For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ 'ರಾಧೇ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಖರ್ಚಾಗುತ್ತಿರುವ ಹಣವೆಷ್ಟು?

  |
  ಈ ಐಶ್ವರ್ಯಾ ಪ್ರಸಾದ್ ಯಾರು ಗೊತ್ತಾ..? | FILMIBEAT KANNADA

  ದಬಾಂಗ್-3 ಚಿತ್ರದ ಬಳಿಕ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟಿಸುತ್ತಿರುವ ಚಿತ್ರ ರಾಧೇ. ಈ ಚಿತ್ರಕ್ಕೆ ಪ್ರಭುದೇವ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾಂಟೆಡ್, ದಬಾಂಗ್ 3 ನಂತರ ರಾಧೇ ಚಿತ್ರದಲ್ಲಿ ಮೂರನೇ ಬಾರಿಗೆ ಸಲ್ಲುಗೆ ಡೈರೆಕ್ಷನ್ ಮಾಡ್ತಿದ್ದಾರೆ ಪ್ರಭುದೇವ.

  ಮೇ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗುತ್ತಿರುವ ರಾಧೇ ಚಿತ್ರ ಭರದಿಂದ ಚಿತ್ರೀಕರಣ ಮಾಡ್ತಿದೆ. ಈ ಚಿತ್ರವನ್ನು ಸ್ವತಃ ಸಲ್ಮಾನ್ ಖಾನ್ ಮತ್ತು ಸಹೋದರ ಶೋಹಿಲ್ ಖಾನ್ ನಿರ್ಮಿಸುತ್ತಿದ್ದಾರೆ.

  25 ವರ್ಷದ ಬಳಿಕ ಒಂದೆ ಸಿನಿಮಾದಲ್ಲಿ ಶಾರುಖ್-ಸಲ್ಮಾನ್: ಒಟ್ಟಿಗೆ ಕರೆತರುತ್ತಿದ್ದಾರೆ ಬನ್ಸಾಲಿ25 ವರ್ಷದ ಬಳಿಕ ಒಂದೆ ಸಿನಿಮಾದಲ್ಲಿ ಶಾರುಖ್-ಸಲ್ಮಾನ್: ಒಟ್ಟಿಗೆ ಕರೆತರುತ್ತಿದ್ದಾರೆ ಬನ್ಸಾಲಿ

  ಈ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಸುಮಾರು 7.5 ಕೋಟಿ ಖರ್ಚು ಮಾಡುತ್ತಿದ್ದಾರೆ. ಸಿನಿಮಾ ಕೊನೆಯ ಸೀನ್ ನಲ್ಲಿ ಹೆಚ್ಚು ವಿಎಫ್ ಎಕ್ಸ್ ಕೆಲಸವಿದ್ದು, ಅದಕ್ಕೆ ಹೆಚ್ಚು ಹಣ ಖರ್ಚು ಆಗಲಿದೆಯಂತೆ. ಖ್ಯಾತ ಸ್ಟುಡಿಯೋದಲ್ಲಿ ಚಿತ್ರೀಕರಿಸಲಿದ್ದು, ರಣ್ ದೀಪ್ ಹೂಡ ಮತ್ತು ಸಲ್ಮಾನ್ ಖಾನ್ ನಡುವೆ ದೃಶ್ಯ ಇದಾಗಲಿದೆಯಂತೆ.

  ಸಲ್ಮಾನ್ ಮೇಲಿದೆ 1.25 ರೂಪಾಯಿ ಸಾಲ.! ಸೈಕಲ್ ಮೆಕ್ಯಾನಿಕ್ ಮುಂದೆ 'ಭಾಯ್'ಗೆ ಮುಜುಗರ.!ಸಲ್ಮಾನ್ ಮೇಲಿದೆ 1.25 ರೂಪಾಯಿ ಸಾಲ.! ಸೈಕಲ್ ಮೆಕ್ಯಾನಿಕ್ ಮುಂದೆ 'ಭಾಯ್'ಗೆ ಮುಜುಗರ.!

  ಬಾಹುಬಲಿ ದಿ ಬಿಗಿನಿಂಗ್ ಮತ್ತು ಬಾಹುಬಲಿ ದಿ ಕನ್ ಕ್ಲೂಷನ್ ಚಿತ್ರಗಳಲ್ಲಿ ಕೆಲಸ ಮಾಡಿದ ತಂತ್ರಜ್ಞರು ಮತ್ತು ಅದೇ ರೀತಿ ಗ್ರಾಫಿಕ್ಸ್ ಬಳಸಲು ನಿರ್ಧರಿಸಲಾಗಿದೆ. ನೀಲಿ ಅಥವಾ ಹಸಿರು ಬ್ಯಾಗ್ರೌಂಡ್ ನಲ್ಲಿ ಶೂಟ್ ಮಾಡಿ, ಕ್ರೋಮ ಕಿಯಿಂಗ್ ಎಫೆಕ್ಟ್ ಬಳಸುವ ಪ್ಲಾನ್ ಆಗಿದೆ.

  ದೆಹಲಿ, ಕೊಲ್ಕತ್ತಾ, ಜೈಪುರ ಮತ್ತು ಲಕ್ನೌ ಪ್ರದೇಶಗಳಲ್ಲಿ ರಾಧೇ ಚಿತ್ರದ ಶೂಟಿಂಗ್ ಮಾಡಲಾಗುತ್ತಿದೆ. ಕ್ಲೈಮ್ಯಾಕ್ಸ್ ದೃಶ್ಯ ಸುಮಾರು 20 ನಿಮಿಷ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

  ಇನ್ನುಳಿದಂತೆ ದಿಶಾ ಪಟಾನಿ ಈ ಚಿತ್ರದ ನಾಯಕಿಯಾಗಿದ್ದು, ಜಾಕಿ ಶ್ರಾಫ್, ತಮಿಳು ನಟ ಭರತ್, ರಣ್ ದೀಪ್ ಹೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

  English summary
  Bollywood superstar Salman Khan starrer Radhe movie set to release on may 22nd 2020. as per report, salman spend 7.5 crores to climax shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X