»   » ಲೂಲಿಯಾ ಬಂಧವನ್ನೂ ಕಳಚಿಕೊಂಡ ಸಲ್ಮಾನ್?

ಲೂಲಿಯಾ ಬಂಧವನ್ನೂ ಕಳಚಿಕೊಂಡ ಸಲ್ಮಾನ್?

By ಪುರಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಈ ಜನುಮದಲ್ಲಾದರೂ 47ರ ಗಡಿ ದಾಟಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮದುವೆ ಆಗುತ್ತದಾ? ಇಂಥದೊಂದು ಪ್ರಶ್ನೆ ಉದ್ಭವವಾಗಿರುವುದಕ್ಕೆ ಕಾರಣ ಅವರ ಇತ್ತೀಚಿನ ಪ್ರೇಮ ಪ್ರಕರಣ ಕೂಡ ಮುರಿದುಬೀಳುವ ಹಂತ ತಲುಪಿದೆ ಎಂಬ ಸುದ್ದಿ ಹೊರಬಿದ್ದಿರುವುದು. ಸಲ್ಮಾನ್ ಅವರ ವಿಫಲ ಪ್ರೇಮ ಪ್ರಕರಣಗಳ ಪಟ್ಟಿಗೆ ಇದು ಕೂಡ ಸೇರ್ಪಡೆಯಾಗಿದೆ.

  ಹಿಂದಿ ಚಿತ್ರರಂಗದಲ್ಲಿ ಪ್ರಸ್ತುತ ಅತಿಹೆಚ್ಚು ಗಳಿಸುತ್ತಿರುವ ನಟರಲ್ಲಿ ಒಬ್ಬರಾಗಿರುವ ಸಲ್ಮಾನ್ ಖಾನ್ ಅವರ, ರೋಮೇನಿಯನ್ ಸಂಗಾತಿ ಲೂಲಿಯಾ ವಂಟೂರ್ ಜೊತೆಗಿನ ಅಲ್ಪಾವಧಿಯ ಅಫೇರ್ ಕೂಡ ಕೊನೆಗೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅವರಿಬ್ಬರೂ ಚತುರ್ಭುಜರಾಗುತ್ತಾರೆ ಎಂಬ ಸುದ್ದಿ ಬಂದ ಬೆನ್ನಲ್ಲೇ ಅವರ ಗೆಳೆತನ ಕೊನೆಗೊಂಡಿರುವುದು ಅವರ ಅಭಿಮಾನಿಗಳಿಗೆ ಭಾರೀ ನಿರಾಶೆ ತಂದಿದೆ.

  ನಟಿ ಮತ್ತು ಟಿವಿ ನಿರೂಪಕಿಯಾಗಿರುವ ಲೂಲಿಯಾ ಅವರು ಭಾರತಕ್ಕೆ ಹೊರಬರಾಗಿದ್ದರಿಂದ ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್‌ನಲ್ಲಿ ಸಲ್ಮಾನ್ ಖಾನ್ ಜೊತೆಯಲ್ಲೇ ಬೀಡುಬಿಟ್ಟಿದ್ದರು. ಅವರಿಬ್ಬರ ಪ್ರೇಮ ಪ್ರಕರಣ ಮದುವೆ ಚಪ್ಪರದ ಹಂತಕ್ಕೂ ಬಂದಿತ್ತು. ಆದರೆ, ಅಷ್ಟರಲ್ಲಿ ಸಲ್ಮಾನ್ ಅವರ ಎಡಗಣ್ಣು ಹಾರಲು ಶುರುಮಾಡಿದೆ. ಇದಕ್ಕೆ ಕಾರಣ ಲೂಲಿಯಾ ಅವರ ಹಿಂದಿನ ಮದುವೆಯೇ ಎಂಬುದು ಗುಟ್ಟಾಗಿ ಉಳಿದಿಲ್ಲ.

  ಗ್ರ್ಯಾಮಿ ಪ್ರಶಸ್ತಿ ನಾಮನಿರ್ದೇಶನವಾಗಿರುವ ಸಂಗೀತಗಾರನೊಂದಿಗೆ ಲೂಲಿಯಾ ಅವರು ಮತ್ತೆ ಉಂಗುರ ಬದಲಾಯಿಸಿಕೊಂಡಿದ್ದಾರೆ ಎಂಬ ಸುದ್ದಿಯನ್ನು ಲೂಲಿಯಾ ತಳ್ಳಿಹಾಕುತ್ತಲೇ ಬಂದಿದ್ದರು. ಆದರೆ, ಅದು ಖಚಿತವಾದ ಸುದ್ದಿ ಬಂದಿದ್ದೇ, ಆಕೆಯಿಂದ ದೂರವಿರಬೇಕೆಂದು ಸಲ್ಮಾನ್ ಕುಟುಂಬ ಒತ್ತಾಯಿಸಿದೆ. ಸಲ್ಮಾನ್ ಕುಟುಂಬದವರ ಮಾತಿಗೆ ಮಣಿದು, ದೇಶಬಿಟ್ಟು ಹೊರಡು ಎಂದು ಲೂಲಿಯಾಗೆ ಹೇಳಿದ್ದಾನೆ. ಅಲ್ಲಿಗೆ ಸಲ್ಮಾನ್ ಮತ್ತೆ ಏಕಾಂಗಿ.

  ಲೂಲಿಯಾ ಜೊತೆಗಿನ ಲೀವ್-ಇನ್-ರಿಲೇಶನ್‌ಶಿಪ್ ಮತ್ತು ಇತರ ಅಫೇರ್ ಗಳ ಬಗ್ಗೆ ಒಂದು ಕಣ್ಣಾಡಿಸೋಣ.

  ಮದುವೆ ಹಂತಕ್ಕೆ ಬಂದಿದ್ದ ಪರಿಣಯ

  ಕತ್ರೀನಾ ಕೈಫ್ ಜೊತೆಗಿನ ಬಂಧನವನ್ನೂ ಕಳಚಿಕೊಂಡ ಮೇಲೆ ಸಲ್ಮಾನ್ ಗಂಟುಬಿದ್ದವಳು ರೋಮೇನಿಯಾದ ನಟಿ ಸುರಸುಂದರಿ ಲೂಲಿಯಾ ವಂಟೂರ್. ಅವರಿಬ್ಬರ ಪರಿಣಯ ಮದುವೆಯ ಹಂತಕ್ಕೂ ಬಂದುಬಿಟ್ಟಿತ್ತು. ಇದೇ ವರ್ಷ ಬ್ರಹ್ಮಚರ್ಯಕ್ಕೆ ಸಲ್ಮಾನ್ ತಿಲಾಂಜಲಿ ನೀಡಲಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿತ್ತು

  ನಟಿ ಮತ್ತು ನಿರೂಪಕಿ ಲೂಲಿಯಾ ವಂಟೂರ್

  ಕೇವಲ 15ನೇ ವಯಸ್ಸಿನಲ್ಲಿ ಟಿವಿ ನಿರೂಪಕಿಯಾಗಿ ವೃತ್ತಿ ಆರಂಭಿಸಿದ ಲೂಲಿಯಾ ಹುಟ್ಟಿದ್ದು ಜುಲೈ 24, 1980ರಲ್ಲಿ. ಸಲ್ಮಾನ್ ಮತ್ತು ಲೂಲಿಯಾ ನಡುವಿನ ವಯಸ್ಸಿನ ಅಂತರ ಎಷ್ಟು ಎಂದು ನೀವೇ ಲೆಕ್ಕ ಹಾಕಿ. ಇಂಥ ಲೂಲಿಯಾ ಸಲ್ಮಾನ್ ಪ್ರಣಯಜೋಡಿಯಾಗಿದ್ದು ನಿಜಕ್ಕೂ ಅಚ್ಚರಿ ಮೂಡಿಸಿತ್ತು.

  ಸಲ್ಮಾನ್ ಗಾಗಿ ಸೀರೆಯುಟ್ಟ ಲೂಲಿಯಾ

  ಭಾರತಕ್ಕೆ ಬಂದು ಸಲ್ಮಾನ್ ಜೊತೆಯಿರಲು ಆರಂಭಿಸಿದ ನಂತರ ಲೂಲಿಯಾ ಭಾರತೀಯ ಸಂಸ್ಕೃತಿಯ ಸಂಕೇತವಾದ ಸೀರೆಯನ್ನು ಕೂಡ ಉಡಲು ಆರಂಭಿಸಿದ್ದರು. ನಿಜಕ್ಕೂ ಸೀರೆಯಲ್ಲಿ ಮದುವಣಗಿತ್ತಿಯಂತೆ ಲೂಲಿಯಾ ಕಾಣುತ್ತಿದ್ದಾರೆ.

  ಮೊದಲು ಅವರಿಬ್ಬರು ಭೇಟಿಯಾದಿದ್ದೆಲ್ಲಿ

  ಡಬ್ಲಿನ್ ನಲ್ಲಿ 2010ರಲ್ಲಿ ಸಲ್ಮಾನ್ ಬಾಡಿಗಾರ್ಡ್ ಚಿತ್ರಕ್ಕಾಗಿ ಶೂಟಿಂಗ್ ಮಾಡುತ್ತಿದ್ದಾಗ ಲೂಲಿಯಾ ಅವರತ್ತ ಆಕರ್ಷಿತಳಾಗಿದ್ದಾಳೆ. ಅಚ್ಚರಿಯೆಂದರೆ, ಆಕೆಯ ಮಾಡಿ ಸಂಗಾತಿಯ ಮುಖಾಂತರವೇ ಸಲ್ಮಾನ್ ಮತ್ತು ಲೂಲಿಯಾ ಭೇಟಿಯಾಗಿದ್ದಾರೆ. ಈಗ ಅವರಿಬ್ಬರು ಬೇರೆಯಾಗುವುದಕ್ಕೆ ಕೂಡ ಅದೇ ಹಳೆಯ ಸಂಬಂಧವೇ ಕಾರಣವಾಗುತ್ತಿದೆ.

  ಲೂಲಿಯಾಗೆ ಮಾನಸಿಕ ಧೈರ್ಯ ತುಂಬಿದ್ದರು

  ಲೂಲಿಯಾ ಮತ್ತು ಆಕೆಯ ಹಳೆಯ ಸಂಗಾತಿ ಬೇರೆಯಾದ ನಂತರ ಸಲ್ಮಾನ್ ಲೂಲಿಯಾಗೆ ಮಾನಸಿಕವಾಗಿ ಧೈರ್ಯ ತುಂಬಿದ್ದರು. ಆದರೆ, ಎರಡು ವರ್ಷಗಳ ಸಖ್ಯ ಮತ್ತೆ ಕಳಚಿಬಿದ್ದಿರುವುದು ಸಲ್ಮಾನ್ ರನ್ನು ಖಿನ್ನತೆಗೆ ತಳ್ಳಿರುವುದು ವಿಪರ್ಯಾಸವೇ ಸರಿ.

  ಡೈಸಿ ಷಾ ಜೊತೆಗೂ ಅಫೇರ್

  ಲೂಲಿಯಾ ಜೊತೆ ವಾಸಿಸಲು ಆರಂಭಿಸುವ ಮುನ್ನ ಸಲ್ಮಾನ್ ಹೆಸರು ಕನ್ನಡದ ಭದ್ರ ಮತ್ತು ಬಾಡಿಗಾರ್ಡ್ ಚಿತ್ರದಲ್ಲಿ ನಟಿಸಿರುವ ಡೈಸಿ ಷಾ ಜೊತೆ ಕೇಳಿಬಂದಿತ್ತು. ಡೈಸಿ ಷಾ ಅವರು ಸಲ್ಮಾನ್ ಜೊತೆ ಮೆಂಟಲ್ ಚಿತ್ರದಲ್ಲಿ ಕೂಡ ನಟಿಸಿದ್ದಾರೆ.

  ಕತ್ರೀನಾ ಕೈಫ್ ಜೊತೆಗಿನ ಬಂಧ

  ಉಳಿದೆಲ್ಲ ಅಫೇರುಗಳಿಗಿಂತ ಗಟ್ಟಿಯಾಗಿ ನಿಂತಿದ್ದು ಕತ್ರೀನಾ ಕೈಫ್ ಜೊತೆಗಿನ ಸಂಬಂಧ. ಐದಾರು ವರ್ಷಗಳ ಸಾಂಗತ್ಯ ಇದ್ದಕ್ಕಿದ್ದಂತೆ ಕಳಚಿಬಿದ್ದಿದ್ದು ಸಲ್ಮಾನ್ ಅವರಿಗೆ ಭಾರೀ ಆಘಾತ ನೀಡಿತ್ತು. ಅಂದ ಹಾಗೆ, ಸಲ್ಮಾನ್ ಅವರ ಕಳೆದ ಏಳೆಂದು ವರ್ಷಗಳಿಂದ ನರಕ್ಕೆ ಸಂಬಂಧಿಸಿದ ರೋಗದಿಂದ ಬಳಲುತ್ತಿದ್ದಾರೆ.

  ಸಂಗೀತಾ ಬಿಜಲಾನಿ ಜೊತೆಗಿನ ತಾಳಮೇಳ

  ಮಾಜಿ ಕ್ರಿಕೆಟಿಗ ಅಜರುದ್ದಿನ್ ಅವರ ಮಾಜಿ ಪತ್ನಿ ಸಂಗೀತಾ ಬಿಜಲಾನಿ ಅವರ ಜೊತೆಯೂ ಸಲ್ಮಾನ್ ಅವರ ಹೆಸರು ತಳಕುಹಾಕಿಕೊಂಡಿತ್ತು. ಆದರೆ, ಅದು ಹೆಚ್ಚುಕಾಲ ಬಾಳಲಿಲ್ಲ.

  ಸೋಮಿ ಅಲಿ ಜೊತೆಗಿನ ಸಂಬಂಧ

  ಪಾಕಿಸ್ತಾನ ಮೂಲದ ಬಾಲಿವುಡ್ ನಟಿ ಸೋಮಿ ಅಲಿ 90ರ ದಶಕದಲ್ಲಿ ಸಲ್ಮಾನ್ ಜೊತೆ ಡೇಟಿಂಗ್ ಮಾಡುತ್ತಿದ್ದುದು ಸುಳ್ಳಲ್ಲ. ಆದರೆ, ಅದು ಕೂಡ 1999ರಲ್ಲಿ ಮುರಿದುಬಿತ್ತು.

  ಐಶ್ವರ್ಯ ಜೊತೆಗಿನ ಪ್ರಣಯ ಪ್ರಸಂಗ

  ಈ ಪ್ರಣಯ ಪ್ರಸಂಗ ಹೆಚ್ಚು ಸುದ್ದಿಗೆ ಗ್ರಾಸವಾಗಿತ್ತು. 1999ರಲ್ಲಿ ಆರಂಭವಾಗಿದ್ದ ಗೆಳೆತನ 2002ರಲ್ಲಿ ಕುಸಿದುಬಿದ್ದಿತ್ತು. ಬಂಧ ಮುರಿದುಬಿದ್ದ ಮೇಲೂ ಸಲ್ಮಾನ್ ತಮ್ಮನ್ನು ಹಿಂಸಿಸುತ್ತಿದ್ದಾರೆ ಎಂದು ಐಶ್ವರ್ಯ ದೂರಿದ್ದರು. ಕೊನೆಗೆ ಐಶ್ವರ್ಯ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿದ್ದರೆ, ಸಲ್ಮಾನ್ ಇನ್ನೂ ಏಕಾಂಗಿಯಾಗಿಯೇ ಉಳಿದಿದ್ದಾರೆ.

  English summary
  More than his films superstar Salman Khan remains in news for his affairs. Recently, the star was making headlines because of his alleged love affair with Romanian girlfriend Lulia Vantur. But now, it has been reported that Salman has ended his relation with Lulia.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more