»   » ಕರಣ್ ಮೇಲೆ ಸೈಫ್‌ ಅಸಮಾಧಾನ! ಕರಿನಾ ಜೊತೆಗಿನ ಕರಣ್ ಗೆಳೆತನಕ್ಕೆ ಕುತ್ತು?

ಕರಣ್ ಮೇಲೆ ಸೈಫ್‌ ಅಸಮಾಧಾನ! ಕರಿನಾ ಜೊತೆಗಿನ ಕರಣ್ ಗೆಳೆತನಕ್ಕೆ ಕುತ್ತು?

Posted By:
Subscribe to Filmibeat Kannada

ಬಾಲಿವುಡ್‌ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ಮತ್ತು ಕರಿನಾ ಕಪೂರ್ ಇಬ್ಬರೂ ಉತ್ತಮ ಫ್ರೆಂಡ್ಸ್. ಇದು ಬಹುಸಂಖ್ಯಾತರಿಗೆ ತಿಳಿದಿರುವ ವಿಷಯ. ಇತ್ತೀಚೆಗೆ ಬೆಬೋ ಪತಿ ಸೈಫ್ ಅಲಿ ಖಾನ್ ಮತ್ತು ಕರಣ್ ಜೋಹರ್ ಇಬ್ಬರೂ ನ್ಯೂಯಾರ್ಕ್ ನಲ್ಲಿ ನಡೆದ ಐಫಾ ಪ್ರಶಸ್ತಿ ಕಾರ್ಯಕ್ರಮವನ್ನು ಜೊತೆಯಲ್ಲಿ ಹೋಸ್ಟ್ ಮಾಡಿದರು.

'ಐಫಾ 2017' ಕಾರ್ಯಕ್ರಮದಲ್ಲಿ ನಿರೂಪಣೆ ವೇಳೆ ಕರಣ್ ಜೋಹರ್ ಅನಿರೀಕ್ಷಿತವಾಗಿ ಮಾತನಾಡಿದ ಕೆಲವು ವಿಷಯಗಳಿಂದ ಸೈಫ್ ಅಲಿ ಖಾನ್ ಬೇಸರಗೊಂಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಇವರಿಬ್ಬರ ನಡುವಿನ ಅಸಮಾಧಾನದಿಂದ ಈಗ ಕರೀನಾ ಮತ್ತು ಕರಣ್ ಗೆಳತನಕ್ಕೂ ಕುತ್ತು ಉಂಟಾಗಿದೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಅಸಲಿಗೆ ಅಲ್ಲಿ ನಡೆದದ್ದಾದರೂ ಏನು ತಿಳಿಯಲು ಮುಂದೆ ಓದಿರಿ..

ಸೈಫ್ ಪ್ರಸಿದ್ಧತೆ ಕದಿಯಲು ಕರಣ್ ಯತ್ನ

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, 'ಐಫಾ 2017'ನಲ್ಲಿ ಸೈಪ್ ಅಲಿ ಖಾನ್ ಮತ್ತು ಕರಣ್ ಜೋಹರ್ ಇಬ್ಬರಿಗೂ ಸಮಾನ ಪ್ರಾಮುಖ್ಯತೆ ನೀಡಿ ಸಮಾನವಾಗಿ ನಿರೂಪಣೆಗೆ ಸ್ಕ್ರಿಪ್ಟ್ ನೀಡಲಾಗಿತ್ತಂತೆ. ಆದರೂ ಸಹ ಕರಣ್ ಜೋಹರ್ ತಮ್ಮ ಸ್ಕ್ರಿಪ್ಟ್ ನಲ್ಲಿ ಯಾರಿಗೂ ತಿಳಿಸದೇ ಅನಿರೀಕ್ಷಿತವಾಗಿ ಬದಲಾವಣೆ ಮಾಡಿಕೊಂಡು ಎಲ್ಲರ ಗಮನವನ್ನು ತನ್ನತ್ತ ಸೆಳೆಯಲು ಯತ್ನಿಸಿದ್ದು ಈಗ ಸೈಫ್ ಬೇಸರಕ್ಕೆ ಕಾರಣವಾಗಿದೆಯಂತೆ'.

ವೇದಿಕೆಯಿಂದ ಹೊರನಡೆದ ಸೈಫ್

ಕರಣ್ ಜೋಹರ್ ಯಾವಾಗ ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಿಕೊಂಡು ಎಲ್ಲರ ಗಮನವನ್ನು ಸೆಳೆದರೋ ಆಗ ಸೈಫ್ ರವರು ಕರಣ್ ಮೇಲೆ ಅಸಮಾಧಾನಗೊಂಡು ವೇದಿಕೆಯಿಂದ ಹೊರನಡೆದರಂತೆ.

ಕೋಪದಲ್ಲೂ ವೃತ್ತಿಪರತೆ ಮೆರೆದ ನಟ

ಸೈಫ್ ಅಲಿ ಖಾನ್, ಕರಣ್ ನಡವಳಿಕೆಯಿಂದ ಕೋಪಗೊಂಡರೂ ಸಹ ಪ್ರೊಫೇಶನಲ್ ಆಗಿ ನಡೆದುಕೊಂಡು ಅವರ ಭಾಗದ ನಿರೂಪಣೆಯನ್ನು ಪೂರ್ಣಗೊಳಿಸಿದರಂತೆ.

ಆಪ್ತರೊಂದಿಗೆ ಬೇಸರ ಹಂಚಿಕೊಂಡ ಸೈಫ್

ಸೈಫ್, ಕರಣ್ ಜೋಹರ್ ಮೇಲೆ ಹೆಚ್ಚು ಕೋಪಗೊಂಡಿದ್ದು, 'ಐಫಾ 2017' ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿನ ಈ ಸಂಗತಿಯನ್ನು ತಮ್ಮ ಆಪ್ತ ಗೆಳೆಯರೊಂದಿಗೆ ಹಂಚಿಕೊಂಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಈಗ ಕರಣ್ ಜೋಹರ್ ಮತ್ತು ಬೇಬೋ ಕರಿನಾ ಕಪೂರ್ ಗೆಳೆತನದ ಮೇಲೆ ಏನಾದರೂ ಪರಿಣಾಮ ಬೀರಬಹುದು ಎಂದು ಮಾಧ್ಯಮಗಳಲ್ಲಿ ವರದಿ ಮಾಡಲಾಗಿದೆ. ಅಲ್ಲದೇ ಬಿಟೌನಿಗರು ಈ ಬಗ್ಗೆ ಪಿಸುಗುಡುತ್ತಿದ್ದಾರೆ ಎನ್ನಲಾಗಿದೆ.

English summary
Saif Ali Khan Highly Upset With Karan Johar; Kareena Kapoor friendship in trouble?.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada