»   » ಸೀಕ್ರೇಟ್ ಆಗಿ ಉಳಿದ ಹರ್ಷಾಲಿ ಮಲ್ಹೊತ್ರಾ

ಸೀಕ್ರೇಟ್ ಆಗಿ ಉಳಿದ ಹರ್ಷಾಲಿ ಮಲ್ಹೊತ್ರಾ

Posted By:
Subscribe to Filmibeat Kannada

ಇತ್ತೀಚಿಗಷ್ಟೆ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ 'ಬಜರಂಗಿ ಭಾಯಿಜಾನ್' ಚಿತ್ರದ ಅಧಿಕೃತ ಟ್ರೈಲರ್ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈಗ ವಿಷ್ಯಾ ಏನಪ್ಪಾ ಅಂದ್ರೆ ರಿಲೀಸ್ ಆಗಿರೋ ಟ್ರೈಲರ್‌ನಲ್ಲಿ ರೈಲ್ವೆ ಸ್ಟೇಷನ್‌ನಲ್ಲಿ ಒಂದು ಚಿಕ್ಕ ಹುಡುಗಿನ ನೋಡಿದಿರಲ್ಲಾ. ಆದ್ರೆ ಟ್ರೈಲರ್‌ನಲ್ಲಿ ಕಂಡ ಹುಡುಗಿ, ಚಿತ್ರದ ಯಾವುದೇ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.

ಸಲ್ಮಾನ್ ಖಾನ್ ಮತ್ತು ನಿರ್ದೇಶಕ ಕಬೀರ್ ಖಾನ್ ಹರ್ಷಾಲಿ ಮಲ್ಹೋತ್ರಾಳನ್ನು ಚಿತ್ರದ ಪ್ರಚಾರ ಕಾರ್ಯಕ್ರಮದಿಂದ ದೂರವಿಟ್ಟಿದ್ದಾರೆ. ಭಾಗ್ಯಶ್ರೀ ಅವರ ಪುತ್ರಿಯಾಗಿರುವ ಹರ್ಷಾಲಿ ಮಲ್ಹೋತ್ರಾ ಈ ಮೊದಲು "ಲೌಟ್ ಆವೋ ತ್ರಿಷಾ" ಎಂಬ ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದರು.

salman khan

'ಭಜರಂಗಿ ಬಾಯಿಜಾನ್' ಚಿತ್ರದಲ್ಲಿ ಹರ್ಷಾಲಿ ಮಲ್ಲೋತ್ರಾ ಚಿತ್ರದ ಫಸ್ಟ್ ಹಾಫ್ ನಲ್ಲಿ ಮಾತ್ರ ಕಾಣಿಸಿಕೊಳ್ಳುವುದರಿಂದ ಆಕೆಯನ್ನು ಚಿತ್ರದ ಪ್ರಚಾರ ಕಾರ್ಯಗಳಿಂದ ದೂರ ಇರಿಸಲಾಗಿದೆ ಅಂತಾ ಸಲ್ಮಾನ್ ಮತ್ತು ನಿರ್ದೇಶಕ ಕಬೀರ್ ಇಬ್ಬರು ಸಮಜಾಯಿಷಿ ಕೊಟ್ಟಿದ್ದಾರೆ. [ಇದು ಬಾಲಿವುಡ್ ಖಾನ್ ಗಳಿಂದ ನಮ್ಮವರು ಕಲಿಬೇಕಾಗಿರೋ ಪಾಠ]

ಇಲ್ಲಿಯವರೆಗೂ ಅವಳು ಯಾವುದೇ ಮಾಧ್ಯಮದ ಎದುರು ಕಾಣಿಸಿಕೊಂಡಿಲ್ಲ. ಇನ್ನೇನು ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಮಾಧ್ಯಮಕ್ಕೆ ಉತ್ತರಿಸಲಿದ್ದಾಳೆ ಎಂದು ನಿರ್ದೇಶಕರು ಹೇಳಿದ್ದಾರೆ. ಹರ್ಷಾಲಿ ಹೆತ್ತವರು ಕೂಡಾ ಚಿತ್ರದಲ್ಲಿ ಆಕೆಯ ಕ್ಯಾರೆಕ್ಟರ್ ಬಗ್ಗೆ ಯಾವುದೇ ಮಾಹಿತಿ ಕೊಡಬಾರದೆಂದು ನಿರ್ಮಾಣ ಸಂಸ್ಥೆಯ ಜೊತೆ ಒಪ್ಪಂದ ಕೂಡಾ ಮಾಡಿಕೊಂಡಿದ್ದರು.

English summary
Bollywood Star Salman Khan hiding Hindi movie Bajrangi Bhaijaan's child actor Harshaali Malhotra. The movie is directed by Kabir Khan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada