twitter
    For Quick Alerts
    ALLOW NOTIFICATIONS  
    For Daily Alerts

    ಆಸ್ತಿ ವಿಚಾರವಾಗಿ ದೊಡ್ಡ ಮೊತ್ತದ ವಂಚನೆಗೆ ಒಳಗಾಗಿದ್ದ ಸೈಫ್ ಅಲಿ ಖಾನ್!

    |

    ನಟ ಸೈಫ್ ಅಲಿ ಖಾನ್ ಅವರದ್ದು ರಾಜಮನೆತನ. ಅವರ ತಾತ, ಮುತ್ತಾತರು ರಾಜ್ಯಗಳನ್ನಾಳಿದವರು. ಭಾರತದ ಅತ್ಯಂತ ಶ್ರೀಮಂತ ಮನೆತನದ ಕುಡಿ ಸೈಫ್ ಅಲಿ ಖಾನ್. ಈಗಲೂ ಅವರ ಹೆಸರಲ್ಲಿ ಅರಮನೆಗಳು, ನೂರಾರು ಎಕರೆ ಜಮೀನು ಇವೆ.

    ಆದರೆ ಇದೇ ಸೈಫ್ ಅಲಿ ಖಾನ್‌ಗೆ ಕೆಲವು ವ್ಯಕ್ತಿಗಳು ಭಾರಿ ದೊಡ್ಡ ಮೊತ್ತದ ಹಣ ವಂಚನೆ ಮಾಡಿದ್ದರಂತೆ. ಯಾವ ಮಟ್ಟಿಗೆಂದರೆ ಸೈಫ್ ಅಲಿ ಖಾನ್ ತಾವು ದುಡಿದ ಹಣದಲ್ಲಿ ಬಹುತೇಕ ಮುಕ್ಕಾಲು ಪಾಲು ಹಣವನ್ನು ಕಳೆದುಕೊಳ್ಳುವ ಹಂತ ತಲುಪಿದ್ದರು. ಈ ವಂಚನೆ ಪ್ರಕರಣದಲ್ಲಿ ಸೈಫ್‌ಗೆ ಈಗಲೂ ನ್ಯಾಯ ದೊರೆತಿಲ್ಲ. ಕಾನೂನು ಹೋರಾಟ ನಡೆಸುತ್ತಿದ್ದಾರೆ.

    ಸೈಫ್ ಅಲಿ ಖಾನ್ ನಟನೆಯ 'ಬಂಟಿ ಔರ್ ಬಬ್ಲಿ 2' ಸಿನಿಮಾದ ಪ್ರಚಾರ ಕಾರ್ಯ ಇದೀಗ ನಡೆಯುತ್ತಿದೆ. ಇದರ ಭಾಗವಾಗಿಯೇ ಸಿನಿಮಾದಲ್ಲಿ ಸೈಫ್‌ಗೆ ನಾಯಕಿಯಾಗಿ ನಟಿಸಿರುವ ರಾಣಿ ಮುಖರ್ಜಿ ಹಾಗೂ ಇತರೆ ನಟರು ಕೆಲವು ಸಂದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ನಟಿ ರಾಣಿ ಮುಖರ್ಜಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ತಾವು ಕೆಲವರನ್ನು ನಂಬಿ ಭಾರಿ ಮೊತ್ತದ ಹಣವನ್ನು ಕಳೆದು ಕೊಳ್ಳುವ ಹಂತಕ್ಕೆ ಬಂದ ವಿಷಯವನ್ನು ಹಂಚಿಕೊಂಡಿದ್ದಾರೆ.

    ''ನಾನು ಕೆಲವರನ್ನು ನಂಬಿ ಮುಂಬೈನಲ್ಲಿ ಒಂದು ಪ್ರಾಪರ್ಟಿ ಮೇಲೆ ಬಹಳ ದೊಡ್ಡ ಬಂಡವಾಳ ಹಾಕಿದೆ. ನನ್ನ ಈವರೆಗಿನ ದುಡಿಮೆಯ 70% ಹಣವನ್ನು ನಾನು ತೊಡಗಿಸಿಬಿಟ್ಟೆ. ಮೂರು ವರ್ಷಗಳಲ್ಲಿ ಆ ಪ್ರಾಪರ್ಟಿ ನಿಮ್ಮದಾಗುತ್ತದೆ ಎಂದು ಅವರು ಹೇಳಿದ್ದರು. ನಾನು ಸಹ ಹಣ ಕೊಟ್ಟುಬಿಟ್ಟೆ. ಆದರೆ ಈಗಲೂ ಸಹ ಆ ಆಸ್ತಿ ನನ್ನದಾಗಿಲ್ಲ. ಅದಕ್ಕಾಗಿ ಹೋರಾಡುತ್ತಲೇ ಇದ್ದೀನಿ, ಅದನ್ನು ಪಡೆದೇ ತೀರುತ್ತೀನಿ'' ಎಂದಿದ್ದಾರೆ ಸೈಫ್ ಅಲಿ ಖಾನ್.

    ಯಾವ ಆಸ್ತಿ ವಿಚಾರದಲ್ಲಿ ವಂಚನೆ?

    ಯಾವ ಆಸ್ತಿ ವಿಚಾರದಲ್ಲಿ ವಂಚನೆ?

    ''ನೀವು ಈಗ ವಾಸವಿರುವ ಮನೆಯ ಬಗ್ಗೆ ಮಾತನಾಡುತ್ತಿದ್ದೀರಾ?'' ಎಂದು ರಾಣಿ ಮುಖರ್ಜಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸೈಫ್ ಅಲಿ ಖಾನ್, ''ಅಲ್ಲ-ಅಲ್ಲ. ನಾನೊಂದು ವಾಣಿಜ್ಯ ಆಸ್ತಿಯ ಮೇಲೆ ಹಣ ತೊಡಗಿಸಿದ್ದೆ'' ಎಂದಿದ್ದಾರೆ. ಸೈಫ್‌-ಕರೀನಾಗೆ ಎರಡನೇ ಮಗು ಜನಿಸುವ ಸಂದರ್ಭದಲ್ಲಿ ಇಬ್ಬರೂ ಮುಂಬೈನ ಬಾಂದ್ರಾದಲ್ಲಿ ಹೊಸ ಮನೆ ಖರೀದಿಸಿ ಅಲ್ಲಿಗೆ ವಾಸ್ತವ್ಯ ಬದಲಾಯಿಸಿಕೊಂಡಿದ್ದರು. ಆದರೆ ತಮ್ಮ ಹಳೆಯ ಮನೆಯನ್ನು ಸೈಫ್ ಅಲಿ ಖಾನ್ ಮಾರಿಲ್ಲ.

    ಕೈತಪ್ಪಿ ಹೋಗಲಿದ್ದ ಗುರುಗ್ರಾಮದಲ್ಲಿನ ಅರಮನೆ

    ಕೈತಪ್ಪಿ ಹೋಗಲಿದ್ದ ಗುರುಗ್ರಾಮದಲ್ಲಿನ ಅರಮನೆ

    ರಾಜಮನೆತನದ ಕುಡಿ ಸೈಪ್ ಅಲಿ ಖಾನ್‌ ಕೆಲ ಅರಮನೆಗಳನ್ನು ಸಹ ಹೊಂದಿದ್ದಾರೆ. ಆದರೆ ಒಂದು ಅರಮನೆಯನ್ನು ವಾಪಸ್ ಪಡೆಯಲು ಸಹ ಭಾರಿ ದೊಡ್ಡ ಮೊತ್ತವನ್ನೇ ಖರ್ಚು ಮಾಡಿದ್ದಾಗಿ ಕೆಲವು ತಿಂಗಳ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಗುರುಗಾಂವ್‌ನಲ್ಲಿರುವ ವಂಶಸ್ಥರ ಅರಮನೆ ಬಹುತೇಕ ಸೈಫ್ ಅಲಿ ಖಾನ್ ಕೈ ತಪ್ಪಿ ಹೋಗಿತ್ತು. ಸಾಕಷ್ಟು ಹಣ ತೆತ್ತು, ಕಾನೂನು ಹೋರಾಟ ನಡೆಸಿ ಸೈಫ್ ಅಲಿ ಖಾನ್ ಅದನ್ನು ಉಳಿಸಿಕೊಂಡಿದ್ದಾರೆ.

    ಆ ಅರಮನೆ ವಂಶದತ್ತವಾಗಿ ನನಗೆ ಬರಲಿಲ್ಲ: ಸೈಫ್

    ಆ ಅರಮನೆ ವಂಶದತ್ತವಾಗಿ ನನಗೆ ಬರಲಿಲ್ಲ: ಸೈಫ್

    ''ತಂದೆ ಪಟೌಡಿ ನಿಧನದ ವೇಳೆಗೆ ಗುರುಗ್ರಾಮದ ಇಬ್ರಾಹಿಂ ಕೋಟೆ ಅರಮನೆಯನ್ನು ನೀಮ್ರಾನಾ ಹೋಟೆಲ್‌ಗೆ ಲೀಸ್‌ಗೆ ನೀಡಲಾಗಿತ್ತು. ಆ ಅರಮನೆ ನನಗೆ ವಂಶದತ್ತವಾಗಿ ಬರಲಿಲ್ಲ. ಬದಲಿಗೆ ನಾನು ಬಹಳ ದೊಡ್ಡ ಮೊತ್ತದ ಹಣವನ್ನು ಅದಕ್ಕಾಗಿ ತೆತ್ತು ಹಲವು ಸುತ್ತುಗಳ ಕಾನೂನು ಹೋರಾಟ ಮಾಡಿದ ಮೇಲಷ್ಟೆ ಆ ಹೋಟೆಲ್ ನನಗೆ ಬಂತು. ಅದನ್ನು ನಾನು ಮರು ಖರೀದಿಸಲಿಲ್ಲ. ಆದರೆ ಹೋಟೆಲ್‌ನ ಲೀಸ್ ಮೊತ್ತ ತೀರಿಸುವುದು, ಕಾನೂನು ಪ್ರಕ್ರಿಯೆ ಇದಕ್ಕೆಲ್ಲ ಬಹಳ ದೊಡ್ಡ ಮೊತ್ತವನ್ನೇ ಖರ್ಚು ಮಾಡಬೇಕಾಯಿತು'' ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು ಸೈಫ್ ಅಲಿ ಖಾನ್.

    ವೈಭವೋಪೇತ ಅರಮನೆ

    ವೈಭವೋಪೇತ ಅರಮನೆ

    ಗುರುಗ್ರಾಮದಲ್ಲಿರುವ 'ಇಬ್ರಾಹಿಂ ಕೋಟೆ' ಅರಮನೆ ಸಾಮಾನ್ಯವಾದ ಅರಮನೆಯಲ್ಲ. ಭಾರತದ ವೈಭವೋಪೇತ ಅರಮನೆಗಳಲ್ಲಿ ಇದು ಒಂದು. ಈ ಅರಮನೆಯನ್ನು 10 ಎಕರೆ ಜಾಗದಲ್ಲಿ ನಿರ್ಮಿಸಲಾಗಿದೆ. ಅರಮನೆಯಲ್ಲಿ 150 ಕೊಠಡಿಗಳಿವೆ. ಏಳು ಬಿಲಿಯರ್ಡ್ ಟೇಬಲ್ ರೂಂಗಳಿವೆ. ಹಲವು ಈಜುಕೊಳಗಳ, ಡ್ರೆಸ್ಸಿಂಗ್ ರೂಮ್, ವಿಶಾಲವಾದ ಹಾಲ್‌ಗಳು, ವೈಭವೋಪೇತ ಪೀಠೋಪಕರಣಗಳು ಇವೆ. ಈ ಅರಮನೆಯ ಇಂದಿನ ಅಂದಾಜು ಮೌಲ್ಯ 800 ಕೋಟಿ ರುಪಾಯಿ. ಈ ಅರಮನೆ ಈಗ ಪೂರ್ಣವಾಗಿ ಸೈಫ್ ಅಲಿ ಖಾನ್ ಪಾಲಾಗಿದೆ.

    English summary
    Actor Saif Ali Khan said he was scammed in Mumbai property deal. He invested 70% of his total wealth. Now he is in legal fight to get it.
    Friday, November 19, 2021, 15:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X