»   » ಕರೀನಾ ರೂಂ ನೋಡಿ ಹೌಹಾರಿದ ಅಮೃತಾ ಸಿಂಗ್

ಕರೀನಾ ರೂಂ ನೋಡಿ ಹೌಹಾರಿದ ಅಮೃತಾ ಸಿಂಗ್

Posted By:
Subscribe to Filmibeat Kannada

"ಕರೀನಾ ಹಾಗೂ ನಾನು ಮದುವೆಯಾಗುವ ಬಗ್ಗೆ ನಮ್ಮ ಕುಟುಂಬದಲ್ಲಿ ಎಲ್ಲರಿಗೂ ಇಷ್ಟವಿದೆ" ಎಂದಿದ್ದರು ನಟ ಸೈಫ್ ಅಲಿ ಖಾನ್. ಈ ಹೇಳಿಕೆ ಬಗ್ಗೆ ಎಲ್ಲರಿಗೂ ಅಲ್ಪ-ಸ್ವಲ್ಪ ಸಂದೇಹ ಇದ್ದೇ ಇತ್ತು. ಆದರೆ ಇದೀಗ ನಿಜಬಣ್ಣ ಬಯಲಾಗಿದೆ. ಎಲ್ಲರಿಗೂ ಇಷ್ಟವಿರಬಹುದು ಆದರೆ ಅದು ಅವರ ಮಾಜಿ ಪತ್ನಿ ಅಮೃತಾ ಸಿಂಗ್ ಹೊರತುಪಡಿಸಿ ಎಂಬುದೀಗ ಜಗಜ್ಜಾಹೀರಾಗಿದೆ.

ಇತ್ತೀಚಿಗೆ "ಔರಂಗಜೇಬ್' ಚಿತ್ರೀಕರಣ ತಾಣದಲ್ಲಿ ನಡೆದ ಘಟನೆ ಈ ಮಾತಿಗೆ ಸಾಕ್ಷಿಯಾಗಿದೆ. ಅಮೃತಾ ಸಿಂಗ್, ಸೈಫ್ ಪ್ರೇಯಸಿ ಕರೀನಾ ಬಗ್ಗೆ ಅಗೌರವ ಹೊಂದಿದ್ದಾರೆಂಬುದು ಆ ಘಟನೆಯಿಂದ ಸಾಬೀತಾಗಿದೆ. ವೈಆರ್ ಎಫ್ ಸ್ಟುಡಿಯೋದಲ್ಲಿ ಈ ಚಿತ್ರದ ಪಾತ್ರಧಾರಿಗಳ ಲುಕ್ ಟೆಸ್ಟ್ ನಡೆಯಿತ್ತಿತ್ತು. ಆ ವೇಳೆ, ಅಕ್ಕಪಕ್ಕದಲ್ಲಿನ ರೂಮನ್ನು ಕರೀನಾ ಹಾಗೂ ಅಮೃತಾ ಸಿಂಗ್ ಅವರಿಗೆ ಬುಕ್ ಮಾಡಲಾಗಿತ್ತು.

ತಮ್ಮ ರೂಮಿನ ಪಕ್ಕದಲ್ಲಿ ಕರೀನಾ ರೂಮು ಇರುವುದನ್ನು ನೋಡಿದ ಅಮೃತಾ, ತಕ್ಷಣವೇ ಸಂಬಂಧಪಟ್ಟವರಿಗೆ ಹೇಳಿ ತಮ್ಮ ರೂಮನ್ನು ಬೇರೆ ಮಹಡಿಗೆ ಶಿಫ್ಟ್ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕರೀನಾ ರೂಮ್ ಪಕ್ಕದಲ್ಲಿದ್ದ ಅವರ ಮೊದಲಿನ ರೂಮ್ ಬಾಗಿಲಿಗೆ "ಅಮೃತಾ ಸಿಂಗ್ ಲುಕ್ ಟೆಸ್ಟ್ ರೂಮನ್ನು ಸ್ಥಳಾಂತರಿಸಲಾಗಿದೆ' ಎಂಬ ಬೋರ್ಡ್ ನೇತಾಡುತ್ತಿತ್ತು. ಅರ್ಥವಾಯಿತಲ್ಲವೇ?

ಸೈಫ್ ಅಲಿಗೆ ಸುಳ್ಳು ಹೇಳುವುದು ಹೊಸ ವಿಷಯವೇ ಅಲ್ಲ. ಅವರು ಸಾಕಷ್ಟು ಬಾರಿ ಸುಳ್ಳು ಹೇಳಿ ಮಾಧ್ಯಮದವರನ್ನು ದಾರಿ ತಪ್ಪಿಸಲು ಯತ್ನಿಸಿದ್ದು ಮಾಧ್ಯಮದವರೇ ಅದನ್ನು  ಸಾಕಷ್ಟು ಬಾರಿ ಬಹಿರಂಗ ಮಾಡಿಯಾಗಿದೆ. ಆದರೂ ಅವರು ಪದೇಪದೇ ಪ್ರಯತ್ನಿಸಿ ಸೋಲುತ್ತಲೇ ಇರುತ್ತಾರೆ. ಈಗಲೂ ಅಷ್ಟೇ, ಕರೀನಾ-ಸೈಫ್ ಮದುವೆ, ಅಮೃತಾ ಸಿಂಗ್ ಅವರಿಗೆ ಇಷ್ಟವಿಲ್ಲ ಎಂಬುದಕ್ಕೆ ಬೇರೆ ಸಾಕ್ಷಿ ಬೇಕೆ? ಸೈಫ್ ಮತ್ತೆ ಸಿಕ್ಕಿ ಬಿದ್ದಿದ್ದಾರೆ. (ಏಜೆನ್ಸೀಸ್)

English summary
Both Amrita Singh and Kareena Kapoor was shooting at YRF studios. Amrita gave kareena a royal ignore and told the staff to change her make up room.
 
Please Wait while comments are loading...