Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಾರೀ ಹೇಳಿದ್ದು ಸಲ್ಮಾನ್ ಖಾನ್ ಕೋಪಿಸಿಕೊಂಡಿದ್ದಾರೆ ಅಂತ.?!
ಕಳೆದ ಶುಕ್ರವಾರ ಒಂದು ಶಾಕಿಂಗ್ ಹಾಗೂ ಸರ್ ಪ್ರೈಸಿಂಗ್ ನ್ಯೂಸ್ ಹೊರಬಿತ್ತು. ಸಲ್ಮಾನ್ ಖಾನ್ ಅಭಿನಯದ 'ಭಾರತ್' ಸಿನಿಮಾದಿಂದ ಪ್ರಿಯಾಂಕಾ ಛೋಪ್ರಾ ಹೊರಬಂದಿದ್ದು ಶಾಕಿಂಗ್ ನ್ಯೂಸ್ ಆದರೆ, ಪ್ರಿಯಾಂಕಾ ಮದುವೆ ನಿಶ್ಚಯವಾಗಿರುವ ಕಾರಣಕ್ಕೆ 'ಭಾರತ್' ಚಿತ್ರಕ್ಕೆ ಅವರು ಗುಡ್ ಬೈ ಹೇಳಿದ್ದಾರೆ ಎಂಬ ಗಾಸಿಪ್ ಎಲ್ಲರಿಗೂ ಸರ್ ಪ್ರೈಸ್ ನೀಡಿದೆ.
ಈ ನಡುವೆ ಪ್ರಿಯಾಂಕಾ ಛೋಪ್ರಾ ಮೇಲೆ ಸಲ್ಮಾನ್ ಖಾನ್ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಬಾಲಿವುಡ್ ಗಲ್ಲಿ ಗಲ್ಲಿಗಳಲ್ಲಿ ಕೇಳಿಬರುತ್ತಿದ್ದವು.
''ಇನ್ನೇನು ಶೂಟಿಂಗ್ ಶುರು ಆಗಬೇಕು ಎನ್ನುವಷ್ಟರಲ್ಲಿ ಪ್ರಿಯಾಂಕಾ ಹೊರಬಂದರು. ಅದಕ್ಕೆ ನಿಜವಾದ ಕಾರಣ ಮದುವೆ ಅಲ್ಲ. ಬೇರೇನೋ ಇದೆ. 'ಭಾರತ್' ನಿರ್ದೇಶಕರು ಪ್ರಿಯಾಂಕಾ ಛೋಪ್ರಾಗೆ ಅತ್ಯಾಪ್ತರು. ಹೀಗಾಗಿ, ವಿವಾದವನ್ನ ಮೈಮೇಲೆ ಎಳೆದುಕೊಳ್ಳುವುದು ಬೇಡ ಅಂತ ಒಳ್ಳೆಯ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ. 'ಭಾರತ್' ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆದ್ಮೇಲೆ ಮದುವೆಗೆ ಪ್ಲಾನ್ ಮಾಡಬಹುದಿತ್ತು.? ಆದ್ರೆ ಯಾಕೆ ಹಾಗೆ ಮಾಡಲಿಲ್ಲ.? ಇದು ಸಣ್ಣ ಸಿನಿಮಾ ಅಲ್ಲ. ಇದರಿಂದ ಅವರ ಬಾಲಿವುಡ್ ಕಮ್ ಬ್ಯಾಕ್ ಕನಸು ನುಚ್ಚುನೂರಾಗಬಹುದು. ಸಲ್ಮಾನ್ ನಿಜಕ್ಕೂ ಬೇಸರಗೊಂಡಿದ್ದಾರೆ'' ಎಂದು ಸಲ್ಮಾನ್ ಖಾನ್ ಕ್ಯಾಂಪಿನವರು ಬಿಟ್ಟುಕೊಟ್ಟ ಮಾಹಿತಿಯನ್ನ 'ಬಾಲಿವುಡ್ ಹಂಗಾಮ' ವರದಿ ಮಾಡಿತ್ತು.
ಹಾಗಾದ್ರೆ, ಸಲ್ಮಾನ್ ನಿಜಕ್ಕೂ ಬೇಸರಗೊಂಡಿದ್ದಾರಾ.? ಪ್ರಿಯಾಂಕಾ ಮೇಲೆ ಮುನಿಸಿಕೊಂಡಿದ್ದಾರಾ.? ಈ ಪ್ರಶ್ನೆಗಳಿಗೆ ಉತ್ತರ ಬೇಕು ಅಂದ್ರೆ ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

ಇನ್ಮುಂದೆ ಯಾವತ್ತೂ ಪ್ರಿಯಾಂಕಾ ಜೊತೆಗೆ ಕೆಲಸ ಮಾಡಲ್ಲ.!
''ಭಾರತ್' ಸಿನಿಮಾದಿಂದ ಪ್ರಿಯಾಂಕಾ ಛೋಪ್ರಾ ಹೊರಬಂದ್ಮೇಲೆ, ''ಇನ್ಮೇಲೆ ಯಾವತ್ತೂ ಪ್ರಿಯಾಂಕಾ ಛೋಪ್ರಾ ಜೊತೆಗೆ ಸ್ಕ್ರೀನ್ ಶೇರ್ ಮಾಡಲ್ಲ'' ಅಂತ ಸಲ್ಮಾನ್ ಖಾನ್ ಶಪಥ ಮಾಡಿದ್ದಾರೆ ಎಂಬ ಗುಲ್ಲು ಬಾಲಿವುಡ್ ತುಂಬಾ ಹಬ್ಬಿತ್ತು. ಇದೀಗ ಈ ಬಗ್ಗೆ ಸಲ್ಮಾನ್ ತಂದೆ ಸಲೀಂ ಖಾನ್ ಸ್ಪಷ್ಟನೆ ಕೊಟ್ಟಿದ್ದಾರೆ.
ಪ್ರಿಯಾಂಕಾ-ನಿಕ್
ಜೊನಾಸ್
ನಿಶ್ಚಿತಾರ್ಥ:
ಅಪ್
ಸೆಟ್
ಆದ್ರಾ
ಕಂಗನಾ.?

ಸಲ್ಮಾನ್ ಅಪ್ ಸೆಟ್ ಆಗಿಲ್ಲ
''ಭಾರತ್' ಸಿನಿಮಾದಿಂದ ಪ್ರಿಯಾಂಕಾ ಛೋಪ್ರಾ ಹೊರಬಂದಿದ್ದಕ್ಕೆ ಸಲ್ಮಾನ್ ಖಾನ್ ಖಂಡಿತ ಅಪ್ ಸೆಟ್ ಆಗಿಲ್ಲ. ಇವೆಲ್ಲ ಇಂಡಸ್ಟ್ರಿಯಲ್ಲಿ ಸರ್ವೇಸಾಮಾನ್ಯ'' ಎಂದು ಸಲೀಂ ಖಾನ್ ಪ್ರತಿಕ್ರಿಯೆ ನೀಡಿ ಎಲ್ಲಾ ಗಾಸಿಪ್ ಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
'ಭಾರತ್'
ಸಿನಿಮಾದಲ್ಲಿ
ಪ್ರಿಯಾಂಕಾ
ಬಿಟ್ಟ
ಜಾಗವನ್ನ
ತುಂಬುವವರು
ಯಾರು.?

ಕಾರಣ ಗೊತ್ತಿಲ್ಲ
''ಭಾರತ್' ಸಿನಿಮಾದಿಂದ ಪ್ರಿಯಾಂಕಾ ಯಾಕೆ ಹೊರಬಂದರು ಅನ್ನೋದು ನನಗೆ ಗೊತ್ತಿಲ್ಲ. ಆದ್ರೀಗ ಅದೇ ಜಾಗಕ್ಕೆ ಬೇರೆ ನಟಿಯನ್ನು ಕರೆತರುವ ಕೆಲಸ ನಡೆಯುತ್ತಿದೆ'' ಎಂದಿದ್ದಾರೆ ಸಲೀಂ ಖಾನ್.
'ಭಾರತ್'
ಚಿತ್ರದಿಂದ
ಹೊರಬಂದ
ಪ್ರಿಯಾಂಕಾ:
ಸಲ್ಮಾನ್
ಅದಕ್ಕೆ
ಕಾರಣ.?

ಕತ್ರಿನಾ ಬರಬಹುದು
'ಭಾರತ್' ಚಿತ್ರದಲ್ಲಿ ಪ್ರಿಯಾಂಕಾ ಬಿಟ್ಟು ಹೋದ ಜಾಗಕ್ಕೆ ಕರೀನಾ ಕಪೂರ್ ಖಾನ್ ಅಥವಾ ಕತ್ರಿನಾ ಕೈಫ್ ರನ್ನ ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಸಲ್ಮಾನ್ ಖಾನ್ ಗೆ ಮಗದೊಂದು ಬಾರಿ ಕತ್ರಿನಾ ನಾಯಕಿ ಆಗುವ ಸಾಧ್ಯತೆ ಹೆಚ್ಚಿದೆ.