For Quick Alerts
  ALLOW NOTIFICATIONS  
  For Daily Alerts

  ವಯಸ್ಸಾದ ಸಲ್ಮಾನ್ ಖಾನ್ ನೋಡಿ ಅಭಿಮಾನಿಗಳು ಶಾಕ್!

  |

  ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅಭಿನಯದ 'ಭಾರತ್' ಚಿತ್ರದ ಸಲ್ಮಾನ್ ಖಾನ್ ಲುಕ್ ರಿಲೀಸ್ ಆಗಿದೆ. ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ಸಲ್ಮಾನ್ ಖಾನ್ ವಯಸ್ಸಾದ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಉದ್ದನೆಯ ಬಿಳಿ ಕೂದಲು ಮತ್ತು ಬಿಳಿ ದಾಡಿ ಬಿಟ್ಟಿರುವ ಸಲ್ಲುಗೆ ಸಿನಿರಸಿಕರು ಫಿದಾ ಆಗಿದ್ದಾರೆ.

  ಈ ಪೋಸ್ಟರ್ ನಲ್ಲಿ ಬ್ಯಾಡ್ ಬಾಯ್ ಗೆ ವಯಸ್ಸಾದರೂ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದಾರೆ. ಬಿಳಿ ಕೂದಲನ್ನು ಸ್ಪೈಕ್ ಮಾಡಿ, ಉದ್ದ ಮೀಸೆ ಬಿಟ್ಟು, ಕನ್ನಡಕ ಧರಿಸಿರುವ ಸಲ್ಲುಮೀಯಾ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 'ಭಾರತ್' ಚಿತ್ರದಿಂದ ಸಲ್ಮಾನ್ ಪೋಸ್ಟರ್ ರಿಲೀಸ್ ಆಗುತ್ತಿದಂತೆ ಸಿಕ್ಕಾಪಟ್ಟೆ ಲೈಕ್ಸ್ ಗಿಟ್ಟಿಸಿಕೊಂಡಿದೆ.

  ದಬಾಂಗ್-3 ಐಟಂ ಸಾಂಗ್ ಗೆ ಪೈಪೋಟಿ, ಸನ್ನಿ-ಮೌನಿ ಯಾರಿಗೆ ಅವಕಾಶ

  ಚಿತ್ರದ ಹೊಸ ಪೋಸ್ಟರ್ ಅನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಸಲ್ಮಾನ್ ಖಾನ್ ಚಿತ್ರದ ಒಂದು ಡೈಲಾಗ್ ಅನ್ನು ಬಹಿರಂಗ ಪಡಿಸಿದ್ದಾರೆ. "ನನ್ನ ತಲೆ ಮತ್ತು ದಾಡಿಯಲ್ಲಿ ಎಷ್ಟು ಬಳಿ ಕೂದಲು ಇದಿಯೋ ಅದಕ್ಕಿಂತಲು ಎಷ್ಟೋ ಹೆಚ್ಚು ಪಟ್ಟು ಕಲರ್ ಫುಲ್ ಆಗಿದೆ ನನ್ನ ಜೀವನ". ಎಂದು ಬರೆದುಕೊಂಡಿದ್ದಾರೆ.

  ಪೋಸ್ಟರ್ ನಲ್ಲಿ ನಟ ಜಾಕಿ ಶ್ರಾಫ್ ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಜಾಕಿ ಶ್ರಾಫ್ ಸಲ್ಮಾನ್ ಖಾನ್ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ವಿಶೇಷ ಅಂದ್ರೆ ವಯಸ್ಸಾದ ಸಲ್ಮಾನ್ ಗೆಟಪ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಟ್ಟಿಟ್ಟರ್ ನಲ್ಲಿ ಮೂರನೇ ಟ್ರೆಂಡಿಂಗ್ ನಲ್ಲಿದೆ. ಈ ಹಿಂದೆ 'ಭಾರತ್' ಚಿತ್ರದಿಂದ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಅವರ ರೋಮ್ಯಾಂಟಿಕ್ ಲುಕ್ ರಿಲೀಸ್ ಆಗಿತ್ತು. ಅಂದ್ರೆ, ಭಾರತ್ ನಲ್ಲಿ ಸಲ್ಮಾನ್ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  ರಾಜಕೀಯ ತಿರುವು ಪಡೆದ ಸಲ್ಮಾನ್ ಖಾನ್ ದಬಾಂಗ್ 3 ವಿವಾದ

  ವಿಶೇಷ ಅಂದ್ರೆ, 'ಭಾರತ್' ನೈಜ ಘಟನೆ ಆಧಾರಿತ ಸಿನಿಮಾ. ಇತಿಹಾಸದ ಕತೆಯೊಂದನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಸಿನಿಮಾ ಪೂರ್ತಿ ರೆಟ್ರೋ ಸ್ಟೈಲ್ ನಲ್ಲಿ ಮೂಡಿ ಬಂದಿದೆ. ದೇಶ ಭಕ್ತಿ ಸಾರುವ ಸಿನಿಮಾ ಇದಾಗಿದೆ. ಅಂದ್ಹಾಗೆ 'ಭಾರತ್' ದಕ್ಷಿಣ ಕೊರಿಯದ 'ಓಡೆ ಟು ಮೈ ಫಾದರ್' ಚಿತ್ರದ ರಿಮೇಕ್.

  'ಭಾರತ್' ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ. ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ನಟಿ ತಬು, ದಿಶಾ ಪಟಾನಿ, ಜಾಕಿ ಶ್ರಾಫ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಸದ್ಯ ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವ 'ಭಾರತ್' ಈ ವರ್ಷದ ಈದ್ ನಲ್ಲಿ ತೆರೆಗೆ ಬರುತ್ತಿದೆ.

  English summary
  Bollywood actor Salman Khan rocks salt-and-pepper look in Bharath movie. He gave a treat to his fans by sharing his first look from Bharat film. This movie is directed by ali abbas zafar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X