For Quick Alerts
  ALLOW NOTIFICATIONS  
  For Daily Alerts

  'ರೇಪ್ ಆದ ಮಹಿಳೆ ಪರಿಸ್ಥಿತಿ ನನ್ನದಾಗಿತ್ತು': ಸಲ್ಲು ವಿವಾದಾತ್ಮಕ ಹೇಳಿಕೆ

  By ಸೋನು ಗೌಡ
  |

  ಬಾಲಿವುಡ್ ನ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ವಿಭಿನ್ನ ಹೇಳಿಕೆ ನೀಡುವ ಮೂಲಕ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. 'ಸುಲ್ತಾನ್' ಚಿತ್ರದ ಪ್ರೊಮೋಷನ್ ಸಂದರ್ಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಭಾಯ್ ಜಾನ್ ನೀಡಿದ ಉತ್ತರ ಇದೀಗ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

  ನಟಿ ಅನುಷ್ಕಾ ಶರ್ಮಾ ಮತ್ತು ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಒಂದಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ 'ಸುಲ್ತಾನ್' ಸಿನಿಮಾದಲ್ಲಿ ಸಲ್ಲುಮೀಯಾ ಕುಸ್ತಿಪಟುವಾಗಿ ಮಲ್ಲಯುದ್ಧ ಮಾಡುವ ಪಾತ್ರ ವಹಿಸಿದ್ದಾರೆ. ಈ ಬಗ್ಗೆ 'ಸುಲ್ತಾನ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ.[ಸಲ್ಮಾನ್ ಬಗ್ಗೆ ಕೇಳಿದ್ದಕ್ಕೆ ಐಶ್ವರ್ಯ ರೈ ಉರಿದು ಬಿದ್ದಿದ್ಯಾಕೆ?]

  ಅದಕ್ಕೆ ಸಲ್ಮಾನ್ ಖಾನ್ ಅವರು "ಕುಸ್ತಿಪಟುವಾಗಿ ಕುಸ್ತಿಯ ದೃಶ್ಯಗಳನ್ನು ಶೂಟಿಂಗ್ ಮಾಡುವಾಗ ನಾನು ದೈಹಿಕವಾಗಿ ಬಹಳ ಶ್ರಮವಹಿಸಿದ್ದೇನೆ. ಅದು ಎಷ್ಟರಮಟ್ಟಿಗೆ ಕಷ್ಟಪಟ್ಟಿದ್ದೇನೆ ಹಾಗೂ ಶೂಟಿಂಗ್ ಆದ ನಂತರದ ನನ್ನ ಪರಿಸ್ಥಿತಿ ಹೇಗಿತ್ತು ಎಂದರೆ 'ರೇಪ್ ಆದ ಮಹಿಳೆಯ' ಪರಿಸ್ಥಿತಿ ನನಗಾಗುತ್ತಿತ್ತು" ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

  "ಸುಲ್ತಾನ್ ಚಿತ್ರಕ್ಕಾಗಿ ಕುಸ್ತಿ ಪಂದ್ಯದ ದೃಶ್ಯದ 6 ಘಂಟೆಗಳ ಚಿತ್ರೀಕರಣ ನಡೆದಿತ್ತು. ಆಗ ಕುಸ್ತಿ ಪಟುವಾಗಿ ನಾನು ಸುಮಾರು 120 ಕಿಲೋ ತೂಕದ ನನ್ನ ಎದುರಾಳಿಯನ್ನು ಅಖಾಡದಲ್ಲಿ 10 ಬಾರಿ ಎತ್ತಿ ಬೇರೆ-ಬೇರೆ ದಿಕ್ಕಿಗೆ ಎಸೆಯಬೇಕಾಗಿತ್ತು. ಅದೇ ಪ್ರಕಾರ ಎದುರಾಳಿ ಕೂಡ ನನ್ನನ್ನು ಎತ್ತಿ ಬೇರೆ ದಿಕ್ಕಿಗೆ ಎಸೆಯುತ್ತಿದ್ದರು".[ಮದುವೆ ಬಗ್ಗೆ ಪ್ರಚಾರ ಮಾಡಿದ್ದಕ್ಕೆ ಆಕ್ರೋಶಗೊಂಡ ಸಲ್ಮಾನ್ ಖಾನ್]

  "ನಿಜವಾದ ಕುಸ್ತಿ ಸ್ಪರ್ಧೆಯಲ್ಲಿ ಒಬ್ಬ ಪಟುವಿಗೆ ಇಷ್ಟೊಂದು ಬಾರಿ ಎದುರಾಳಿಯನ್ನು ಎತ್ತಿ ಎಸೆಯುವ ಪ್ರಶ್ನೆ ಎದುರಾಗುವುದಿಲ್ಲ. ಆದರೆ ಶೂಟಿಂಗ್ ವಿಷಯಕ್ಕೆ ಬಂದಾಗ ಹಲವಾರು ಬಾರಿ ಟೇಕ್ ತೆಗೆದುಕೊಳ್ಳಬೇಕಾಗುತ್ತದೆ. 120 ಕಿಲೋ ತೂಕದ ವ್ಯಕ್ತಿಯನ್ನು ನಾನು 10 ಬಾರಿ ಎತ್ತಿ ಎಸೆದಿದ್ದೇನೆ."[ಹರ್ಯಾಣದ 'ಸುಲ್ತಾನ್' ಸಲ್ಲೂಗೆ ಟ್ವಿಟ್ಟರಲ್ಲಿ 'ಅಪಮಾನ್']

  "ಒಟ್ಟಾಗಿ ಹೇಳಬೇಕೆಂದರೆ ಈ ಕುಸ್ತಿ ದೃಶ್ಯದ ಶೂಟಿಂಗ್ ನಲ್ಲಿ ನನ್ನ ದೇಹ ಎಷ್ಟು ದುರ್ಬಲವಾಗಿತ್ತು ಎಂದರೆ ಅತ್ಯಾಚಾರಕ್ಕೆ ಒಳಗಾದ ಒಬ್ಬ ಮಹಿಳೆಯ ಸ್ಥಿತಿಯಷ್ಟು ಶೋಚನೀಯವಾಗಿತ್ತು. ರಿಂಗ್ ನಿಂದ ಹೊರಗೆ ನಡೆದುಕೊಂಡು ಹೋಗಲು ಕಷ್ಟ ಆಗುತ್ತಿತ್ತು".

  "ಅಸಾಧ್ಯ ನೋವಿತ್ತು. ಆವಾಗ ನಾನು ರೇಪ್ ಗೆ ಒಳಗಾದ ಮಹಿಳೆಯಂತೆ ನನ್ನ ನೋವನ್ನು ನಾನು ಅನುಭವಿಸಿದೆ" ಎಂದು ಭಾಯ್ ಜಾನ್ ಸಲ್ಮಾನ್ ಖಾನ್ ಅವರು ತೀವ್ರ ಟೀಕೆಗೆ ಗುರಿಯಾಗುವಂತಹ ಹೇಳಿಕೆ ನೀಡಿ ಟ್ವಿಟ್ಟರ್ ನಲ್ಲಿ ಎಲ್ಲರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

  English summary
  Salman Khan, is receiving flak for comparing himself to a raped woman and has shot himself right on the foot. Salman Khan was asked how difficult it was to shoot Sultan, and Salman Khan, ended up saying that after the shoot, that he felt like a 'raped woman' and he 'couldn't walk straight'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X