For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್‌ಗೆ ಭದ್ರತೆ ಹೆಚ್ಚಳ: ತಿಂಗಳಿಗಾಗುವ ಖರ್ಚೆಷ್ಟು ಗೊತ್ತೆ?

  |

  ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಭೂಗತ ಪಾತಕಿಗಳಿಂದ ಬೆದರಿಕೆ ಇರುವ ಕಾರಣ ಸರ್ಕಾರವು ಅವರಿಗೆ ನೀಡಿದ್ದ ಭದ್ರತೆಯನ್ನು ಹೆಚ್ಚಿಸಿದೆ.

  ಹೊಸ ಎಸ್‌ಪಿಜಿ ಬಿಲ್‌ ಬಂದ ಬಳಿಕ ಸಲ್ಮಾನ್ ಖಾನ್‌ಗೆ ಈ ಮೊದಲ ನೀಡಲಾಗಿದ್ದ ಭದ್ರತೆ ಬದಲಾಗಿತ್ತು. ಆದರೆ ಈಗ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸಲ್ಮಾನ್ ಖಾನ್‌ಗೆ ವೈ ಪ್ಲಸ್ (Y-plus) ಭದ್ರತೆ ನೀಡಲಾಗುತ್ತಿದೆ. ದೇಶದ ಕೆಲವು ವ್ಯಕ್ತಿಗಳಿಗೆ ಮಾತ್ರವೇ ವೈ ಪ್ಲಸ್ ಭದ್ರತೆ ಇದೆ. ಭಾರತದಲ್ಲಿ ಈ ಪ್ರಮಾಣದ ಭದ್ರತೆಯುಳ್ಳ ಏಕೈಕ ನಟ ಸಲ್ಮಾನ್ ಖಾನ್ ಆಗಿದ್ದಾರೆ.

  ಸಲ್ಮಾನ್ ಖಾನ್‌ಗೆ ಭೂಗತ ಪಾತಕಿಗಳಾದ ಲಾರೆನ್ಸ್ ಬಿಷ್ಣೋಯಿ, ಗೋಲ್ಡಿ ಬ್ರದರ್ಸ್‌ ಇನ್ನು ಕೆಲವರಿಂದ ಬೆದರಿಕೆ ಇದೆ. ಕೆಲ ತಿಂಗಳ ಹಿಂದೆ ಸಲ್ಮಾನ್ ಖಾನ್‌ಗೆ ಬೆದರಿಕೆ ಪತ್ರವೂ ಬಂದಿದ್ದು, ಅದರ ತನಿಖೆ ನಡೆಸಿದ ಮುಂಬೈ ಪೊಲೀಸರು ಹಾಗೂ ವಿಶೇಷ ತನಿಖಾ ದಳವು ಸಲ್ಮಾನ್ ಖಾನ್ ಜೀವಕ್ಕೆ ಗಂಭೀರ ಬೆದರಿಕೆ ಇರುವುದಾಗಿ ತಿಳಿಸಿದ್ದರು. ಹಾಗಾಗಿ ಅವರ ಭದ್ರತೆಯನ್ನು ಸರ್ಕಾರ ಹೆಚ್ಚಿಸಿದೆ.

  ಅಕ್ಷಯ್ ಕುಮಾರ್-ಅನುಪಮ್ ಖೇರ್‌ಗೂ ಭದ್ರತೆ

  ಅಕ್ಷಯ್ ಕುಮಾರ್-ಅನುಪಮ್ ಖೇರ್‌ಗೂ ಭದ್ರತೆ

  ಸಲ್ಮಾನ್ ಖಾನ್‌ಗೆ ಮಾತ್ರವಲ್ಲ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಹಾಗೂ ಅನುಪಮ್ ಖೇರ್‌ಗೂ ಭದ್ರತೆ ಹೆಚ್ಚಿಸಲಾಗಿದೆ. ಆದರೆ ಸಲ್ಮಾನ್ ಖಾನ್‌ಗೆ ನೀಡಲಾಗಿರುವ ವೈ ಪ್ಲಸ್ ಬದಲಿಗೆ, ಅಕ್ಷಯ್-ಅನುಪಮ್ ಖೇರ್‌ಗೆ ಎಕ್ಸ್‌ ಮಾದರಿಯ ಭದ್ರತೆಯನ್ನಷ್ಟೆ ನೀಡಲಾಗಿದೆ. ಈ ಮೂವರನ್ನು ಹೊರತುಪಡಿಸಿದರೆ ಬಾಲಿವುಡ್‌ನ ಇನ್ನಾವ ನಟರ ಭದ್ರತೆಯಲ್ಲಿಯೂ ಅಪ್‌ಗ್ರೇಡ್ ಮಾಡಿಲ್ಲ ಮಹಾರಾಷ್ಟ್ರ ಸರ್ಕಾರ ಗೃಹ ಇಲಾಖೆ.

  ವೈ ಪ್ಲಸ್ ಭದ್ರತೆ ಹೇಗಿರುತ್ತದೆ?

  ವೈ ಪ್ಲಸ್ ಭದ್ರತೆ ಹೇಗಿರುತ್ತದೆ?

  ಸಲ್ಮಾನ್ ಖಾನ್‌ಗೆ ನೀಡಲಾಗಿರುವ ವೈ ಪ್ಲಸ್ ಭದ್ರತೆಯಲ್ಲಿ ನಾಲ್ವರು ಅತ್ಯಾಧುನಿಕ ಬಂದೂಕು ಹೊಂದಿರುವ ಕಮಾಂಡೊಗಳಿರಲಿದ್ದು, ಅವರಲ್ಲಿ ಇಬ್ಬರು ಸಲ್ಮಾನ್ ಖಾನ್ ಜೊತೆಗೂ ಇನ್ನಿಬ್ಬರು ಸಲ್ಮಾನ್ ಖಾನ್ ನಿವಾಸದ ಬಳಿಯೂ ಇರಲಿದ್ದಾರೆ. ಜೊತೆಗೆ ಎರಡು ಕಾವಲು ವಾಹನಗಳು ಕೆಲವು ಭದ್ರತಾ ಸಿಬ್ಬಂದಿ, ಕೆಲವು ನವೀನ ತಂತ್ರಜ್ಞಾನ ಹೊಂದಿರುವ ಸಾಧನಗಳು ಇರಲಿವೆ. ಇದರ ಜೊತೆಗೆ ಸಲ್ಮಾನ್ ಖಾನ್‌ರ ಖಾಸಗಿ ಭದ್ರತಾ ಸಿಬ್ಬಂದಿ ಸಹ ಜೊತೆಗಿರಲಿದ್ದಾರೆ.

  ದೊಡ್ಡ ಮೊತ್ತವನ್ನೇ ಖರ್ಚು ಮಾಡಬೇಕಾಗಿದೆ

  ದೊಡ್ಡ ಮೊತ್ತವನ್ನೇ ಖರ್ಚು ಮಾಡಬೇಕಾಗಿದೆ

  ಇನ್ನು ಸಲ್ಮಾನ್ ಖಾನ್‌ಗೆ ನೀಡಲಾಗಿರುವ ವೈ ಪ್ಲಸ್ ಭದ್ರತೆಗೆ ದೊಡ್ಡ ಮೊತ್ತದ ಹಣವನ್ನೇ ಮಾಡಬೇಕಾಗಲಿದೆ. ಸಿಬ್ಬಂದಿ ಸಂಬಳ, ವಾಹನ, ಇಂಧನ ಇನ್ನಿತರೆಗಳನ್ನು ಲೆಕ್ಕ ಹಾಕಿದರೆ ಸುಮಾರು 12 ರಿಂದ 15 ಲಕ್ಷ ಹಣ ಒಂದು ತಿಂಗಳಿಗೆ ಖರ್ಚಾಗುತ್ತದೆ. ಸಲ್ಮಾನ್ ಖಾನ್‌ ಸಹ ತನ್ನ ಖಾಸಗಿ ಭದ್ರತೆಗೆ ದೊಡ್ಡ ಮೊತ್ತದ ಸಂಬಳವನ್ನೇ ನೀಡುತ್ತಾರೆ. ಜೊತೆಗೆ ಇತ್ತೀಚೆಗೆ ಮುಂಬೈ ಪೊಲೀಸರಿಗೆ ಮನವಿ ಮಾಡಿ ಬಂದೂಕು ಲೈಸೆನ್ಸ್ ಅನ್ನು ಸಹ ಸಲ್ಮಾನ್ ಖಾನ್ ಪಡೆದುಕೊಂಡಿದ್ದಾರೆ.

  ಹಲವು ಬಾರಿ ಯತ್ನಿಸಿರುವ ಪಾತಕಿಗಳ ತಂಡ

  ಹಲವು ಬಾರಿ ಯತ್ನಿಸಿರುವ ಪಾತಕಿಗಳ ತಂಡ

  ಸಲ್ಮಾನ್ ಖಾನ್‌ ಅನ್ನು ಕೊಲ್ಲುವುದಾಗಿ ಲಾರೆನ್ಸ್ ಬಿಷ್ಣೋಯಿ ಬಹಿರಂಗವಾಗಿಯೇ ಘೋಷಿಸಿದ್ದಾನೆ. ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯತ್ನಿಸಿ ವಿಫಲವೂ ಆಗಿದ್ದಾನೆ. ಭೂಗತ ಲೋಕದ ಸಿಂಡಿಕೇಟ್‌ಗೆ ಮುಖಂಡನೂ ಆಗಿರುವ ಲಾರೆನ್ಸ್ ಬಿಷ್ಣೋಯಿ, ಸಲ್ಮಾನ್ ಅನ್ನು ಕೊಲ್ಲಲು ಹಲವು ಪಾತಕಿಗಳ ತಂಡಗಳಿಗೆ ಸುಫಾರಿ ನೀಡಿದ್ದಾನೆ ಎನ್ನಲಾಗುತ್ತಿದೆ. 'ರೆಡಿ' ಸಿನಿಮಾದ ಚಿತ್ರೀಕರಣದ ಸಮಯದಲ್ಲಿ, ಸಲ್ಮಾನ್ ಹುಟ್ಟುಹಬ್ಬದ ದಿನ ಅವರ ಮನೆಯ ಬಳಿ ಹಾಗೂ ಅವರ ಪನ್ವೇಲ್ ಫಾರಂ ಹೌಸ್‌ನ ಬಳಿ ಸಲ್ಮಾನ್ ಖಾನ್‌ ಅನ್ನು ಕೊಲ್ಲಲು ಮೂರು ತಂಡಗಳು ಯತ್ನಿಸಿ ವಿಫಲವಾಗಿವೆ. ಸಲ್ಮಾನ್ ಖಾನ್ ಅನ್ನು ಕೊಲ್ಲಲು ಅತ್ಯಾಧುನಿಕ ಬಂದೂಕನ್ನು ಸಹ ಈ ಪಾತಕಿಗಳು ಖರೀದಿಸಿದ್ದರು. ಆದರೆ ಆ ಬಂದೂಕು ಬೇರೊಂದು ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರ ಕೈಗೆ ಸಿಕ್ಕಿಬಿದ್ದಿತ್ತು.s

  English summary
  Salman Khan's security upgraded to Y plus category after he recives death threats by underwold people.
  Tuesday, November 1, 2022, 16:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X