For Quick Alerts
  ALLOW NOTIFICATIONS  
  For Daily Alerts

  'ಭಾರತ್' ಚಿತ್ರದಿಂದ ಹೊರಬಂದ ಪ್ರಿಯಾಂಕಾ: ಸಲ್ಮಾನ್ ಅದಕ್ಕೆ ಕಾರಣ.?

  By Harshitha
  |

  2016 ರಲ್ಲಿ ಬಿಡುಗಡೆ ಆದ 'ಜೈ ಗಂಗಾಜಲ್' ಸಿನಿಮಾ ಬಳಿಕ ಹಾಲಿವುಡ್ ನಲ್ಲಿಯೇ ನಟಿ ಪ್ರಿಯಾಂಕಾ ಛೋಪ್ರಾ ಬಿಜಿಯಾದರು. ಎರಡು ವರ್ಷಗಳಿಂದ ಬಾಲಿವುಡ್ ಕಡೆಗೆ ತಿರುಗಿಯೂ ನೋಡದ ಪ್ರಿಯಾಂಕಾ ಛೋಪ್ರಾ ರನ್ನ ಬಿಟೌನ್ ಗೆ ವಾಪಸ್ ಕರೆದುಕೊಂಡು ಬರುವ ಪ್ರಯತ್ನ ಮಾಡಿದವರು ನಿರ್ದೇಶಕ ಅಲಿ ಅಬ್ಬಾಸ್ ಝಫರ್.

  ಸಲ್ಮಾನ್ ಖಾನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದ 'ಭಾರತ್' ಚಿತ್ರಕ್ಕೆ ನಾಯಕಿ ಆಗುವಂತೆ ಪ್ರಿಯಾಂಕಾ ಛೋಪ್ರಾ ರನ್ನ ಅಲಿ ಅಬ್ಬಾಸ್ ಝಫರ್ ಕೇಳಿಕೊಂಡರು. ಹತ್ತು ವರ್ಷಗಳ ಲಾಂಗ್ ಗ್ಯಾಪ್ ಬಳಿಕ 'ಬಾಕ್ಸ್ ಆಫೀಸ್ ಟೈಗರ್' ಸಲ್ಮಾನ್ ಖಾನ್ ಜೊತೆಗೆ ನಟಿಸುವ ಅವಕಾಶ ಸಿಕ್ಕ ಕಾರಣ ಪ್ರಿಯಾಂಕಾ ಛೋಪ್ರಾ ಕೂಡ ಒಪ್ಪಿಕೊಂಡರು.

  'ಮುಜ್ಸೇ ಶಾದಿ ಕರೋಗಿ', 'ಸಲಾಂ ಎ ಇಶ್ಕ್', 'ಗಾಡ್ ತುಸಿ ಗ್ರೇಟ್ ಹೋ' ಬಳಿಕ ಸಲ್ಮಾನ್ ಖಾನ್ ಹಾಗೂ ಪ್ರಿಯಾಂಕಾ ಛೋಪ್ರಾ ಒಂದಾಗುತ್ತಿರುವುದು 'ಭಾರತ್' ಸಿನಿಮಾದಲ್ಲಿ ಅಂತ ಕೇಳಿದ ಕೂಡಲೆ ಅಭಿಮಾನಿಗಳ ಹಾರ್ಟ್ ಬೀಟ್ ಕೂಡ ಜಾಸ್ತಿ ಆಯ್ತು.

  ಆದ್ರೀಗ, ಅಭಿಮಾನಿಗಳ ಆಸೆಗೆ ಬಕೆಟ್ ಗಟ್ಟಲೆ ತಣ್ಣೀರು ಎರಚಿದಂತಾಗಿದೆ. ಯಾಕಂದ್ರೆ, 'ಭಾರತ್' ಸಿನಿಮಾದಲ್ಲಿ ಪ್ರಿಯಾಂಕಾ ಛೋಪ್ರಾ ನಟಿಸುತ್ತಿಲ್ಲ. 'ಭಾರತ್' ಚಿತ್ರದಿಂದ ಪ್ರಿಯಾಂಕಾ ಹೊರ ಬಂದಿದ್ದಾರೆ. ಹಾಗಂತ ಸ್ವತಃ ಅಲಿ ಅಬ್ಬಾಸ್ ಝಫರ್ ಸ್ಪಷ್ಟ ಪಡಿಸಿದ್ದಾರೆ. ಮುಂದೆ ಓದಿರಿ...

  ಅಲಿ ಅಬ್ಬಾಸ್ ಝಫರ್ ಮಾಡಿರುವ ಟ್ವೀಟ್ ನೋಡಿ...

  ಅಲಿ ಅಬ್ಬಾಸ್ ಝಫರ್ ಮಾಡಿರುವ ಟ್ವೀಟ್ ನೋಡಿ...

  ''ಭಾರತ್' ಸಿನಿಮಾದಲ್ಲಿ ಪ್ರಿಯಾಂಕಾ ಛೋಪ್ರಾ ನಟಿಸುತ್ತಿಲ್ಲ. ಅದಕ್ಕಿರುವ ಕಾರಣ ತುಂಬಾನೇ ಸ್ಪೆಷಲ್. ನಿಕ್ ಜೊತೆಗಿನ ತಮ್ಮ ನಿರ್ಧಾರವನ್ನ ಆಕೆ ನಮಗೆ ತಿಳಿಸಿದ್ದಾರೆ. ಇದು ನಮಗೂ ಖುಷಿ ಕೊಟ್ಟಿದೆ. ಪ್ರಿಯಾಂಕಾ ಛೋಪ್ರಾಗೆ 'ಭಾರತ್' ಚಿತ್ರತಂಡದಿಂದ ಶುಭಾಶಯಗಳು'' ಎಂದು ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಟ್ವೀಟಿಸಿದ್ದಾರೆ.

  10 ವರ್ಷದ ನಂತರ ಮತ್ತೆ ಒಂದಾದ ಸಲ್ಮಾನ್-ಪ್ರಿಯಾಂಕಾ10 ವರ್ಷದ ನಂತರ ಮತ್ತೆ ಒಂದಾದ ಸಲ್ಮಾನ್-ಪ್ರಿಯಾಂಕಾ

  ನಿಜವಾದ ಕಾರಣ ಬೇರೆ ಇದೆ.!

  ನಿಜವಾದ ಕಾರಣ ಬೇರೆ ಇದೆ.!

  ಅಲಿ ಅಬ್ಬಾಸ್ ಝಫರ್ ಮಾಡಿರುವ ಟ್ವೀಟ್ ನೋಡಿ, ಪ್ರಿಯಾಂಕಾ-ನಿಕ್ ಮದುವೆ ಫಿಕ್ಸ್ ಆಗಿದೆ. ಹೀಗಾಗಿ, 'ಭಾರತ್' ಸಿನಿಮಾದಿಂದ ಪ್ರಿಯಾಂಕಾ ಹಿಂದೆ ಸರಿದಿದ್ದಾರೆ ಅಂತಲೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ, 'ಭಾರತ್' ಚಿತ್ರದಿಂದ ಪ್ರಿಯಾಂಕಾ ಛೋಪ್ರಾ ಹೊರಬರಲು ಸಲ್ಮಾನ್ ಖಾನ್ ಕಾರಣ ಅಂತ ಪಿಂಕ್ ವಿಲ್ಲಾ ವರದಿ ಮಾಡಿದೆ.

  ಅಂತೂ ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ ಹತ್ತಿರ ಬಂತು.!ಅಂತೂ ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ ಹತ್ತಿರ ಬಂತು.!

  ಎರಡು ದಿನಗಳ ಶೂಟಿಂಗ್ ಮಾಡಿದ್ರಂತೆ.!

  ಎರಡು ದಿನಗಳ ಶೂಟಿಂಗ್ ಮಾಡಿದ್ರಂತೆ.!

  ಈಗಾಗಲೇ 'ಭಾರತ್' ಚಿತ್ರಕ್ಕಾಗಿ ನಟಿ ಪ್ರಿಯಾಂಕಾ ಛೋಪ್ರಾ ಎರಡು ದಿನಗಳ ಕಾಲ ಶೂಟಿಂಗ್ ಮಾಡಿದ್ರಂತೆ. ಮೊದಮೊದಲು ಸಿನಿಮಾದಲ್ಲಿರುವ ತಮ್ಮ ಪಾತ್ರದ ಬಗ್ಗೆ ಪ್ರಿಯಾಂಕಾ ಛೋಪ್ರಾಗೆ ಖುಷಿ ಇತ್ತು. ಆದ್ರೆ, ಬರ್ತಾ ಬರ್ತಾ ಆ ಖುಷಿ ಉಳಿಯಲಿಲ್ಲ ಎಂದು ಪಿಂಕ್ ವಿಲ್ಲಾ ರಿಪೋರ್ಟ್ ಮಾಡಿದೆ.

  ಪ್ರಿಯಾಂಕಾ ಚೋಪ್ರಾ ಕೈಯಲ್ಲಿರೋ 'ಕರಿಮಣಿ' ರಹಸ್ಯ ಬಹಿರಂಗಪ್ರಿಯಾಂಕಾ ಚೋಪ್ರಾ ಕೈಯಲ್ಲಿರೋ 'ಕರಿಮಣಿ' ರಹಸ್ಯ ಬಹಿರಂಗ

  ಕಾರಣ ಏನು.?

  ಕಾರಣ ಏನು.?

  'ಭಾರತ್' ಚಿತ್ರದ ತಾರಾಗಣದಲ್ಲಿ ದಿಶಾ, ತಬು, ನೋರಾ ಫತೇಹಿ ಸೇರಿದಂತೆ ಹಲವರು ಸೇರಿಕೊಂಡರು. ಈ ಎಲ್ಲರ ಪಾತ್ರಗಳನ್ನ ಸಲ್ಮಾನ್ ಖಾನ್ ಆಜ್ಞೆ ಮೇರೆಗೆ ಸೃಷ್ಟಿಸಲಾಯಿತಂತೆ. ಇದರಿಂದ ಬೇಸರಗೊಂಡ ಪ್ರಿಯಾಂಕಾ ಛೋಪ್ರಾ 'ಭಾರತ್' ಚಿತ್ರತಂಡದಿಂದ ಆಚೆ ಬಂದರು ಎನ್ನಲಾಗಿದೆ.

  ಸೈಡ್ ಲೈನ್ ಆಗಬಾರದು ಅಂತ...

  ಸೈಡ್ ಲೈನ್ ಆಗಬಾರದು ಅಂತ...

  'ರೇಸ್-3' ಸಿನಿಮಾದಲ್ಲಿ ಜಾಕ್ಲಿನ್ ಫರ್ನಾಂಡಿಸ್ ಸೈಡ್ ಲೈನ್ ಆದ ಹಾಗೆ ತಾನೂ ಆಗಬಾರದು ಅಂತ 'ಭಾರತ್' ಚಿತ್ರಕ್ಕೆ ಪ್ರಿಯಾಂಕಾ ಛೋಪ್ರಾ ಗುಡ್ ಬೈ ಹೇಳಿದ್ರಂತೆ.

  ಈ ಕಾರಣ ಬಹಿರಂಗ ಪಡಿಸುವ ಹಾಗಿಲ್ಲ.!

  ಈ ಕಾರಣ ಬಹಿರಂಗ ಪಡಿಸುವ ಹಾಗಿಲ್ಲ.!

  ಹೇಳಿ ಕೇಳಿ ಸಲ್ಮಾನ್ ಖಾನ್ ಕುಟುಂಬಕ್ಕೆ ಪ್ರಿಯಾಂಕಾ ಛೋಪ್ರಾ ಅತ್ಯಾಪ್ತರು. 'ಭಾರತ್' ಚಿತ್ರದ ಬೆಳವಣಿಗೆ ಇಷ್ಟ ಆಗದೆ ಹೊರಬಂದರೆ, ಸಲ್ಮಾನ್ ಖಾನ್ ಮುನಿಸಿಕೊಳ್ಳುತ್ತಾರೆ. ಇದಾಗಬಾರದು ಎಂದುಕೊಂಡಿದ್ದ ಪ್ರಿಯಾಂಕಾ ಮದುವೆ ಆಗಲು ಮನಸ್ಸು ಮಾಡಿದರು. ಹೀಗಾಗಿ, ನಿಶ್ಚಿತಾರ್ಥ/ಮದುವೆ ಅಂತ ಕಾರಣ ಹೇಳಿ 'ಭಾರತ್' ಚಿತ್ರದಿಂದ ತಪ್ಪಿಸಿಕೊಂಡಿದ್ದಾರೆ ಅಂತ ಪಿಂಕ್ ವಿಲ್ಲಾ ವರದಿ ಮಾಡಿದೆ. ಇದರಲ್ಲಿ ಸತ್ಯ ಎಷ್ಟು.? ಸುಳ್ಳು ಎಷ್ಟು.? ಅನ್ನೋದು ಪ್ರಿಯಾಂಕಾಗೆ ಮಾತ್ರ ಗೊತ್ತು.!

  ಪ್ರಿಯಾಂಕಾ ಜಾಗಕ್ಕೆ ಕ್ಯಾಟ್.?

  ಪ್ರಿಯಾಂಕಾ ಜಾಗಕ್ಕೆ ಕ್ಯಾಟ್.?

  ಕಾರಣ ಏನೇ ಇರಲಿ 'ಭಾರತ್' ಸಿನಿಮಾದಿಂದ ಪ್ರಿಯಾಂಕಾ ಛೋಪ್ರಾ ಹೊರಬಂದಿರುವುದು ಕನ್ಫರ್ಮ್. ಪ್ರಿಯಾಂಕಾ ಛೋಪ್ರಾ ಜಾಗಕ್ಕೆ ನಟಿ ಕತ್ರಿನಾ ಕೈಫ್ ಬರುವ ಸಾಧ್ಯತೆ ಇದೆ.

  English summary
  According to the latest reports, Salman Khan is the reason why Priyanka Chopra walked out of 'Bharat'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X