»   » ಸಲ್ಲೂ ಮಿಯಾ 'ಪ್ರೇಮ್ ರತನ್'100 ಕೋಟಿ ಕ್ಲಬ್ಬಿಗೆ

ಸಲ್ಲೂ ಮಿಯಾ 'ಪ್ರೇಮ್ ರತನ್'100 ಕೋಟಿ ಕ್ಲಬ್ಬಿಗೆ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಲ್ಮಾನ್ ಖಾನ್ ಹಾಗೂ ಸೋನಮ್ ಕಪೂರ್ ಅಭಿನಯದ 'ಪ್ರೇಮ್ ರತನ್ ಧನ್ ಪಾಯೋ' ಚಿತ್ರ 2015ನೇ ಸಾಲಿನಲ್ಲಿ 100ನೇ ಕೋಟಿ ರು ಗಳಿಕೆ ಕ್ಲಬ್ಬಿಗೆ ಸೇರಿದ ಐದನೇ ಚಿತ್ರ ಎನಿಸಿದೆ.

ದೀಪಾವಳಿ ಸಂಭ್ರಮದಲ್ಲಿ ತೆರೆ ಕಂಡ ಪ್ರೇಮ್ ರತನ್ ಚಿತ್ರ ಬಿಡುಗಡೆಯಾದ ಮೂರು ದಿನದಲ್ಲೇ 100ಕೋಟಿ ರು ಗಳಿಸಿದೆ. ಸಲ್ಮಾನ್ ಖಾನ್ ಚಿತ್ರ ಎಂದ ಮೇಲೆ 100 ಕೋಟಿ ರು ಗಳಿಕೆ ಮಾಮೂಲಿ ಎನ್ನಬಹುದು.

Salman Khan’s Prem Ratan Dhan Payo earns Rs 100 crore in 3 days

ಅದರೆ, ಇತ್ತೀಚೆಗೆ ಸಲ್ಮಾನ್ ನಟಿಸಿದ ಚಿತ್ರಗಳ ಪೈಕಿ ಈ ಚಿತ್ರ ವಿಭಿನ್ನವಾಗಿದ್ದು, ವಿಶೇಷವಾಗಿದೆ. ಹಮ್ ಆಪ್ಕೆ ಹೇ ಕೌನ್ ಹಾಗೂ ಹಮ್ ಸಾಥ್ ಸಾಥ್ ಹೇ ನಂತರ ನಿರ್ದೇಶಕ ಸೂರಜ್ ಭರ್ಜಾತ್ಯಾ ಹಾಗೂ ಸಲ್ಮಾನ್ ಖಾನ್ ಅವರು ಮತ್ತೆ ಒಂದುಗೂಡಿ ಯಶಸ್ಸು ಗಳಿಸಿದ್ದಾರೆ.

ಬಿಡುಗಡೆಯಾದ ಮೊದಲ ದಿನವೇ ಈ ಸಂಗೀತಮಯ ಚಿತ್ರ 40.35 ಕೋಟಿ ರು ಕೊಳ್ಳೆ ಹೊಡೆದಿತ್ತು. ಶುಕ್ರವಾರ 31.05 ಕೋಟಿ ರು ಗಳಿಸಿದ್ದಲ್ಲದೆ ಶನಿವಾರ 30.07 ಕೋಟಿ ರು ಗಳಿಸಿ ಉತ್ತಮ ಸರಾಸರಿ ಉಳಿಸಿಕೊಂಡಿತ್ತು.

ಸಲ್ಮಾನ್ ಖಾನ್ ಜೊತೆಗೆ ಸೋನಮ್ ಕಪೂರ್, ಸ್ವರಾ ಭಾಸ್ಕರ್, ಅರ್ಮಾನ್ ಕೋಲಿ, ನೀಲ್ ನಿತೀನ್ ಮುಕೇಶ್ ನಟಿಸಿರುವ ಈ ಚಿತ್ರದಲ್ಲಿ ಅರಸು ಮನೆತನ ಕುವರಿ ಜೊತೆ ಹಾಗೂ ಸಾಮಾನ್ಯ ಪ್ರಜೆಯೊಬ್ಬನ ಪ್ರೇಮ ಕಥೆ ಇದೆ. 60 ಕೋಟಿ ರು ಬಜೆಟ್ ನಲ್ಲಿ ನಿರ್ಮಾಣಗೊಂಡ ಈ ಚಿತ್ರದ ತಮಿಳು ಹಾಗೂ ತೆಲುಗು ಭಾಷೆಯಲ್ಲೂ ಡಬ್ ಆಗಿ ರಿಲೀಸ್ ಆಗಿದೆ.

English summary
Salman Khan’s Prem Ratan Dhan Payo has reportedly earned Rs 100 crore in its first three days at the box office. And this is just for the Hindi release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada