»   » ಯಶ್ ಚೋಪ್ರಾ ಸಿನೆಮಾದ ರೊಮ್ಯಾಂಟಿಕ್ ಚಿತ್ರಗಳು

ಯಶ್ ಚೋಪ್ರಾ ಸಿನೆಮಾದ ರೊಮ್ಯಾಂಟಿಕ್ ಚಿತ್ರಗಳು

Posted By:
Subscribe to Filmibeat Kannada

ಬಾಲಿವುಡ್ ಚಿತ್ರಗಳ 'ಪ್ರಣಯ ರಾಜ' ಎಂದೇ ಖ್ಯಾತರಾದವರು ನಿರ್ದೇಶಕ, ನಿರ್ಮಾಪಕ ಹಾಗೂ ಚಿತ್ರಕಥೆಗಾರ ಯಶ್ ಚೋಪ್ರಾ. ಅವರ ನಿರ್ದೇಶನದ ದಿಲ್ ತೋ ಪಾಗಲ್ ಹೈ, ವೀರ್ ಜಾರ, ಲಮ್ಹೇ, ಚಾಂದನಿ, ಸಿಲ್ಸಿಲಾ, ಕಾಲಾ ಪತ್ಥರ್, ಡರ್...ಮುಂತಾದ ಚಿತ್ರಗಳು ಅವರ ಕಲಾಪ್ರೌಢಿಮೆಗೆ ಕನ್ನಡಿ ಹಿಡಿಯುತ್ತವೆ.

ಐದು ದಶಕಗಳ ಕಾಲ ಬಾಲಿವುಡ್ ರಂಗಿನ ಪ್ರಪಂಚದಲ್ಲಿ ಮೋಡಿ ಮಾಡಿದ ಜಾದೂಗಾರ. ಈಗ ಅವರು ಕೇವಲ ನೆನಪಷ್ಟೇ. ಆದರೆ ಅವರು ಬೆಳ್ಳಿತೆರೆಯ ಮೇಲೆ ಸೃಷ್ಟಿಸಿದ ಚಿತ್ತಾರಗಳು ಮಾತ್ರ ಚಿತ್ರರಸಿಕರನ್ನೂ ಸದಾ ಕಾಡುತ್ತಿರುತ್ತವೆ.

ಅಮಿತಾಬ್, ರೇಖಾ ಸಿಲ್ಸಿಲಾ ಚಿತ್ರದ ದೃಶ್ಯಕಾವ್ಯ

ಎಂಬತ್ತರ ದಶಕದಲ್ಲಿ ಚಿತ್ರರಸಿಕರನ್ನು ಅಪಾರವಾಗಿ ಸೆಳೆದ ಚಿತ್ರ ಸಿಲ್ಸಿಲಾ. ಯಶ್ ಚೋಪ್ರಾ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ರೇಖಾ, ಜಯಾ ಬಚ್ಚನ್, ಸಂಜೀವ್ ಕುಮಾರ್, ಶಶಿ ಕಪೂರ್, ಕುಲಭೂಷಣ್ ಖರಬಂದ ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿನ ಒಂದು ರೊಮ್ಯಾಂಟಿಕ್ ದೃಶ್ಯವಿದು.

ಶಾರುಖ್, ಐಶ್ವರ್ಯಾ ರೈ ಮ್ಯಾಜಿಕ್

ಸುಮಾರು ರು.18 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಮೊಹಾಬತೆ ಚಿತ್ರ ಸರಿಸುಮಾರು ರು.74 ಕೋಟಿ ಕಲೆಕ್ಷನ್ ಮಾಡಿದೆ. ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಐಶ್ವರ್ಯಾ ರೈ, ಕಿಮ್ ಶರ್ಮಾ, ಪ್ರೀತಿ ಜಿಂಗಾನಿಯಾ ಮುಂತಾದವರು ಅಭಿನಯಿಸಿದ್ದರು. ಈ ಚಿತ್ರದಲ್ಲಿನ ಹಾಡುಗಳು ಕಿವಿಗೆ ಬಿದ್ದರೆ ಚಿತ್ರರಸಿಕರ ಮನಸ್ಸು ಈಗಲೂ ಹಗುರವಾಗುತ್ತದೆ.

ದಿಲ್ ವಾಲೆ ದುಲ್ಹನಿಯಾ ಲೇ ಜಾಯೇಂಗೆ

ಕೇವಲ ರು.4 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಈ ಚಿತ್ರ ಇದುವರೆಗೂ ರು.200 ಕೋಟಿ ಬಾಚಿದೆ. ಯಶ್ ಚೋಪ್ರಾ ನಿರ್ಮಾಣದ ಈ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ದೇಶಿಸಿದ್ದರು. ಶಾರುಖ್ ಖಾನ್, ಕಾಜೋಲ್, ಅಮ್ರೀಷ್ ಪುರಿ, ಅನುಪಂ ಖೇರ್ ಮುಂತಾದವರು ಅಭಿನಯಿಸಿದ್ದರು.

ದಿಲ್ ತೋ ಪಾಗಲ್ ಹೈ ಸಂಗೀತದ ಝಲಕ್

ಯಶ್ ಚೋಪ್ರಾ ನಿರ್ದೇಶನದ ಮ್ಯೂಸಿಕಲ್ ರೊಮ್ಯಾಂಟಿಕ್ ಚಿತ್ರ. ಹಾಡುಗಳ ಮೂಲಕವೇ ಪ್ರೇಕ್ಷಕರ ಹೃದಯದ ವೀಣೆ ಮೀಟಿದ ಚಿತ್ರ. ಶಾರುಖ್ ಖಾನ್, ಮಾಧುರಿ ದೀಕ್ಷಿತ್, ಕರಿಷ್ಮಾ ಕಪೂರ್, ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಉತ್ತಮ್ ಸಿಂಗ್ ಅವರ ಸಂಗೀತ ಚಿತ್ರಕ್ಕಿದೆ.

ರಿಷಿ ಕಪೂರ್, ಶ್ರೀದೇವಿ ಚಾಂದಿನಿ ಚಮಕ್

ಯಶ್ ಚೋಪ್ರಾ ನಿರ್ದೇಶಿಸಿ, ನಿರ್ಮಿಸಿದ ಚಿತ್ರ. ಭಾರತೀಯ ಚಿತ್ರರಂಗದಲ್ಲಿ 'ಚಾಂದಿನಿ' ಸಿನೆಮಾ ಪ್ರೇಕ್ಷಕರ ಮನಸ್ಸಿನ ಮೇಲೆ ಮರೆಯಲಾಗದ ಮುದ್ರೆಯನ್ನು ಒತ್ತಿದೆ. ಚೋಪ್ರಾ ಅವರಿಗೆ ಅಪಾರ ಕೀರ್ತಿ ತಂದುಕೊಟ್ಟಂತಹ ಚಿತ್ರ. ಶ್ರೀದೇವಿ, ರಿಷಿ ಕಪೂರ್, ವಿನೋದ್ ಖನ್ನಾ ಮುಖ್ಯಪಾತ್ರಗಳಲ್ಲಿದ್ದಾರೆ.


ಎಂಬತ್ತರ ಇಳಿವಯಸ್ಸಿನಲ್ಲೂ ಅವರು ಹರೆಯದ ಯುವಕರನ್ನು ನಾಚಿಸುವಂತಹ ಉತ್ಸಾಹವಿತ್ತು. ಬಹುಶಃ ಅವರ ಈ ಉತ್ಸಾಹಕ್ಕೆ ಹರೆಯದ ಉಕ್ಕಿಸುವ ಚಿತ್ರಗಳೇ ಕಾರಣವೇನೋ?

ಐವತ್ತೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಚೋಪ್ರಾ ಅವರ ರೋಮ್ಯಾಂಟಿಕ್ ಸಬ್ಜೆಕ್ಟ್ ಪ್ರೇಕ್ಷಕರು ಪರವಶರಾಗುತ್ತಿದ್ದರು. ಯಶ್ ರಾಜ್ ಫಿಲ್ಮ್ಸ್' ಲಾಂಛನದಲ್ಲಿ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಚೋಪ್ರಾ ನಿರ್ದೇಶನದ ಕಟ್ಟಕಡೆಯ ಚಿತ್ರ 'ಜಬ್ ತಕ್ ಹೈ ಜಾನ್'. ಶಾರುಖ್‌ಖಾನ್, ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಅಭಿನಯದ ಈ ಚಿತ್ರ ಇದೇ ದೀಪಾವಳಿಗೆ ಬಿಡುಗಡೆಯಾಗುತ್ತಿದೆ.

ಯಶ್ ಚೋಪ್ರಾ ಚಿತ್ರಗಳ ಕೆಲವು ರೊಮ್ಯಾಂಟಿಕ್ ದೃಶ್ಯಗಳು ಇಲ್ಲಿವೆ ನೋಡಿ. ಈಗಿನ ಕಾಲದ ನಿರ್ದೇಶಕರಿಗೆ ಒಂದೊಂದು ಚಿತ್ರವೂ ಒಂದೊಂದು ಪಾಠ. ಬಾಲಿವುಡ್ ಚಿತ್ರಗಳ ಬಗೆಗಿನ ಅವರ ಕಡುವ್ಯಾಮೋಹ ಈ ಚಿತ್ರಗಳಲ್ಲಿ ಕಾಣಬಹುದು. ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿ ನಿಮ್ಮ ಅರಿವಿಗೆ ಬರುತ್ತದೆ.

English summary
Director, producer and screenwriter Yash Chopra is famous for the classic romantic films he has made for Bollywood. The legendary film-maker Yash Chopra died from dengue.
Please Wait while comments are loading...