For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಸಿನಿಮಾ ಪಯಣಕ್ಕೆ 34 ವರ್ಷ: ಭಾಯಿಜಾನ್ ವಿಶೇಷ ಸಂದೇಶ!

  |

  ನಟ ಸಲ್ಮಾನ್ ಖಾನ್ ಬಾಲಿವುಡ್‌ನಲ್ಲಿ ದಶಕಗಳಿಂದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ನಟ. ಸಲ್ಮಾನ್ ಖಾನ್ ಹಲವು ವರ್ಷಗಳಿಂದ ಲಕ್ಷಾಂತರ ಮಂದಿಯ ಹೃದಯದಲ್ಲಿ ಸ್ಟಾರ್ ಆಗಿ ರಾರಾಜಿಸುತ್ತಿದ್ದಾರೆ. ಇಂದಿಗೂ ಕೂಡ ಸಲ್ಮಾನ್ ಖಾನ್‌ ಬಗೆಗಿನ ಕ್ರೇಜ್ ಕಡಿಮೆಯಾಗಿಲ್ಲ.

  ಈಗ ನಟ ಸಲ್ಮಾನ್ ಖಾನ್ ಬಗ್ಗೆ, ಸಿನಿಮಾ ಜರ್ನಿ ಬಗ್ಗೆ ಮಾತನಾಡಲು ಕಾರಣ ಸಲ್ಮಾನ್ ಖಾನ್ ಮೊದಲ ಸಿನಿಮಾ ತೆರೆಕಂಡು 34 ವರ್ಷ ಕಳೆದಿದೆ. ಹಾಗಾಗಿ ಸಲ್ಮಾನ್ ಖಾನ್‌ಗೆ ಅಭಿಮಾನಿಗಳು ಮತ್ತು ಸಿನಿಮಾ ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ.

  ಖಾನ್‌ತ್ರಯರು ಒಟ್ಟಿಗೆ ನಟಿಸಿದರೂ ರಾಕಿಭಾಯ್ ಬರೆದ ಆ ದಾಖಲೆ ಅಳಿಸಲು ಕಷ್ಟ!ಖಾನ್‌ತ್ರಯರು ಒಟ್ಟಿಗೆ ನಟಿಸಿದರೂ ರಾಕಿಭಾಯ್ ಬರೆದ ಆ ದಾಖಲೆ ಅಳಿಸಲು ಕಷ್ಟ!

  ನಟ ಸಲ್ಮಾನ್ ಖಾನ್ ಕೂಡ ತಮ್ಮ ಇಷ್ಟು ವರ್ಷದ ಸಿನಿಮಾ ಜರ್ನಿ ಬಗ್ಗೆ ವಿಶೇಷವಾದ ಸಂದೇಶ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಲ್ಮಾನ್ ಖಾನ್ ತಮ್ಮ ಮುಂದಿನ ಸಿನಿಮಾ 'ಕಿಸಿ ಕ ಭಾಯ್ ಕಿಸಿ ಕಿ ಜಾನ್' ಚಿತ್ರದ ಫಸ್ಟ್ ಲುಕ್ ವಿಡಿಯೋ ಹಂಚಿಕೊಂಡು, ವಿಶೇಷ ಸಂದೇಶ ಬರೆದುಕೊಂಡಿದ್ದಾರೆ.

  34 ವರ್ಷದ ಸಿನಿಮಾ ಪಯಣವನ್ನು ನೆನೆದು ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ. "34 ವರ್ಷಗಳ ಹಿಂದೆ ಈಗ ಮತ್ತು 34 ವರ್ಷಗಳ ನಂತರವೂ, ನನ್ನ ಜೀವನದ ಪ್ರಯಾಣವು 2 ಪದಗಳಿಂದ ಆಗಿದೆ. ಆಗ ನನ್ನೊಂದಿಗೆ ಇದ್ದಿದ್ದಕ್ಕಾಗಿ ಧನ್ಯವಾದಗಳು ಮತ್ತು ನನ್ನೊಂದಿಗೆ ಈಗ ಇರುವುದಕ್ಕಾಗಿ ಧನ್ಯವಾದಗಳು. ಈಗ ಅದನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ." ಎಂದು ಬರೆದುಕೊಂಡಿದ್ದಾರೆ.

  1988ರಲ್ಲಿ ಆಗಸ್ಟ್ 2ರಂದು ಸಲ್ಮಾನ್ ಖಾನ್ ನಟನೆಯ ಮೊದಲ ಸಿನಿಮಾ 'ಬೀವಿ ಹೋ ತೋ ಐಸಿ' ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರ ತೆರೆಕಂಡು 34 ವರ್ಷ ಆಗಿದೆ. ಹಾಗಾಗಿ ಈ ಸಂಭ್ರಮವನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ 'ಮೈನೇ ಪ್ಯಾರ್ ಕಿಯಾ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Salman Khan Shares Special note on completing 34 years in Bollywood, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X