For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಜಾದೂಗೆ ಬೆಚ್ಚಿಬಿದ್ದ ಅಮೀರ್, ಶಾರುಖ್

  |

  ಸಲ್ಮಾನ್ ಖಾನ್ ನಟನೆಯ 'ಏಕ್ ಥಾ ಟೈಗರ್', ಈ ಹಿಂದಿನ ಎಲ್ಲಾ ದಾಖಲೆಗಳನ್ನೂ ಮುರಿದಿದೆ. ಮೊದಲ ನಾಲ್ಕು ದಿನಗಳಲ್ಲೇ ಇದು ರು. 80 ಕೋಟಿ ಗಳಿಸಿ ಈ ಹಿಂದಿನ ಎಲ್ಲಾ ದಾಖಲೆಗಳನ್ನೂ ಅಳಿಸಿಹಾಕಿದೆ. 5 ನೇ ದಿನದ ಹೊತ್ತಿಗೆ ರು. 100 ಕೋಟಿ ಗಳಿಸಿದ ಈ ಚಿತ್ರದ ವಾರದ ಗಳಿಕೆ ಬಾಲಿವುಡ್ ಚಿತ್ರಜಗತ್ತಿನಲ್ಲಿ ಹೊಸ ದಾಖಲೆ ಬರೆಯಲಿರುವುದು ಪಕ್ಕಾ ಆಗಿದೆ. ಸಲ್ಲೂ ಚಿತ್ರವೇ ಆಗಿರುವ 'ದಬಾಂಗ್' ದಾಖಲೆ ಈ ಟೈಗರ್ ಮುಂದೆ ಧೂಳಿಪಟವಾಗಿದೆ.

  ಇತ್ತೀಚಿಗೆ ಸಲ್ಲೂ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. (ಈ ಮಾತು ಕತ್ರಿನಾ ಕೈಫ್ ಬಿಟ್ಟು ಹೇಳಿದ್ದೆಂಬುದು ಗಮನದಲ್ಲಿರಲಿ) ಸತತ ಆರೇಳು ಚಿತ್ರಗಳು ಸೂಪರ್ ಹಿಟ್ ದಾಖಲೆ ಪಟ್ಟಿ ಸೇರಿವೆ. ವಾಂಟೆಡ್, ರೆಡಿ, ದಬಾಂಗ್, ಬಾಡಿಗಾರ್ಡ್ ಹೀಗೆ ಸಲ್ಮಾನ್ ಖಾನ್ ಅಭಿನಯದ ಇತ್ತೀಚಿಗೆ ಬಂದ ಚಿತ್ರಗಳೆಲ್ಲಾ ಸತತವಾಗಿ ಸೂಪರ್ ಸಕ್ಸಸ್ ಆಗಿವೆ. ಸಲ್ಲೂ ಈಗ ಬಾಲಿವುಡ್ ಬಾಕ್ಸ್ ಆಫೀಸ್ ಕಿಂಗ್!

  ಈ ಎಲ್ಲಾ ಸತತ ಸಕ್ಸಸ್ ಪರಿಣಾಮವಾಗಿ, ಸಲ್ಲೂ ಈಗ 'ಬಾಲಿವುಡ್ ನಂ.1' ಪಟ್ಟವನ್ನು ಅನಾಯಾಸವಾಗಿ ಗಿಟ್ಟಿಸಿಕೊಂಡಿದ್ದಾರೆ. ಈ ಮೊದಲು ಸಲ್ಲೂಗೆ ಸ್ಪರ್ಧಿಗಳಾಗಿದ್ದ ಅಮೀರ್ ಖಾನ್ ಹಾಗೂ ಶಾರುಖ್ ಖಾನ್ ಇಬ್ಬರೂ ಈಗ ಸಲ್ಲೂಗಿಂತ ಸಾಕಷ್ಟು ಹಿಂದೆಬಿದ್ದಿದ್ದಾರೆ. ಬಾಡಿಗಾರ್ಡ್ , ದಬಾಂಗ ಯಶಸ್ಸಿನ ಮೂಲಕವೇ ಸಲ್ಲೂ ಉಳಿದಿಬ್ಬರ ಸಾಲಿಗೆ ಸೇರಿಬಿಟ್ಟಿದ್ದರು. ಈಗ ತುಂಬಾ ಮೇಲೇರಿದ್ದಾರೆ ಎಂಬುದು ಬಾಲಿವುಡ್ ಲೆಕ್ಕಾಚಾರ.

  'ಏಕ್ ಥಾ ಟೈಗರ್' ಚಿತ್ರದ ಈ ಪರಿ ಯಶಸ್ಸಿಗೆ ಕಾರಣ, ಚಿತ್ರವನ್ನು ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಿದ್ದು. ಸ್ವಾತಂತ್ರ್ಯ ದಿನಾಚರಣೆ ದಿನ ರಿಲೀಸ್ ಮಾಡಿದ್ದರಿಂದ ಪ್ರೇಕ್ಷಕರು ರಜಾದ ಮಜ ಸವಿಯಲು ಈ 'ಟೈಗರ್ ' ಚಿತ್ರಕ್ಕೆ ಮುಗಿಬಿದ್ದರು. ನಂತರ ವೀಕೆಂಡ್ ಶುಕ್ರವಾರ, ಶನಿವಾರ ಹಾಗೂ ಭಾನುವಾರವಾದ್ದರಿಂದ ಈ ಚಿತ್ರ ಜಾಕ್ ಪಟ್ ಹೊಡೆಯಿತು.ಮತ್ತೆ ರಂಜಾನ್ ರಜೆ, ಹೇಳುವುದೇನು?

  ಹೀಗೆ ಚಿತ್ರವೊಂದು ಸಕ್ಸಸ್ ಆಗಲು ಬೇಕಾದ ಎಲ್ಲಾ ಅಂಶಗಳು ಈ ಚಿತ್ರಕ್ಕೆ ಸಪೋರ್ಟ್ ಆಗಿದ್ದೇ ಈ ಚಿತ್ರವು ದಾಖಲೆ ಗಳಿಕೆ ಬರೆಯಲು ನೆರವಾಯ್ತು. ಜೊತೆಗೆ ಮೊದಲೇ ಇದ್ದ ಸಲ್ಮಾನ್ ಹಾಗೂ ಕತ್ರಿನಾ ಜೋಡಿ ಮೇನಿಯಾ ಚಿತ್ರ ನೋಡಿದ ಜನರಿಗೆ ಇನ್ನೂ ಹೆಚ್ಚಾಗಿ ಮೌತ್ ಪಬ್ಲಿಸಿಟಿ ಮೂಲಕ ಪ್ರೇಕ್ಷಕರೇ ಇನ್ನೂ ಹೆಚ್ಚಿನ ಪ್ರೇಕ್ಷಕರು ಬರಲು ನೆರವಾದರು ಎನ್ನುತ್ತಿದ್ದಾರೆ ಬಾಲಿವುಡ್ ಜಗತ್ತಿನ ಪಂಡಿತರು. ಒಟ್ಟಿನಲ್ಲಿ ಡಿಸೆಣಬರ್ ನಲ್ಲಿ ಬರಲಿರುವ ಸಲ್ಲೂ 'ದಬಾಂಗ್-2' ಚಿತ್ರಕ್ಕೀಗ ಭಾರಿ ನಿರೀಕ್ಷೆ ಶುರುವಾಗಿದೆ. (ಏಜೆನ್ಸೀಸ್)

  English summary
  Successfully screening Salman Khan movie 'Ek Tha Tiger', set new Record in Bollywood Box Office as everyone knows. It already broke his earlier movie 'Dabangg' record too. Now, in coming December 2012, his 'Dabangg 2' has to release. Now everyone is waiting for that. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X