»   » ಇಂದಿಗೂ ಸಲ್ಮಾನ್, ಕ್ಯಾಟ್ ಬಾಲಿವುಡ್‌ನ ನೆಚ್ಚಿನ ನಟರು

ಇಂದಿಗೂ ಸಲ್ಮಾನ್, ಕ್ಯಾಟ್ ಬಾಲಿವುಡ್‌ನ ನೆಚ್ಚಿನ ನಟರು

Posted By:
Subscribe to Filmibeat Kannada

ಒಂದು ಕಾಲದಲ್ಲಿ ಬಾಲಿವುಡ್‌ನ ಮೋಸ್ಟ್ ಮ್ಯಾಚಿಂಗ್ ಜೋಡಿಯಾಗಿದ್ದ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಬ್ರೇಕಪ್ ಆಗಿ ಎಷ್ಟೋ ಕಾಲವಾಯಿತು. ಆದರೆ, ಜನ ಮಾತ್ರ ಅವರ ಜೋಡಿಯನ್ನು ಮರೆತಿಲ್ಲ. ಇಂದಿಗೂ ಸಲ್ಮಾನ್ ಹಾಗೂ ಕ್ಯಾಟ್ ಭಾರತೀಯರ ನೆಚ್ಚಿನ ನಟರು.

ಆನ್‌ಲೈನ್ ಮಾರುಕಟ್ಟೆ ಸಂಶೋಧನಾ ವೆಬ್ ಪೋರ್ಟಲ್ Yougov.com ನಡೆಸಿದ ಸಮೀಕ್ಷೆಯಲ್ಲಿ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಭಾರತದ ಜನಪ್ರಿಯ ನಟರೆನಿಸಿಕೊಂಡಿದ್ದಾರೆ.

kat

ಪ್ರಧಾನಿ ನರೇಂದ್ರ ಮೋದಿ ಪ್ರಥಮಿಯಾಗಿದ್ದರೆ, ಕ್ರಿಕೆಟ್ ದಂತಕತೆ ಸಚಿನ್ ದ್ವಿತೀಯ ಹಾಗೂ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಗೇಟ್ಸ್ ತೃತೀಯ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಸಲ್ಮಾನ್ ಖಾನ್‌ ಹಾಗೂ ಐದರಲ್ಲಿ ಕತ್ರಿನಾ ಕೈಫ್‌ ಇದ್ದಾರೆ. ಇವರಿಬ್ಬರೂ ಇಂದು ಜೋಡಿಯಾಗಿ ಇಲ್ಲದಿದ್ದರೂ ಜನಪ್ರಿಯತೆಯಲ್ಲಿ ಅಕ್ಕಪಕ್ಕದಲ್ಲಿದ್ದಾರೆ.

ಆದರೆ, ಸಲ್ಮಾನ್ ಬಾಲಿವುಡ್‌ನ ಬ್ಯಾಡ್‌ ಬಾಯ್ ಎಂದು ಹೆಸರು ಪಡೆದಿದ್ದರೂ ಜನಪ್ರಿಯತೆಯಲ್ಲಿ ಇಂದಿಗೂ ನಂ. 1 ಆಗಿದ್ದಾರೆ. ಗಳಿಕೆಯಲ್ಲಿ ಅಮೀರ್ ಖಾನ್ ಅವರ ಪಿಕೆ ನಂತರದ ಸ್ಥಾನ ಸಲ್ಮಾನ್‌ ಅವರ ಕಿಕ್‌ಗೆ ಇದೆ. 2014ರಲ್ಲಿ ಅತಿ ಹೆಚ್ಚು ಗಳಿಕೆ ಹೊಂದಿದ ವ್ಯಕ್ತಿಯೂ ಅವರೇ.

English summary
Salman Khan is the top film star in the ‘India’s Most Admired 2015’ survey conducted by online market research portal Yougov.com. Katrina Kaif is first among female actors.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada