»   » ಮೋದಿಗೆ ಮನವಿ ಮಾಡಿಕೊಂಡ ಸಲ್ಲೂ 'ಭಾಯಿ ಜಾನ್'

ಮೋದಿಗೆ ಮನವಿ ಮಾಡಿಕೊಂಡ ಸಲ್ಲೂ 'ಭಾಯಿ ಜಾನ್'

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿ ಜಾನ್ ಸರಿ ಸುಮಾರು 4,500ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರಿಗೆ ಚಿತ್ರ ನೋಡುವಂತೆ ಸಲ್ಮಾನ್ ಖಾನ್ ಅವರು ಬಹಿರಂಗವಾಗಿ ಕೋರಿ ಟ್ವೀಟ್ ಮಾಡಿದ್ದಾರೆ.

ಇಂಡಿಯಾ-ಪಾಕಿಸ್ತಾನ ನಡುವಿನ ವೈಮನಸ್ಯ, ವೈರತ್ವಗಳಿಗೆ ಕನ್ನಡಿ ಹಿಡಿಯುವ ಬಾಂಧವ್ಯ ಬೆಸುಗೆ ಹೆಣೆಯುವ ಸುಂದರ ಸಾಂಸರಿಕ ಚಿತ್ರದಲ್ಲಿ ಸಲ್ಮಾನ್ ಖಾನ್ ಮಿಂಚಿದ್ದಾರೆ. ತಾಯಿ-ಮಗಳ ಅನುಬಂಧ.ಎಲ್ಲರ ಮೆಚ್ಚುಗೆ ಗಳಿಸುವ ಭಾಯ್ ಜಾನ್ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. [ವಿಮರ್ಶೆ: ಹಿಂದೆಂದೂ ಕಂಡಿರದ 'ಸಲ್ಮಾನ್' ಚಿತ್ರ]

ಭಜರಂಗಿ ಭಾಯಿ ಚಿತ್ರಕ್ಕೆ ಸಿಕ್ಕಿರುವ ಓಪನಿಂಗ್ ನೋಡಿದ ಮಾರುಕಟ್ಟೆ ತಜ್ಞರು ಚಿತ್ರದ ಗಳಿಕೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಹಿಂದಿ ಚಿತ್ರರಂಗದಲ್ಲಿ ಸಾಲು ಸಾಲು ಕಡಿಮೆ ಬಜೆಟ್ ನ ಚಿತ್ರಗಳು ಹಿಟ್ ಆಗಿವೆ.

ಎಲ್ಲಾ ಚಿತ್ರಗಳು ಉತ್ತಮ ಕಥಾ ಹಂದರ ಹೊಂದಿದ್ದು ಇದಕ್ಕೆ ಕಾರಣವಾಗಿತ್ತು. ಈಗ ಭಜರಂಗಿ ಭಾಯಿಜಾನ್ ಚಿತ್ರ ಕೂಡಾ ಕೆಲ ಗಿಮಿಕ್ ಗಳನ್ನು ಹೊರತುಪಡಿಸಿದರೆ ಎಲ್ಲರೂ ನೋಡುವ ಮನ ಮಿಡಿಯುವ ಚಿತ್ರ ಎಂದು ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಘೋಷಿಸಿದ್ದಾರೆ.

ಹಿಂದೂ ಮುಸ್ಲಿಂ, ಭಾರತ ಪಾಕಿಸ್ತಾನ ಸಾಮರಸ್ಯ

ಹಿಂದೂ ಮುಸ್ಲಿಂ, ಭಾರತ ಪಾಕಿಸ್ತಾನ ಸಾಮರಸ್ಯ ಸಾರುವ ಅನೇಕ ಅಂಶಗಳು ಚಿತ್ರವನ್ನು ಮೆಚ್ಚುವಂತೆ ಮಾಡಿದೆ.

ಮಕ್ಕಳಿಗಾಗಿ, ಅವರ ಬೇಲಿ ಇರದ ಕನಸಿಗಾಗಿ

ಮಕ್ಕಳಿಗಾಗಿ ಅವರ ಬೇಲಿ ಇರದ ಕನಸಿಗಾಗಿ ಹಾಗೂ ಅದನ್ನು ನನಸು ಮಾಡುವ ಇರಾದೆಯಿಂದ ಚಿತ್ರವನ್ನು ನೋಡಿ ಎಂದು ಸಲ್ಮಾನ್ ಖಾನ್ ಟ್ವೀಟ್.

ಪ್ರಧಾನಿ ಸಚಿವಾಲಯಕ್ಕೂ ಟ್ವೀಟ್ ಮನವಿ

ಸಲ್ಮಾನ್ ಅವರ ಟ್ವೀಟ್ 7.8K ಸಲ ಮೆಚ್ಚುಗೆ ಪಡೆದು 4.8K ಸಲ ರೀಟ್ವೀಟ್ ಆಗಿದೆ. ಪ್ರಧಾನಿ ಸಚಿವಾಲಯಕ್ಕೂ ಟ್ವೀಟ್ ಮನವಿ ತಲುಪಿಸಲಾಗಿದೆ.

ಪಾಕಿಸ್ತಾನದ ಸೆನ್ಸಾರ್ ಮಂಡಳಿಗೆ ಥ್ಯಾಂಕ್ಸ್

ಪಾಕಿಸ್ತಾನದ ಸೆನ್ಸಾರ್ ಮಂಡಳಿಗೆ ಥ್ಯಾಂಕ್ಸ್ ಎಂದು ಹೇಳಿದ ನಟ ಸಲ್ಮಾನ್ ಖಾನ್.

ವಾಹ್ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ

ವಾಹ್! ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಲ್ಲರಿಂದಲೂ ಉತ್ತಮ ಚಿತ್ರ ಎಂಬ ವಿಮರ್ಶೆ ಸಿಗುತ್ತಿದೆ.

ಸಲ್ಮಾನ್ ಖಾನ್ ಅವರ ಉತ್ತಮ ಚಿತ್ರ

ಸಲ್ಮಾನ್ ಖಾನ್ ಅವರ ಉತ್ತಮ ಚಿತ್ರ ಇದಾಗಿದ್ದು, ಉತ್ತಮ ಸ್ಕ್ರಿಪ್ಟ್, ಲೋಕೆಶನ್, ಮುನ್ನಿಯಂತೂ ಸೂಪರ್.

ನವಾಜುದ್ದೀನ್ ಸಿದ್ದಿಕಿ ಸಕತ್ ನಟನೆ

ನವಾಜುದ್ದೀನ್ ಸಿದ್ದಿಕಿ ಸಕತ್ ನಟನೆ, ಅವರ ಜೊತೆಗೆ ಹರ್ಷಾಲಿ ಮಲ್ಹೋತ್ರ ಚಿತ್ರದ ಓಟಕ್ಕೆ ಕಾರಣ.

ಮೊದಲದಿನದ ದಾಖಲೆ ಧೂಳಿಪಟ

ಮೊದಲದಿನದ ದಾಖಲೆ ಧೂಳಿಪಟ, ಪಿಕೆ, ಧೂಮ್, ಚೆನ್ನೈ ಎಕ್ಸ್ ಪ್ರೆಸ್ ಮೀರಿಸಿದೆ. ಮೊದಲ ದಿನವೇ 8 ಕೋಟಿ ರು ಗಳಿಸಿದೆ ಎಂದು ಟ್ವೀಟ್.

English summary
Salman Khan's Bajrangi Bhaijaan has hit the theaters today and viewers who have watched the movie can't stop raving about it. Meanwhile Salman Khan tweeted and requested PM Modi and Nawaz to watch the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada