For Quick Alerts
  ALLOW NOTIFICATIONS  
  For Daily Alerts

  ಬೋನಿ ಕಪೂರ್ ಗಿಲ್ಲ ಸಲ್ಮಾನ್ ಕಾಲ್ ಶೀಟ್: ಇದೆಲ್ಲ ಅರ್ಜುನ್ ಕೃಪಾಪೋಷಿತ.!

  By Harshitha
  |

  ನಿರ್ಮಾಪಕ ಬೋನಿ ಕಪೂರ್ ಮೊದಲ ಪತ್ನಿಯ ಪುತ್ರ ಅರ್ಜುನ್ ಕಪೂರ್ ಗೂ ಸಲ್ಮಾನ್ ಖಾನ್ ಗೂ ಆಗ್ಬರಲ್ಲ ಎಂಬ ಸಂಗತಿ ಎಲ್ಲರಿಗೂ ಗೊತ್ತಿರೋದೇ.!

  ಸಲ್ಮಾನ್ ಖಾನ್ ಸಹೋದರ ಅರ್ಬಾಝ್ ಖಾನ್ ಸಂಸಾರ ಮುರಿದು ಬೀಳುವುದಕ್ಕೆ ಅರ್ಜುನ್ ಕಪೂರ್ ಕಾರಣ ಅಂತ ಕೆಲವರು ಬೆಟ್ಟು ಮಾಡಿ ತೋರಿಸಿದ್ದರು. ಮಲೈಕಾ ಅರೋರ ಹಾಗೂ ಅರ್ಜುನ್ ಕಪೂರ್ ಅಫೇರ್ ಗುಸುಗುಸು ಸಲ್ಮಾನ್ ಖಾನ್ ಕಿವಿಗೂ ಬಿದ್ದಿದೆ. ಹೀಗಾಗಿ ಅರ್ಜುನ್ ಕಪೂರ್ ಕಂಡ್ರೆ ಸಲ್ಲುಗೆ ಕೋಪ.

  ''ನಮ್ಮಿಬ್ಬರ ನಡುವೆ ಏನಿಲ್ಲ'' ಅಂತ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರ ಸಾರಿ ಸಾರಿ ಹೇಳಿದರೂ, ಅದನ್ನ ನಂಬಲು ಸಲ್ಮಾನ್ ಖಾನ್ ತಯಾರಿಲ್ಲ. ಸೋನಂ ಕಪೂರ್ ಆರತಕ್ಷತೆ ಸಮಯದಲ್ಲೂ ಅರ್ಜುನ್ ಕಪೂರ್ ರನ್ನ ಸಲ್ಮಾನ್ ಖಾನ್ ಅವಾಯ್ಡ್ ಮಾಡಿದ್ದರು.

  ಸೋನಂ ಆರತಕ್ಷತೆಯಲ್ಲಿ ಅರ್ಜುನ್ ಕಂಡು ಮೂತಿ ತಿರುಗಿಸಿದ ಸಲ್ಮಾನ್.! ಯಾಕೆ.?ಸೋನಂ ಆರತಕ್ಷತೆಯಲ್ಲಿ ಅರ್ಜುನ್ ಕಂಡು ಮೂತಿ ತಿರುಗಿಸಿದ ಸಲ್ಮಾನ್.! ಯಾಕೆ.?

  ಅರ್ಜುನ್ ಕಪೂರ್ ಮೇಲೆ ಸಲ್ಮಾನ್ ಖಾನ್ ಮುನಿಸಿಕೊಂಡಿರುವುದರಿಂದ, ಸಲ್ಮಾನ್ ಖಾನ್ ಗೆ ಆಪ್ತವಾಗಿರುವ ಹಲವು ಫಿಲ್ಮ್ ಮೇಕರ್ ಗಳು ಅರ್ಜುನ್ ಕಪೂರ್ ಗೆ ತಮ್ಮ ಚಿತ್ರಗಳಲ್ಲಿ ಅವಕಾಶ ಕೊಡುತ್ತಿಲ್ಲ.

  ಹಾಗ್ನೋಡಿದ್ರೆ, ನಿರ್ಮಾಪಕ ಬೋನಿ ಕಪೂರ್ ಆರ್ಥಿಕ ಸಂಕಷ್ಟದಲ್ಲಿದ್ದಾಗ, 'ನೋ ಎಂಟ್ರಿ' ಚಿತ್ರದಲ್ಲಿ ಫ್ರೀಯಾಗಿ ಸಲ್ಮಾನ್ ಖಾನ್ ಅಭಿನಯಿಸಿದ್ದರು. ಸಲ್ಮಾನ್ ಮಾಡಿದ ಈ ಉಪಕಾರದಿಂದಾಗಿ, ಮಲೈಕಾ ರಿಂದ ದೂರ ಉಳಿಯಲು ತಮ್ಮ ಪುತ್ರ ಅರ್ಜುನ್ ಗೆ ಬೋನಿ ಕಪೂರ್ ಸಲಹೆ ಕೊಟ್ಟಿದ್ದರು. ಆದ್ರೆ, ಅದನ್ನ ಅರ್ಜುನ್ ಸೀರಿಯಸ್ ಆಗಿ ಪರಿಗಣಿಸಿರಲಿಲ್ಲ.

  ಇತ್ತ ಬೋನಿ ಕಪೂರ್ 'ನೋ ಎಂಟ್ರಿ-2' ಹಾಗೂ 'ವಾಂಟೆಡ್-2' ಮಾಡಲು ತಯಾರಿ ನಡೆಸಿದ್ದರು. ಆದ್ರೆ, ಆ ಎರಡೂ ಚಿತ್ರಗಳಿಗೆ ಕಾಲ್ ಶೀಟ್ ನೀಡಲು ಸಲ್ಮಾನ್ ಖಾನ್ ನಿರಾಕರಿಸಿದ್ದಾರೆ. ಅರ್ಜುನ್ ಕಪೂರ್ ಮೇಲಿನ ಸಿಟ್ಟಿನಿಂದ ಸಲ್ಮಾನ್ ಖಾನ್ ಹೀಗೆ ಮಾಡಿದ್ದಾರೆ. ಮಗ ಮಾಡಿದ ತಪ್ಪಿನಿಂದ ತಂದೆ ಬೋನಿ ಕಪೂರ್ ಗೆ ಲುಕ್ಸಾನು ಆಗಿದೆ ಅಂತ ಸದ್ಯ ಗಾಸಿಪ್ ಪಂಡಿತರು ಮಾತನಾಡಿಕೊಳ್ತಿದ್ದಾರೆ.

  English summary
  Bollywood Actor Salman Khan rejects Boney Kapoor's film because of Arjun Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X