಟಿಯಿದು

  ವಿಶ್ವದ ಶ್ರೀಮಂತ ನಟರ ಪಟ್ಟಿಯಿದು

  ಬಾಲಿವುಡ್ ನಟ ಶಾರುಖ್ ಖಾನ್ ವಿಶ್ವದ ನಾಲ್ಕನೇ ಶ್ರೀಮಂತ ನಟರ ಪಟ್ಟಿ ಸೇರಿಕೊಂಡಿದ್ದಾರೆ. ಉಳಿದಂತೆ ಹಾಲಿವುಡ್‌ ನಟರ ಹೆಸರುಗಳೇ ಹೆಚ್ಚಿವೆ.

  ಜೆರ್ರಿ ಸೈನ್‌ಫೆಲ್ಡ್ $1 ಬಿಲಿಯನ್
  ಟೈಲರ್ ಫೆರ್ರಿ $1 ಬಿಲಿಯನ್
  ಡ್ವೇನ್ ಜಾನ್ಸನ್ $800 ಮಿಲಿಯನ್
  ಶಾರುಖ್ ಖಾನ್ $770 ಮಿಲಿಯನ್
  ಟಾಮ್ ಕ್ರೂಸ್ $620 ಮಿಲಿಯನ್
  ಜಾಕಿ ಜಾನ್ $520 ಮಿಲಿಯನ್
  ಜಾರ್ಜ್ ಕ್ಲ್ಯೂನಿ $500 ಮಿಲಿಯನ್
  ರಾಬರ್ಟ್ ಡಿ ನಿರೋ $500 ಮಿಲಿಯನ್

  ಕಿಂಗ್ ವರ್ಷಕ್ಕೆ ದುಡಿಯೋದೆಷ್ಟು?

  ಕಿಂಗ್ ವರ್ಷಕ್ಕೆ ದುಡಿಯೋದೆಷ್ಟು?

  ಫೋರ್ಬ್ಸ್ ಡೇಟಾ ಪ್ರಕಾರ, ಶಾರುಖ್ ಖಾನ್ ವಾರ್ಷಿಕ ಆದಾಯ $38 ಬಿಲಿಯನ್ ಅಥವಾ ಸರಿಸುಮಾರು 313 ಕೋಟಿ ರೂಪಾಯಿ. ಬಾಲಿವುಡ್ ಬಾದ್ ಶಾ ಶಾರುಖ್ ನಟನೆ ಜೊತೆಗೆ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಾರೆ. ಜೊತೆಗೆ ಶಾರುಖ್ ಐಪಿಎಲ್ ತಂಡ ಹೊಂದಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ಇವರ ಒಡೆತನದಲ್ಲಿದೆ. ಇದರಿಂದಲೂ ಸಾಕಷ್ಟು ಹಣ ಬರುತ್ತದೆ. ಜೊತೆಗೆ ಕಿಂಗ್ ಖಾನ್ ಹಲವು ಬ್ರ್ಯಾಂಡ್‌ಗಳಿಗೆ ಅಂಬಾಸಿಡರ್ ಆಗಿದ್ದು, ಇದರಿಂದ ಕೂಡ ಕೋಟಿಗಟ್ಟಲೆ ಹಣ ಗಳಿಸುತ್ತಾರೆ.

  'ಪಠಾಣ್' ರಿಲೀಸ್ ಯಾವಾಗ?

  'ಪಠಾಣ್' ರಿಲೀಸ್ ಯಾವಾಗ?

  ಶಾರುಖ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ 'ಪಠಾಣ್' ಸಿನಿಮಾ ಜನವರಿ 25ರಂದು ರಿಲೀಸ್‌ಗೆ ರೆಡಿಯಾಗಿದೆ.ಕಳೆದ ನಾಲ್ಕು ವರ್ಷಗಳಿಂದ ಕಿಂಗ್ ಖಾನ್ ನಟನೆಯ ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಇದೀಗ 'ಪಠಾಣ್'ಗಾಗಿ ಅವರ ಅಭಿಮಾನಿಗಳು ಕಾದು ಕುಳಿತಿದ್ದಾರೆ.

  English summary
  Richest Actors in the World 2023: Shah Rukh Khan Ranked 4th On The List, Know More
  Monday, January 16, 2023, 17:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X