For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾದ ಸೈಫ್ ಅಲಿ ಖಾನ್ ಪುತ್ರ

  |

  ಬಾಲಿವುಡ್ ನಟ ಸೈಫ್ ಅಲಿ ಖಾನ್ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸಲು ಸಜ್ಜಾಗಿದ್ದಾರೆ. ಮಗನ ಸಿನಿಮಾ ಆಕಾಂಕ್ಷೆಯನ್ನು ಸೈಫ್ ಅಲಿ ಖಾನ್ ಬಹಿರಂಗಪಡಿಸಿದ್ದಾರೆ. ಈಗಾಗಲೇ ಸೈಫ್ ಅಲಿ ಖಾನ್ ಮಗಳು ಸಾರಾ ಅಲಿ ಖಾನ್ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ಸಾರ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲವಾದರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಅನೇಕ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚಿಗಷ್ಟೆ ಇಬ್ರಾಹಿಂ, ಸಹೋದರಿ ಸಾರಾ ಜೊತೆ ಮ್ಯಾಗಜಿನ್ ಕವರ್ ಫೋಟೋಗೆ ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

  800 ಕೋಟಿ ಮೌಲ್ಯದ ವೈಭವೊಪೇತ ಅರಮನೆ ಹೊಂದಿರುವ ಸೈಫ್ ಅಲಿ ಖಾನ್800 ಕೋಟಿ ಮೌಲ್ಯದ ವೈಭವೊಪೇತ ಅರಮನೆ ಹೊಂದಿರುವ ಸೈಫ್ ಅಲಿ ಖಾನ್

  ಇದೀಗ ಪುತ್ರ ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಬಣ್ಣದ ಲೋಕದ ಎಂಟ್ರಿ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ. ಈ ಮೊದಲು ಪುತ್ರನ ಸಿನಿಮಾ ಎಂಟ್ರಿ ಬಗ್ಗೆ ಮಾತನಾಡಿದ್ದ ಸೈಫ್ ಮೊದಲು ಶಿಕ್ಷಣ ಮುಗಿಯಬೇಕು ಬಳಿಕ ಸಿನಿಮಾ ಬಗ್ಗೆ ಯೋಚನೆ ಎಂದಿದ್ದರು. ಆದರೀಗ ಇದೀಗ ಇಬ್ರಾಹಿಂ ಸಿನಿಮಾ ಪಯಣಕ್ಕೆ ಕಾಲಕೂಡಿ ಬಂದಿದೆ. ಈ ಬಗ್ಗೆ ನಟ ಸೈಫ್ ಅಲಿ ಖಾನ್ ಇಂಗ್ಲಿಷ್ ವೆಬ್ ಪೋರ್ಟಲ್ ಜೊತೆ ಮಾತನಾಡಿದ್ದಾರೆ.

  'ಇಬ್ರಾಹಿಂ ವೃತ್ತಿ ಜೀವನಕ್ಕೆ ಸಿದ್ಧರಾಗುತ್ತಿದ್ದಾರೆ. ನನ್ನ ಮಕ್ಕಳು ಸಿನಿಮಾರಂಗದಲ್ಲಿ, ಸಿನಿಮಾಗಳಲ್ಲಿ ಇರಲು ಬಯಸುತ್ತೇನೆ. ಇದು ಕೆಲಸ ಮಾಡಲು ಉತ್ತಮ ಸ್ಥಳವಾಗಿದೆ. 17-18ರ ವಯಸ್ಸಿನಲ್ಲಿ ನಾನು ಗೊಂದಲದಲ್ಲಿದ್ದೆ. ಆದರೆ ನಟನೆ ನನ್ನನ್ನು ಸ್ವಯಂ ವಿನಾಶದಿಂದ ರಕ್ಷಿಸಿತು' ಎಂದು ಹೇಳಿದ್ದಾರೆ.

  'ನನ್ನ ಮಗನಿಗೆ ನಾನು ನೀಡುವ ಉತ್ತಮ ಸಲಹೆ ಎಂದರೆ ಚೆನ್ನಾಗಿ ಸಿದ್ಧನಾಗು ಎಂದು. ಇಂದು ಕಾಲಬದಲಾಗಿದೆ. ಚೆನ್ನಾಗಿ ಸಿದ್ಧನಾಗಿ ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳುತ್ತೇನೆ' ಅಂತ ಪುತ್ರನ ಸಿನಿಮಾ ಎಂಟ್ರಿ ಬಗ್ಗೆ ಸೈಫ್ ಮಾತನಾಡಿದ್ದಾರೆ.

  ಆದರೆ ಇಬ್ರಾಹಿಂ ಯಾವಾಗ ಸಿನಿಮಾಗೆ ಎಂಟ್ರಿ ಕೊಡ್ತಾರೆ, ಯಾರು ಲಾಂಚ್ ಮಾಡ್ತಾರೆ, ನಿರ್ದೇಶಕ ಯಾರು ಎನ್ನುವ ಕುತೂಹಲ ಚಿತ್ರಪ್ರಿಯರಲ್ಲಿ ಹೆಚ್ಚಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದಾರೆ ಸೈಫ್ ಪುತ್ರ ಇಬ್ರಾಹಿಂ ಮುಂದಿನ ವರ್ಷ ಹಿಂದಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

  English summary
  Saif ali khan opens up his son Ibrahim Ali Khan's debut. He says He seems prepared, I’d like all my children to be in this profession’.
  Thursday, November 5, 2020, 9:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X