»   » 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ರಿಲೀಸ್ ಡೇಟ್ ಪ್ರಕಟಿಸಿದ ಸಚಿನ್

'ಸಚಿನ್: ಎ ಬಿಲಿಯನ್ ಡ್ರೀಮ್ಸ್' ರಿಲೀಸ್ ಡೇಟ್ ಪ್ರಕಟಿಸಿದ ಸಚಿನ್

Posted By:
Subscribe to Filmibeat Kannada

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಅಭಿನಯದ 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ಚಿತ್ರದ ಬಿಡುಗಡೆ ದಿನಾಂಕ ಪ್ರಕಟಗೊಳಿಸಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್ ಅನ್ನು 2016 ರ ಏಪ್ರಿಲ್ ನಲ್ಲಿ ರಿಲೀಸ್ ಮಾಡಲಾಗಿತ್ತು. ಈಗ ಚಿತ್ರ ತೆರೆಮೇಲೆ ಯಾವಾಗ ಬರಲಿದೆ ಎಂದು ಇದ್ದ ಕುತೂಹಲಕ್ಕೂ ಬ್ರೇಕ್ ಹಾಕಿದ್ದಾರೆ.

ಸಚಿನ್ ತೆಂಡೂಲ್ಕರ್ ಆತ್ಮಕಥೆಯ 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ಚಿತ್ರದ ಟೀಸರ್ ನೋಡಿ, ಸಿನಿಮಾ ಯಾವಾಗ ರಿಲೀಸ್ ಆಗುತ್ತೇ? ಎಂದು ಕೂತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಉತ್ತರ ಸಿಕ್ಕಿದೆ. ಸಚಿನ್ 'ಸಿನಿಮಾ 2017 ಮೇ 26 ರಂದು ರಿಲೀಸ್ ಆಗುತ್ತಿದೆ, ಕ್ಯಾಲೆಂಡರ್ ನಲ್ಲಿ ಮಾರ್ಕ್ ಮಾಡಿ ಡೇಟ್ ಸೇವ್ ಮಾಡಿಕೊಳ್ಳಿ' ಎಂದು ಟ್ವೀಟ್ ಮಾಡಿದ್ದಾರೆ.[ಸಚಿನ್ ಕುರಿತ ಚಿತ್ರದ ಟೀಸರ್ ಗೆ ಕಾದಿದ್ದೇನೆ: ಕೊಹ್ಲಿ]

Sachin Tendulkar announces release date of his film ‘Sachin: A Billion Dreams’

ಸಚಿನ್ 2013 ರಲ್ಲಿ ಎಲ್ಲಾ ವಿಭಾಗದ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದರು. ಈಗ 42 ವರ್ಷದ ಕ್ರಿಕೆಟ್ ತಾರೆ ಅವರ ಆತ್ಮಕಥೆಯ ಸಿನಿಮಾ ದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಟೀಸರ್ ನೋಡಿ ಚಿತ್ರಕ್ಕಾಗಿ ಕಾಯುತ್ತಿದ್ದವರು, ಮೇ 26 ರಂದು ಸಚಿನ್ ಅವರ ಜೀವನ ಜರ್ನಿಯನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಬಹುದು.

Sachin Tendulkar announces release date of his film ‘Sachin: A Billion Dreams’

ಸಚಿನ್ ಹಲವು ಮಾಧ್ಯಮಗಳಲ್ಲಿ ತಮ್ಮ 24 ವರ್ಷದ ಕ್ರಿಕೆಟ್ ಜರ್ನಿ ಅನುಭವಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದು, ಈಗ ಸಿನಿಮಾದಲ್ಲೂ ಮಿಂಚಲಿದ್ದಾರೆ. ಸುಮಾರು 30 ತಿಂಗಳುಗಳ ಕಾಲ 5 ದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಸಿನಿಮಾ ಗೆ ಜೇಮ್ಸ್ ಇರಸ್ಕಿನ್ ಆಕ್ಷನ್ ಕಟ್ ಹೇಳಿದ್ದು, ರವಿ ಭಾಗ್ಚಂದಕ ನಿರ್ಮಾಣ ಮಾಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

English summary
Sachin Tendulkar announced on his Twitter handle that his biographical film ‘Sachin: A Billion Dreams’ is set to release on May 26, 2017.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada