For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ದಂಧೆ: ಮಗಳು ಸಾರಾ ಬಗ್ಗೆ ಕೊನೆಗೂ ಮೌನ ಮುರಿದ ನಟ ಸೈಫ್ ಅಲಿ ಖಾನ್

  |

  ಜಾಲದಲ್ಲಿ ಖ್ಯಾತ ನಟಿಯರ ಹೆಸರು ಕೇಳಿಬಂದಿದ್ದು, ಈಗಾಗಲೇ ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಅನೇಕರು ಎನ್ ಸಿ ಬಿ ವಿಚಾರಣೆ ಎದುರಿಸಿದ್ದಾರೆ. ನಶೆ ಜಾಲದಲ್ಲಿ ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಹೆಸರು ಸಹ ಕೇಳಿ ಬಂದಿದ್ದು, ಎನ್ ಸಿ ಬಿ ವಿಚಾರಣೆಗೆ ಒಳಗಾಗಿದ್ದಾರೆ.

  ಡ್ರಗ್ಸ್ ಪ್ರಕರಣದಲ್ಲಿ ನಟ ಸೈಫ್ ಅಲಿ ಖಾನ್ ಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಸುದ್ದಿ ಹಾರಿದಾಡುತ್ತಿತ್ತು. ಡ್ರಗ್ಸ್ ವಿಚಾರದಲ್ಲಿ ತಂದೆಯಾಗಿ ಸೈಫ್, ಮಗಳ ಬೆಂಬಲಕ್ಕೆ ನಿಂತಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಸೈಫ್ ಎಲ್ಲಿಯೂ ಮಾತನಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಮಗಳ ಬಗ್ಗೆ ಮೌನ ಮುರಿದಿದ್ದಾರೆ.

  'ಸುಶಾಂತ್ ಸಿಂಗ್ ಪ್ರೀತಿಯಲ್ಲಿ ನಿಯತ್ತಾಗಿ ಇರಲಿಲ್ಲ' ಎಂದ ಸಾರಾ ಅಲಿ ಖಾನ್.!'ಸುಶಾಂತ್ ಸಿಂಗ್ ಪ್ರೀತಿಯಲ್ಲಿ ನಿಯತ್ತಾಗಿ ಇರಲಿಲ್ಲ' ಎಂದ ಸಾರಾ ಅಲಿ ಖಾನ್.!

  ಇಂಗ್ಲಿಷ್ ವೆಬ್ ಪೋರ್ಟಲ್ ಜೊತೆ ಮಾತನಾಡಿರುವ ಸೈಫ್ ಮೂವರು ಮಕ್ಕಳನ್ನು ತುಂಬಾ ಪ್ರೀತಿಸುವುದಾಗಿ ಹೇಳಿದ್ದಾರೆ. ಮೂವರು ಮಕ್ಕಳನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಆರಾಧಿಸುತ್ತೇನೆ, ನಾನು ಯಾವಾಗಲು ಅವರೊಂದಿಗೆ ಇರುತ್ತೇನೆ ಎಂದು ತಿಳಿಸಿದ್ದಾರೆ. "ನಾನು ತೈಮೂರ್ ಜೊತೆ ಹೆಚ್ಚು ಸಮಯ ಕಳೆಯುತ್ತೇನೆ. ಆದರೂ ಹಿರಿಯ ಮಗ ಇಬ್ರಾಹಿಂ ಮತ್ತು ಮಗಳು ಸಾರಾ ಜೊತೆ ಸಂಪರ್ಕದಲ್ಲಿದ್ದೇನೆ. ಮೂವರು ಮಕ್ಕಳು ನನ್ನ ಹೃದಯದಲ್ಲಿದ್ದಾರೆ" ಎಂದು ಹೇಳಿದ್ದಾರೆ.

  ಮೂವರು ಮಕ್ಕಳು ವಿಭಿನ್ನ ವಯಸ್ಸಿನವರಾಗಿದ್ದರಿಂದ ಅವರ ಜೊತೆ ವಿಭಿನ್ನ ರೀತಿಯ ಸಂಪರ್ಕ ಅಗತ್ಯವಿದೆ ಎಂದು ಸೈಫ್ ಹೇಳಿದ್ದಾರೆ. ಹಿರಿಯ ಮಕ್ಕಳ ಜೊತೆ ಫೋನ್ ನಲ್ಲಿ ಸಂಪರ್ಕ ಹೊಂದಿರಬಹುದು, ಡಿನ್ನರ್ ಮಾಡಬಹುದು ಆದರೆ ತೈಮೂರ್ ಜೊತೆ ಹೀಗೆ ಇರಲು ಸಾಧ್ಯವಿಲ್ಲ ಎಂದಿದ್ದಾರೆ.

  ಸಾರಾ ಅಲಿ ಖಾನ್ ಎನ್ ಸಿ ಬಿ ವಿಚಾರಣೆ ವೇಳೆ ಡ್ರಗ್ಸ್ ಸೇವನೆ ಮಾಡುವುದನ್ನು ನಿರಾಕರಿಸಿದ್ದಾರಂತೆ. ಅಲ್ಲದೆ ಸುಶಾಂತ್ ಸಿಂಗ್ ಸಂಬಂಧದ ಬಗ್ಗೆಯೂ ಬಹಿರಂಗ ಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸುಶಾಂತ್ ಸಿಂಗ್ ಪ್ರೀತಿಯಲ್ಲಿ ನಿಯತ್ತಾಗಿ ಇರಲಿಲ್ಲ, ಹಾಗಾಗಿ ಆತನಿಂದ ದೂರ ಆಗಿರುವುದಾಗಿ ಸಾರಾ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಾರಾ, ಎನ್ ಸಿ ಬಿ ವಿಚಾರಣೆ ಮುಗಿಸಿ 10 ದಿನಗಳು ಕಳೆದಿವೆ. ವಿಚಾರಣೆ ಬಳಿಕ ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ.

  English summary
  Saif Ali Khan breaks silence on Rumours of Distancing Himself From Sara Ali Khan After her Drug Scandal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X