For Quick Alerts
  ALLOW NOTIFICATIONS  
  For Daily Alerts

  ಮೊದಲ ಮಗುವಿನ ನಿರೀಕ್ಷೆಯಲ್ಲಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ನಟಿ ಸಾಗರಿಕಾ ದಂಪತಿ

  |

  ಇತ್ತೀಚಿಗಷ್ಟೆ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಅನುಷ್ಕಾ ದಂಪತಿ ಮೊದಲ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಜಹೀರ್ ಖಾನ್ ಮತ್ತು ಚಕ್ ದೇ ಇಂಡಿಯ ಖ್ಯಾತಿಯ ನಟಿ ಹಾಗೂ ಜಹೀರ್ ಖಾನ್ ಪತ್ನಿ ಸಾಗರಿಕಾ ದಂಪತಿ ಬಗ್ಗೆಯೂ ಗುಡ್ ನ್ಯೂಸ್ ಕೇಳಿಬರುತ್ತಿದೆ.

  ಹೌದು, ಜಹೀರ್ ಖಾನ್ ಮತ್ತು ಪತ್ನಿ ಸಾಗರಿಕಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಈ ದಂಪತಿ ಐಪಿಎಲ್ ಗಾಗಿ ಮುಂಬೈನಲ್ಲಿದ್ದಾರೆ. ಇತ್ತೀಚಿಗೆ ಜಹೀರ್ ಖಾನ್ ಪತ್ನಿಯ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಈ ವೇಳೆ ಸಾಗರಿಕಾ ಸಡಿಲವಾದ ಉಡುಪನ್ನು ಧರಿಸುತ್ತಿದ್ದಾರೆ. ಅವರ ಅವರ ಬೇಬಿ ಬಂಪ್ ಕ್ಯಾಮರಾಗೆ ಸೆರೆಯಾಗಿದೆ.

  ತಮಿಳು ನಟ ಕಾರ್ತಿ ಕುಟುಂಬದಲ್ಲಿ ಸಂಭ್ರಮ: ಅಭಿಮಾನಿಗಳಿಂದ ಅಭಿನಂದನೆ ಮಹಾಪೂರ

  ಅಲ್ಲದೆ ಜಹೀರ್ ಖಾನ್ ದಂಪತಿ ತಂದೆ-ತಾಯಿಯಾಗುತ್ತಿರುವ ಸುದ್ದಿಯನ್ನು ಅವರ ಆಪ್ತರು ಖಚಿತಪಡಿಸಿದ್ದಾರೆ. ಈ ಬಗ್ಗೆ ಜಹೀರ್ ಖಾನ್ ಅಥವಾ ಸಾಗರಿಕಾ ಎಲ್ಲೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. 2017ರಲ್ಲಿ ಜಹೀರ್ ಖಾನ್ ಮತ್ತು ಸಾಗರಿಕಾ ವಿವಾಹ ಜೀವನಕ್ಕೆ ಒಳಗಾಗಿದ್ದಾರೆ.

  ಈ ಸುದ್ದಿ ಬಹಿರಂಗವಾಗುತ್ತಿದಂತೆ ಜಹೀರ್ ಖಾನ್ ದಂಪತಿಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸಾಗರಿಕಾ 2007ರಲ್ಲಿ ರಿಲೀಸ್ ಆದ ಕಚ್ ದೇ ಇಂಡಿಯಾ ಸಿನಿಮಾದಲ್ಲಿ ಪ್ರೀತಿ ಸಭರ್ವಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಲಿವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಿತ್ತು.

  DIRECTORS DIARY : Pavan Wadeyar ಜನ ಹೇಳಿದ್ಮೇಲೆ ಕೇಳಲೇ ಬೇಕು, ಅದಕ್ಕೆ ಈ ಸಿನಿಮಾ ಮಾಡ್ತಾ ಇದ್ದೀನಿ | Part 2

  ಇನ್ನು ಇತ್ತೀಚಿಗೆ ಸಾಗರಿಕಾ ಫುಟ್ ಫೈರಿ ಪ್ರೋಜೆಕ್ಟ್ ಅನೌನ್ಸ್ ಮಾಡಿದ್ದಾರೆ. ಕ್ರೈಮ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು ಸಾಗರಿಕಾ, ದೇವಿಕಾ ಎನ್ನುವ ಪಾತ್ರ ನಿರ್ವಹಿಸಿದ್ದಾರೆ.

  English summary
  Sagarika Ghatge and Zaheer Khan expecting their first child.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X