For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿ ಕೃತಿ ಸೆನನ್‌ಗೆ ಪ್ರಪೋಸ್ ಮಾಡೇಬಿಟ್ರಂತೆ ಪ್ರಭಾಸ್‌!

  |

  2022 ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಆಗಲೇ ಕೆಲವು ಸೆಲೆಬ್ರೆಟಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲವರ ಪ್ರೇಮ್ ಕಹಾನಿ ಈಗ ತಾನೇ ಶುರುವಾಗಿದೆ. ಸದ್ಯ ಬಾಲಿವುಡ್‌ನಲ್ಲಿ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಕೃತಿ ಸನನ್ ಲವ್ ಸ್ಟೋರಿ ಬಗ್ಗೆ ಗುಸು ಗುಸು ಕೇಳಿಬರುತ್ತಿದೆ.

  ಕೆಲವು ದಿನಗಳ ಹಿಂದಷ್ಟೇ ಪ್ರಭಾಸ್ ಹಾಗೂ ಕೃತಿ ಸೆನನ್ ಇಬ್ಬರಲ್ಲೂ ಪ್ರೀತಿ ಚಿಗುರೊಡೆದಿರೋದು ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿತ್ತು. ಆಗ ಪ್ರಭಾಸ್, ಕೃತಿ ಸೆನನ್ ಇಬ್ಬರೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಈಗ ಮತ್ತೆ ಈ ಸ್ಟಾರ್ ಜೋಡಿಯ ಲವ್ ಸ್ಟೋರಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

  "ಟೈಗರ್ ಶ್ರಾಫ್ ಜೊತೆ ಡೇಟಿಂಗ್.. ಪ್ರಭಾಸ್ ಜೊತೆ ಮದುವೆ": ಕೃತಿ ಸನೂನ್ ಹೇಳಿಕೆ ವೈರಲ್

  ಬಾಲಿವುಡ್‌ನ ಸ್ಟಾರ್ ನಟ ವರುಣ್ ಧವನ್ ಕೆಲವು ದಿನಗಳ ಹಿಂದಷ್ಟೇ ಚಿಕ್ಕದೊಂದು ಹಿಂಟ್ ಕೊಟ್ಟಿದ್ದರು. ಪ್ರಭಾಸ್ ಹೃದಯದಲ್ಲಿ ಒಬ್ಬರು ಡಾರ್ಲಿಂಗ್ ಇದ್ದಾರೆಂದು ಹೇಳಿಕೆ ನೀಡಿದ್ದರು. ಈಗ ಬಾಲಿವುಡ್‌ ಮಂದಿಗೆ ಪ್ರಭಾಸ್ ಹಾಗೂ ಕೃತಿ ಇಬ್ಬರೂ ಶೀಘ್ರದಲ್ಲಿಯೇ ನಿಶ್ವಿತಾರ್ಥ ಮಾಡಿಕೊಳ್ಳಲಿದ್ದಾರೆ ಅನ್ನೋ ಸುದ್ದಿಯನ್ನು ಹೊರಹಾಕಿದ್ದಾರೆ.

  ಕೃತಿಗೆ ಪ್ರಭಾಸ್ ಪ್ರಪೋಸ್?

  ಕೃತಿಗೆ ಪ್ರಭಾಸ್ ಪ್ರಪೋಸ್?

  ಸಿನಿಮಾ ಕ್ಷೇತ್ರದಲ್ಲಿ ಪ್ರತಿ ದಿನ ಏನಾದರೂ ಒಂದು ಗಾಳಿ ಸುದ್ದಿ ಹರಿದಾಡುತ್ತಲೇ ಇರುತ್ತೆ. ಇಂತಹದ್ದರಲ್ಲಿ ಪ್ರಭಾಸ್ ಹಾಗೂ ಕೃತಿ ಸೆನನ್ ಸುದ್ದಿ ಕೂಡ ಒಂದು ಅಂದ್ಕೊಂಡಿದ್ದರು. ಕೊನೆಗೂ ಪ್ರಭಾಸ್ ನಟಿ ಕೃತಿ ಸೆನನ್‌ಗೆ ಪ್ರಪೋಸ್ ಮಾಡಿದ್ದಾರೆ ಅಂತ ಬಾಲಿವುಡ್‌ನಲ್ಲಿ ಸುದ್ದಿಯಾಗಿದೆ. ಓವರ್‌ಸೀನ್ ಸೆನ್ಸಾರ್ ಬೋರ್ಡ್‌ನ ಅಧ್ಯಕ್ಷ ಉಮೈರ್ ಸಂಧು ಟ್ವೀಟ್ ಮಾಡಿದ್ದು, " ಆದಿಪುರುಷ್ ಶೂಟಿಂಗ್ ವೇಳೆ ಪ್ರಭಾಸ್ ನಟಿ ಕೃತಿ ಸೆನನ್‌ಗೆ ಪ್ರಪೋಸ್ ಮಾಡಿದ್ದಾರೆ. ಇದು ಅಧಿಕೃತ. ಇಬ್ಬರೂ ಈಗ ರಿಲೇಷನ್‌ಶಿಫ್‌ನಲ್ಲಿದ್ದಾರೆ." ಎಂದು ಟ್ವೀಟ್ ಮಾಡಿದ್ದರು. ಇಲ್ಲಿಂದ ಇಬ್ಬರ ಲವ್ ಸ್ಟೋರಿನೇ ಟಾಕ್ ಆಫ್ ದಿ ಟೌನ್ ಆಗಿದೆ.

  ಪ್ರಭಾಸ್-ಕೃತಿ ನಿಶ್ಚಿತಾರ್ಥ ಯಾವಾಗ?

  ಪ್ರಭಾಸ್-ಕೃತಿ ನಿಶ್ಚಿತಾರ್ಥ ಯಾವಾಗ?

  ನಟಿ ಕೃತಿ ಸೆನನ್‌ಗೆ ಪ್ರಭಾಸ್ ಪ್ರಪೋಸ್ ಮಾಡಿದ್ದು ಎರಡೂ ಕುಟುಂಬಕ್ಕೆ ಸಮ್ಮಿತಿ ಇದೆ. ಇಬ್ಬರೂ ಪ್ರೀತಿಯಲ್ಲಿರೋ ವಿಷಯ ತಿಳಿದು ಎರಡೂ ಕುಟುಂಬಗಳು ಖುಷಿಯಾಗಿವೆಯಂತೆ. ಇಬ್ಬರೂ ಜೊತೆಯಾಗಿ ನಟಿಸುತ್ತಿರುವ ಮೊದಲ ಸಿನಿಮಾ 'ಆದಿಪುರುಷ್' ಬಿಡುಗಡೆಯಾಗುತ್ತಿದ್ದಂತೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಈ ಸಂಬಂಧವನ್ನು ಇಬ್ಬರೂ ತುಂಬಾನೇ ಗಂಭೀರವಾಗಿ ಪರಿಗಣಿಸಿದ್ದಾರೆಂದು ಬಾಲಿವುಡ್ ಲೈಫ್ ವರದಿ ಮಾಡಿದೆ.

  ಕರಣ್ ಜೋಹರ್ ಟಾಕ್‌ ಶೋನಲ್ಲಿ ರಿವೀಲ್

  ಕರಣ್ ಜೋಹರ್ ಟಾಕ್‌ ಶೋನಲ್ಲಿ ರಿವೀಲ್

  ಕೆಲವು ದಿನಗಳ ಹಿಂದಷ್ಟೇ ಕೃತಿ ಸೆನನ್ ಕರಣ್ ಜೋಹರ್ ಟಾಕ್ ಶೋ 'ಕಾಫಿ ವಿತ್ ಕರಣ್' ಸೀಸನ್ 7ನಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಲ್ಲಿ ನೀಡಿದ್ದ ಟಾಸ್ಕ್‌ನಲ್ಲಿ ಕೃತಿ ಸೆನನ್ ಯಾರಾದರೂ ಸೆಲೆಬ್ರೆಟಿಗಳಿಗೆ ಕರೆ ಮಾಡಬೇಕಿತ್ತು. ತಕ್ಷಣಕ್ಕೆ ಕೃತಿ ಡಾರ್ಲಿಂಗ್ ಪ್ರಭಾಸ್‌ಗೆ ಕರೆ ಮಾಡಿದ್ದರು. ಆ ಕಡೆಯಿಂದ ಕೂಡ ತಕ್ಷಣಕ್ಕೆ ಪ್ರಭಾಸ್ ಪಿಕ್ ಮಾಡಿದ್ದರು. ಇಲ್ಲಿಂದ ಇಬ್ಬರ ನಡುವೆ ಏನೋ ನಡೀತಿದೆ ಅಂತ ಬಾಲಿವುಡ್ ಅನುಮಾನ ಪಟ್ಟಿತ್ತು. ಈಗ ಅದರಂತೆಯೇ ಆಗಿದೆ.

  ಸಿನಿಮಾಗಾಗಿ ಎದುರು ನೋಡ್ತಿರೋ ಡಾರ್ಲಿಂಗ್ ಫ್ಯಾನ್ಸ್‌

  ಸಿನಿಮಾಗಾಗಿ ಎದುರು ನೋಡ್ತಿರೋ ಡಾರ್ಲಿಂಗ್ ಫ್ಯಾನ್ಸ್‌

  ಪ್ರಭಾಸ್ ಸಿನಿಮಾ ನೋಡುವ ಕಾತುರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. 'ರಾಧೆ ಶ್ಯಾಮ್' ಸಿನಿಮಾ ಬಳಿಕ ಅಭಿಮಾನಿಗಳು ಮತ್ತೊಂದು ಬ್ಲಾಕ್‌ ಬಸ್ಟರ್‌ಗಾಗಿ ಎದುರು ನೋಡುತ್ತಿದ್ದಾರೆ. ಸದ್ಯ ಪ್ರಭಾಸ್ ಅಭಿನಯದ 'ಆದಿಪುರುಷ್' ಹಾಗೂ 'ಸಲಾರ್' ಸಿನಿಮಾಗಳು ಬಿಡುಗಡೆಯಾಗಬೇಕಿದೆ. ಈಗಾಗಲೇ 'ಆದಿಪುರುಷ್' ಟೀಸರ್‌ಗೆ ವಿರೋಧ ವ್ಯಕ್ತವಾಗಿದ್ದು, 'ಸಲಾರ್' ಸಿನಿಮಾ ಮೇಲೆ ನಂಬಿಕೆ ಇಟ್ಟು ಕಾಯುತ್ತಿದ್ದಾರೆ.

  English summary
  Rumoured Couple Adipurush Star Prabhas Kriti Sanon Might Get Engaged Soon, Know More.
  Tuesday, November 29, 2022, 22:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X