»   » ಕೃತಿ ಖರಬಂದ ಮದುವೆಗೆ ಬರೋಬ್ಬರಿ 2 ಕೋಟಿ ರೂಪಾಯಿ ಖರ್ಚು.!

ಕೃತಿ ಖರಬಂದ ಮದುವೆಗೆ ಬರೋಬ್ಬರಿ 2 ಕೋಟಿ ರೂಪಾಯಿ ಖರ್ಚು.!

Posted By:
Subscribe to Filmibeat Kannada

ಸದ್ಯಕ್ಕೆ ನಟಿ ಅಮೂಲ್ಯ, 'ಜಾಕಿ' ಭಾವನಾ ಹಸೆಮಣೆ ಏರುವ ಲಿಸ್ಟ್ ನಲಿದ್ದಾರೆ. ಇವರ ಜೊತೆಗೆ ನಟಿ ಕೃತಿ ಖರಬಂದ ಮದುವೆ ಯಾವಾಗ ಫಿಕ್ಸ್ ಆಯ್ತು ಎಂದು 'ಶೀರ್ಷಿಕೆ' ನೋಡಿದ ತಕ್ಷಣ ಕಣ್ಣು ಬಾಯಿ ಬಿಡುತ್ತಿದ್ದೀರಾ.? ['ಏನೋ ಏನೋ ಆಗಿದೆ...' ಕೃತಿಗೆ ಸಂಥಿಂಗ್ ಶುರುವಾಗಿದೆ?!]

'ಚಿರು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮಿನುಗಲು ಅರಂಭಿಸಿದ ಬೆಳ್ಳಿ ಬೊಂಬೆ ಕೃತಿ ಖರಬಂದ ಮದುವೆಗೆ ಬರೋಬ್ಬರಿ 2 ಕೋಟಿ ಖರ್ಚು ಮಾಡುತ್ತಿರುವ ಸುದ್ದಿ ಬಾಲಿವುಡ್ ನಿಂದ ಬಂದಿದೆ. ಮುಂದೆ ಓದಿರಿ....

'ರೀಲ್' ಮದುವೆ

ಕೃತಿ ಖರಬಂದ ಮದುವೆಗೆ ತಯಾರಿ ನಡೆಯುತ್ತಿರುವುದು ಖಚಿತ. ಅದಕ್ಕಾಗಿ ಬರೋಬ್ಬರಿ 2 ಕೋಟಿ ರೂಪಾಯಿ ಖರ್ಚಾಗುತ್ತಿರುವುದು ಕೂಡ ಅಷ್ಟೇ ಸತ್ಯ. ಆದ್ರೆ, ಅದು 'ಸಿನಿಮಾ'ಗಾಗಿ ಮಾತ್ರ ಎಂಬುದು ನಿಮ್ಮ ಗಮನದಲ್ಲಿರಲಿ.

ಯಾವ ಸಿನಿಮಾ.?

'ಶಾದಿ ಮೇ ಝರೂರ್ ಆನಾ' (ಮದುವೆಗೆ ತಪ್ಪದೆ ಬನ್ನಿ) ಎಂಬ ಹಿಂದಿ ಸಿನಿಮಾದಲ್ಲಿ ನಟಿ ಕೃತಿ ಖರಬಂದ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬರುವ ಕೃತಿ ಖರಬಂದ ರವರ ಮದುವೆ ಸೀನ್ ಗಾಗಿ 2 ಕೋಟಿ ಖರ್ಚು ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ.

'ಮದುವೆ' ಕಥೆ

ಶೀರ್ಷಿಕೆಯೇ ಹೇಳುವಂತೆ ಇದು ಒಂದು ಮದುವೆ ಸುತ್ತ ಹೆಣೆದಿರುವ ಕಥೆ. 'ಮದುವೆ ಮನೆ'ಯಲ್ಲಿಯೇ ಬಹು ಮುಖ್ಯ ಸನ್ನಿವೇಶಗಳ ಚಿತ್ರೀಕರಣ ನಡೆಯುವುದರಿಂದ 'ಮದುವೆ ಮಂಟಪ'ದ ಸೆಟ್ ಗಾಗಿ ಎರಡು ಕೋಟಿ ರೂಪಾಯಿ ವ್ಯಯ ಮಾಡಲಾಗುತ್ತಿದೆ.

ಲಕ್ನೋದಲ್ಲಿ ಸೆಟ್

'ಶಾದಿ ಮೇ ಝರೂರ್ ಆನಾ' ಚಿತ್ರದ ಮದುವೆ ಸೆಟ್ ಲಕ್ನೋದಲ್ಲಿ ನಿರ್ಮಿಸಲಾಗುತ್ತಿದೆ. ಬಾಲಿವುಡ್ ನಲ್ಲಿ ಹಿಂದೆಂದೂ ನೋಡಿರದ ಮದುವೆ ಸನ್ನಿವೇಶವನ್ನು ಈ ಚಿತ್ರದಲ್ಲಿ ಸೃಷ್ಟಿಸುವುದು ನಿರ್ಮಾಪಕ ವಿನೋದ್ ಬಚ್ಚನ್ ಉದ್ದೇಶ.

ಕೃತಿ ಖರಬಂದ ಜೊತೆ ರಾಜಕುಮಾರ್ ರಾವ್

'ಶಾದಿ ಮೇ ಝರೂರ್ ಆನಾ' ಚಿತ್ರದಲ್ಲಿ ಕೃತಿ ಖರಬಂದ ಜೊತೆ ರಾಜ್ ಕುಮಾರ್ ರಾವ್ ಡ್ಯುಯೆಟ್ ಹಾಡಲಿದ್ದಾರೆ.

English summary
The makers of Kriti Kharbanda 's next Bollywood Film, 'Shaadi Mein Zaroor Aana' are spending Rs 2 crore on creating an elaborate set for Wedding.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X