»   » ಸಲ್ಲು ತಂಗಿಯ ಮದುವೆ ವೈಭವಕ್ಕೆ ಅದ್ದೂರಿ ಲಗ್ನಪತ್ರಿಕೆ

ಸಲ್ಲು ತಂಗಿಯ ಮದುವೆ ವೈಭವಕ್ಕೆ ಅದ್ದೂರಿ ಲಗ್ನಪತ್ರಿಕೆ

Posted By:
Subscribe to Filmibeat Kannada

ಬಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಮದುವೆಯಾಗುತ್ತರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ತಂಗಿ ಅರ್ಪಿತಾ ಎಸ್ ಖಾನ್ ಅವರ ಮದುವೆಗೆ ಮಾತ್ರ ಅದ್ದೂರಿ ಸಿದ್ಧತೆಗಳು ನಡೆಯುತ್ತಿವೆ. ಮದುವೆ ಲಗ್ನಪತ್ರಿಕೆಯೇ ಎಲ್ಲರ ಕಣ್ಣು ಕುಕ್ಕುವಂತಿದೆ.

ಇದೇ ನವೆಂಬರ್ 18ರಂದು ಅರ್ಪಿತಾ ಅವರು ನೂತನ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿದ್ದಾರೆ. ಮದುವೆ ಬಗ್ಗೆ ಸಲ್ಲು ಅಭಿಮಾನಿಗಳಿಗೆ ಎಲ್ಲಿಲ್ಲದ ಕಾತುರ ಕುತೂಹಲಗಳಿವೆ. ಅರ್ಪಿತಾ ಅವರ ಮದುವೆ ಹೈದರಾಬಾದಿನ ಫಲಕ್ ನೂಮ ಪ್ಯಾಲೇಸ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಈ ಪ್ಯಾಲೇಸ್ ಬಾಡಿಗೆ ದಿನವೊಂದಕ್ಕೆ ರು.1 ಕೋಟಿಯಂತೆ. ಎರಡು ದಿನಗಳ ಮಟ್ಟಿಗೆ ಸಲ್ಮಾನ್ ಖಾನ್ ಕುಟುಂಬ ಈ ಪ್ಯಾಲೇಸನ್ನು ಬುಕ್ ಮಾಡಿದೆ ಎನ್ನುತ್ತವೆ ಮೂಲಗಳು. ಸಲ್ಮಾನ್ ಖಾನ್ ತಂಗಿ ಮದುವೆ ಎಂದರೆ ಕೇಳಬೇಕೆ.

ಉತ್ತರ ಧ್ರುವದಿಂದ ದಕ್ಷಿಣದ ಧ್ರುವದವೆರೆಗಿನ ತಾರೆಗಳು ಧರೆಗಿಳಿಯುವ ಸಮಯ. ತನ್ನ ತಂಗಿ ಮದುವೆಗಾಗಿ ಸಲ್ಮಾನ್ ಖಾನ್ ಅವರು ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ ಎಂಬ ಮಾತುಗಳು ಬಾಲಿವುಡ್ ನಲ್ಲಿ ಕೇಳಿಬರುತ್ತಿವೆ.

wedding invitation4

ತನ್ನ ತಂಗಿ ಮದುವೆ ಲಗ್ನಪತ್ರಿಕೆ ಗೋಲ್ಡ್ ಪ್ಲೇಟೆಡ್ ನಿಂದ ಮಾಡಿಸಲಾಗಿದೆ. ಇದೇ ರೀತಿ ತನ್ನ ಮದುವೆ ಬಗ್ಗೆ ನಾನಾ ತರಹದ ಗಾಳಿಸುದ್ದಿಗಳು, ಪುಕಾರುಗಳು ಹಬ್ಬುತ್ತಿರುವ ಬಗ್ಗೆ ಅರ್ಪಿತಾಗೆ ಬೇಜಾರಾಗಿದೆಯಂತೆ. ಆ ರೀತಿಯ ವದಂತಿಗಳನ್ನು ಹಬ್ಬಿಸಬೇಡಿ. ಸದ್ಯಕ್ಕೆ ಮದುವೆಯನ್ನು ಎಂಜಾಯ್ ಮಾಡಿ ಎಂದು ಅರ್ಪಿತಾ ಟ್ವಿಟ್ಟರ್ ಮೂಲಕ ವಿನಂತಿಸಿಕೊಂಡಿದ್ದಾರೆ.

wedding invitation5

ಇನ್ನು ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಎಲ್ಲ ಚಿತ್ರರಂಗದ ಪ್ರಮುಖರನ್ನು ಆಹ್ವಾನಿಸಲಾಗಿದೆ. ನವೆಂವರ್ 21ರಂದು ಅದ್ದೂರಿ ಆರತಕ್ಷತೆ ಕಾರ್ಯಕ್ರಮ ಮುಂಬೈನಲ್ಲಿ ನಡೆಯಲಿದೆ.

ಈಗಾಗಲೆ ಮದುವೆ ಲಗ್ನಪತ್ರಿಕೆಯನ್ನು ಎಲ್ಲ ಬಂಧು ಮಿತ್ರರಿಗೂ ಹಂಚಲಾಗಿದೆ. ಈ ವಿಶೇಷ ಲಗ್ನಪತ್ರಿಕೆಯ ಜೊತೆಗೆ ಹಲವು ವಿವಿಧ ಡ್ರೈಫ್ರೂಟ್ಸ್ ಸಹ ಕೊಡಲಾಗಿದೆ. ಲಗ್ನ ಪತ್ರಿಕೆಯ ಚಿತ್ರಗಳನ್ನು ನೋಡಬಹುದು.

English summary
While the Khan 'khandaan' is awaiting their sister Arpita Khan's wedding on November 18, fans of Salman Khan are eager to know every single detail about the wedding. Arpita Khan will marry her beau Ayush Sharma in Hyderabad at the Falaknuma palace.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada