For Quick Alerts
  ALLOW NOTIFICATIONS  
  For Daily Alerts

  ದುಬಾರಿ ಮದುವೆ ಎಂದರೆ ಭಯವಾಗುತ್ತದೆ, ನನಗೆ 4 ಮಕ್ಕಳಿದ್ದಾರೆ; ನಟ ಸೈಫ್ ಅಲಿ ಖಾನ್

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಸದ್ಯ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಸೈಫ್ ಇತ್ತೀಚಿಗಷ್ಟೆ ಭೂತ್ ಪೊಲೀಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಭೂತ್ ಪೊಲೀಸ್ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

  ಈ ಸಿನಿಮಾದ ಪ್ರಮೋಷನ್ ನಲ್ಲಿ ನಟ ಸೈಫ್ ಮತ್ತು ತಂಡ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸೈಫ್ ಪ್ರಸಿದ್ಧ ಕಾಮಿಡಿ ಕಾರ್ಯಕ್ರಮ ಕಪಿಲ್ ಶರ್ಮಾ ಶೋನಲ್ಲಿ ಭಾಗಿಯಾಗಿದ್ದರು. ಈ ಶೋ ಅನೇಕ ಬಾರಿ ಹಲವು ತಮಾಷೆಯ ಸಂಗತಿಗಳಿಗೆ ಸಾಕ್ಷಿಯಾಗುತ್ತದೆ. ಇತ್ತೀಚಿಗೆ ನಟಿ ಯಾಮಿ ಗೌತಮ್, ಸೈಫ್ ಅಲಿ ಖಾನ್, ಅರ್ಜುನ್ ಕಪೂರ್ ಹಾಗೂ ಜಾಕ್ವೆಲಿನ್ ಫೆರ್ನಾಂಡಿಸ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಹಾರರ್- ಕಾಮಿಡಿ ಸಿನಿಮಾವಾಗಿದೆ. ಈ ಕಾರ್ಯಕ್ರಮದಲ್ಲಿ ಯಾಮಿ ಗೌತಮ್ ಮತ್ತು ಸೈಫ್ ಅಲಿ ಖಾನ್ ಮದುವೆ ಬಗ್ಗೆ ಚರ್ಚೆ ನಡೆಯಿತು. ಈ ಸಮಯದಲ್ಲಿ ಸೈಫ್ ಮಕ್ಕಳ ಮದುವೆ ಬಗ್ಗೆ ಮಾತನಾಡಿದ್ದಾರೆ.

  ನಟಿ ಯಾಮಿ ಗೌತಮ್ ಇತ್ತಿಚೀಗಷ್ಟೆ ನಿರ್ದೇಶಕ ಆದಿತ್ಯ ಧರ್ ಅವರೊಂದಿಗೆ ಸರಳವಾಗಿ ವಿವಾಹವಾದರು. ಯಾಮಿ ಮತ್ತು ಆದಿತ್ಯ ಮದುವೆಯಲ್ಲಿ ಕೆಲವೇ ಕೆಲವು ಆಪ್ತರು ಮಾತ್ರ ಭಾಗಿಯಾಗಿದ್ದರು. ಸುಮಾರು 20 ಜನರಷ್ಟೇ ಭಾಗವಹಿಸಿದ್ದರ ಕುರಿತು ಶೋನಲ್ಲಿ ಚರ್ಚೆಯಾಯಿತು. ಈ ವೇಳೆ ಯಾಮಿ ಗೌತಮ್, ತನ್ನ ಅಜ್ಜಿಯ ಮಾತಿನಂತೆ, ಕೊರೊನಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ನಡೆಸಲಾಯಿತು. ಆದ್ದರಿಂದ ಸಣ್ಣ ಮಟ್ಟದಲ್ಲಿ‌ ನಡೆಯಿತು ಎಂದು ತನ್ನ ಮದುವೆ ಬಗ್ಗೆ ಹೇಳಿಕೊಂಡರು.

  ಈ ವೇಳೆ ಮಾತನಾಡಿದ ಸೈಫ್ ಅಲಿ ಖಾನ್ ತನ್ನ ಮದುವೆಯ ಬಗ್ಗೆ ಹೇಳಿಕೊಂಡರು. ಸೈಫ್ ಮತ್ತು ಕರೀನಾ 2012ರಲ್ಲಿ ವಿವಾಹವಾದರು. ಸೈಫ್ ಗೆ ಅದು ಎರಡನೇ ಮದುವೆಯಾಗಿತ್ತು. ಕೇವಲ ಆಪ್ತರ ಸಮ್ಮುಖದಲ್ಲಿ ಮದುವೆಯಾಗಲು ಸೈಫ್ ಮತ್ತು ಕರೀನಾ ಯೋಚಿಸಿದ್ದರು. ಆದರೆ ಕೇವಲ‌ ಕಪೂರ್ ಕುಟುಂಬದವರೇ 200 ಜನಕ್ಕಿಂತಲೂ ಹೆಚ್ಚು ಜನ ಭಾಗಿಯಾಗಿದ್ದರು ಎಂದು ಸೈಫ್ ಹೇಳಿದರು.

  ನಂತರ ಸೈಫ್ ದುಬಾರಿ ಮದುವೆ ಬಗ್ಗೆ ಮಾತನಾಡಿದರು. "ನನಗೆ ದುಬಾರಿ ಮದುವೆ ಬಗ್ಗೆ ಭಯವಿದೆ. ಕಾರಣ, ನನಗೆ ನಾಲ್ಕು ಜನ ಮಕ್ಕಳಿದ್ದಾರೆ" ಎಂದು ಹೇಳಿದರು. ಸೈಫ್ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತ್ತು. ಸದ್ಯ ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದೆ. ಸಂಪೂರ್ಣ ಕಾರ್ಯಕ್ರಮ ನೋಡಲು ಪ್ರೇಕ್ಷಕರ ಕಾತರದಿಂದ ಕಾಯುತ್ತಿದ್ದಾರೆ.

  ಸೈಫ್ ಅಲಿ ಖಾನ್ ಮತ್ತು ಅವರ ಮೊದಲ ಪತ್ನಿ‌ ಅಮೃತಾ ಸಿಂಗ್ ಅವರಿಗೆ ಇಬ್ಬರು ಮಕ್ಕಳು. ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್. ಸಾರಾ ಅಲಿ ಖಾನ್ ಈಗಾಗಲೇ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಮಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಇನ್ನು ಸೈಫ್ ಹಾಗೂ ಎರಡನೇ ಪತ್ನಿ ಕರೀನಾಗೂ ಇಬ್ಬರು ಮಕ್ಕಳು. ತೈಮೂರ್ ಅಲಿ ಖಾನ್ ಹಾಗೂ ಜಹಾಂಗೀರ್ ಅಲಿ ಖಾನ್. ಸಿನಿಮಾಗಳ ಜೊತೆಗೆ ಸೈಫ್ ಮಕ್ಕಳ ಬಗ್ಗೆಯೂ ಅಷ್ಟೆ ಗಮನ ವಹಿಸುತ್ತಾರೆ. ಕುಟುಂಬದ ಜೊತೆಯೂ ಸೈಫ್ ಹೆಚ್ಚಾಗಿ ಸಮಯ ಕಳೆಯುತ್ತಾರೆ. ನಾಲ್ಕು ಮಕ್ಕಳನ್ನು ಸೈಫ್ ತುಂಬಾ ಪ್ರೀತಿಸುತ್ತಾರೆ. ಮುದ್ದಾದ ಮಕ್ಕಳ ಜೊತೆ ಇರುವ ಸೈಫ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ.

  ಇನ್ನು ಇತ್ತೀಚಿಗಷ್ಟೆ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾ ಬಿಡುಗಡೆ ಬಗ್ಗೆ ಮಾತನಾಡಿದ್ದರು. ಸಿನಿಮಾ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ ಎನ್ನುವ ಸುಳಿವನ್ನು ನೀಡಿದ್ದರು. ಆದಿಪುರುಷ್ ಚಿತ್ರೀಕರಣ ಈಗಾಗಲೇ ಬಹುತೇಕ ಮುಗಿದಿದೆ. ಈಗಾಗಲೇ ಬಿಡುಗಡೆ ದಿನಾಂಕ ಘೋಷಿಸಿರುವ ಚಿತ್ರತಂಡ, ಆಗಸ್ಟ್ 11, 2022ಕ್ಕೆ ತೆರೆಗೆ ಬರಲಿದೆ. ಆದರೆ ಕೋವಿಡ್ ಕಾರಣದಿಂದ ನಿಗದಿತ ಯೋಜನೆಗಳು ಬದಲಾಗುವ ಸಾಧ್ಯತೆ ಇದೆ.

  ಈ ಬಗ್ಗೆ ಮಾತನಾಡಿದ್ದ ಸೈಫ್, ''ಚಿತ್ರವು ತುಂಬಾ ವಿಶಿಷ್ಟ ಮತ್ತು ವಿಭಿನ್ನವಾಗಿದೆ. ಹಿಂದೆಂದೂ ಕಂಡಿರದ ವಿಶ್ಯೂಲ್ ಎಫೆಕ್ಟ್ಸ್ ಒಳಗೊಂಡಿರುವ ಅತಿ ದೊಡ್ಡ ಚಿತ್ರ. ಇದು ಚಿತ್ರಮಂದಿರಗಳಲ್ಲಿ ಹೊರತುಪಡಿಸಿ ಎಲ್ಲಿಯೂ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಓಂ ರಾವುತ್ ಪ್ರೇಕ್ಷಕರಿಗೆ ಯಾರೂ ನಿರೀಕ್ಷೆ ಮಾಡಿರದ ಅನುಭವ ನೀಡುತ್ತಿದ್ದಾರೆ'' ಎಂದು ಸೈಫ್ ಅಲಿ ಖಾನ್ ಆದಿಪುರುಷ್ ಚಿತ್ರದ ಬಗ್ಗೆ ಹೇಳಿದ್ದರು. ಈ ಮೂಲಕ ಚಿತ್ರಮಂದಿರದಲ್ಲೇ ಈ ಸಿನಿಮಾ ಬರುವುದು ಖಚಿತ ಎಂದು ಬಹಿರಂಗ ಪಡಿಸಿದ್ದರು.

  English summary
  Saif Ali Khan speaks about his childrens marriage, He says he is scared of expensive wedding,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X